ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೀಸನ್ 15ರ ಆರಂಭ ತಾನು ಅಂದು ಕೊಂಡ ರೀತಿ ಆಗಲಿಲ್ಲ. ಆರಂಭಿಕ ಪಂದ್ಯದಲ್ಲಿ ತಂಡ ಸೋಲು ಅನುಭವಿಸಬೇಕಾಯಿತು. ಆದರೆ ಕೆಕೆಆರ್ ವಿರುದ್ಧ ತಂಡ ಭರ್ಜರಿ ಜಯ ದಾಖಲಿಸಿದೆ. ತಂಡದ ಸಮತೋಲನದಲ್ಲಿ ಆಲ್ ರೌಂಡರ್ ಇಲ್ಲದೆ ಇರುವುದು ತಂಡಕ್ಕೆ ತಲೆ ನೋವಾಗಿತ್ತು. ಆದರೆ ಈಗ ಮಧ್ಯಮ ಕ್ರಮಾಂಕ ಹಾಗೂ ಸ್ಪಿನ್ ವಿಭಾಗಕ್ಕೆ ಬಲ ನೀಡಲು ಈ ಆಟಗಾರ ಎಂಟ್ರಿ ನೀಡಿದ್ದಾನೆ.
RCB ಯ ಸ್ಟಾರ್ ಆಲ್‌ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ತಂಡವನ್ನು ಸೇರಿಕೊಂಡಿದ್ದಾರೆ ಮತ್ತು ಶೀಘ್ರದಲ್ಲೇ ಆಡುವ XI ರಲ್ಲಿ ಆಡುವುದನ್ನು ಕಾಣಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತಕ್ಕೆ ಆಗಮಿಸಿದ್ದಾರೆ. ಮ್ಯಾಕ್ಸ್‌ವೆಲ್ ತನ್ನ ಮದುವೆಯ ಕಾರಣದಿಂದ ಇದುವರೆಗೆ ಈ ಋತುವಿನಿಂದ ಹೊರಗುಳಿದಿದ್ದರು. ಮ್ಯಾಕ್ಸ್‌ವೆಲ್ ಫ್ರಾಂಚೈಸಿ ಜೊತೆಗಿನ ಒಡನಾಟದ ಬಗ್ಗೆ ತಂಡವು ತನ್ನ ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿ ನೀಡಿದೆ.
ಆರ್‌ಸಿಬಿ ಮುಂದಿನ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಏಪ್ರಿಲ್ 5 ರಂದು ಆಡಬೇಕಾಗಿದೆ, ಆದರೆ ಮ್ಯಾಕ್ಸ್‌ವೆಲ್ ಈ ಪಂದ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮ್ಯಾಕ್ಸ್‌ವೆಲ್ ಏಪ್ರಿಲ್ 1 ರಂದು ಭಾರತವನ್ನು ತಲುಪಿದ್ದಾರೆ ಮತ್ತು ನಿಯಮಗಳ ಪ್ರಕಾರ, ಅವರು ಮೂರು ದಿನಗಳ ಕಾಲ ಕ್ವಾರಂಟೈನ್ ಈರಬೇಕಾಗುತ್ತದೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾದ ಆದೇಶದಿಂದಾಗಿ ಅವರು ಏಪ್ರಿಲ್ 5 ರ ನಂತರವಷ್ಟೇ ತಂಡ ಸೇರುವ ಸಾಧ್ಯತೆ ಇದೆ.

ಟಿ20 ಮಾದರಿಯಲ್ಲಿ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಬಗ್ಗೆ ಚರ್ಚೆ ಬಂದಾಗಲೆಲ್ಲಾ ಈ ಪಟ್ಟಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹೆಸರು ಬರುತ್ತದೆ. ಮ್ಯಾಕ್ಸ್‌ವೆಲ್ ಕೆಲವೇ ಎಸೆತಗಳಲ್ಲಿ ಆಟವನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮ್ಯಾಕ್ಸ್‌ವೆಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತು ಐಪಿಎಲ್‌ನಲ್ಲಿ ಹಲವು ಬಾರಿ ತನ್ನನ್ನು ತಾನು ಸಾಬೀತುಪಡಿಸಿದ್ದಾರೆ. ಐಪಿಎಲ್ 2013ರ ಹರಾಜಿನಲ್ಲಿ ಮ್ಯಾಕ್ಸ್‌ವೆಲ್ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿತ್ತು. ಆದರೆ ಮುಂಬೈ ಮ್ಯಾಕ್ಸ್ ವೆಲ್ ಗೆ ಕೇವಲ 3 ಪಂದ್ಯಗಳಲ್ಲಿ ಆಡುವ ಅವಕಾಶ ನೀಡಿತ್ತು. ಇದಾದ ನಂತರ ಮ್ಯಾಕ್ಸ್‌ವೆಲ್ ಪಂಜಾಬ್ ತಂಡಕ್ಕಾಗಿ ಕೆಲವು ಋತುಗಳನ್ನು ಆಡಿದರು. ಕಳೆದ ವರ್ಷ ಈ ಬ್ಯಾಟ್ಸ್‌ಮನ್ ಆರ್‌ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ್ದರು.

ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ತನ್ನ ಭಾರತೀಯ ಮೂಲದ ಗೆಳತಿ ವಿನಿ ರಾಮನ್ ಅವರನ್ನು ಮಾರ್ಚ್ 18 ರಂದು ವಿವಾಹವಾದರು. ಮ್ಯಾಕ್ಸ್‌ವೆಲ್ ಮತ್ತು ವಿನ್ನಿ ಇಬ್ಬರೂ ದೀರ್ಘಕಾಲ ಒಟ್ಟಿಗೆ ಇದ್ದರು. ಈ ಜೋಡಿಯು 2020 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಆದರೆ ಕರೋನಾದಿಂದಾಗಿ, ಅವರ ಮದುವೆಯನ್ನು ಮುಂದೂಡಲಾಗಿತ್ತು. ಮತ್ತು ಎರಡು ವರ್ಷಗಳ ನಂತರ, ಇಬ್ಬರೂ ಸಪ್ತ ಪದಿ ತುಳಿದರು. ವಿನಿ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ವಾಸಿಸುತ್ತಾಳೆ. ಮ್ಯಾಕ್ಸ್‌ವೆಲ್ ಕಳೆದ ಋತುವಿನಲ್ಲಿ ಬೆಂಗಳೂರು ತಂಡದೊಂದಿಗೆ ಸಂಬಂಧ ಹೊಂದಿದ್ದರು. ಅವರು 15 ಪಂದ್ಯಗಳಲ್ಲಿ 513 ರನ್ ಬಾರಿಸಿದ್ದಾರೆ. ಬೆಂಗಳೂರು ಪ್ಲೇ ಆಫ್‌ಗೆ ಕೊಂಡೊಯ್ಯುವಲ್ಲಿ ಇವರ ಪ್ರಮುಖ ಪಾತ್ರ ವಹಿಸಿದ್ದರು.