ಭಾರತೀಯ ಶೂಟರ್‌ಗಳು 50 ಮೀಟರ್ ರೈಫಲ್ 3 ಪ್ರೋಜಿಶನ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಬಾಚಿಕೊಳ್ಳುವುದರೊಂದಿಗೆ ಅಂತಾರಾಷ್ಟ್ರೀಯ ಶೂಟಿಂಗ್ ಫೆಡರೇಶನ್ ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದರು.
ಭಾರತದ ಜೋಡಿ ಸಪ್ನಿಲ್ ಕುಸಾಲೆ ಹಾಗೂ ಆಶಿ ಚೌಕ್ಸೆ, ಶನಿವಾರ ಚಿನ್ನದ ಪದಕಕ್ಕಾಗಿ ನಡೆದ 50 ಮೀಟರ್ ರೈಫಲ್ 3 ಪ್ರೋಜಿಶನ್ ಮಿಕ್ಸಡ್ ತಂಡ ಸ್ಪರ್ಧೆಯಲ್ಲಿ ಉಕ್ರೇನ್‌ನ ಸೆರ್ಹಿ ಕುಲಿಶ್ ಹಾಗೂ ದರಿಯಾ ಟೈಖೋವಾ ಜೋಡಿಯನ್ನು 16-12 ರಿಂದ ಸೋಲಿಸಿ ಬಂಗಾರದ ಪದಕ ಪಡೆಯಿತು.
ಇದಕ್ಕೂ ಮುನ್ನ ಭಾರತದ ಮಹಿಳಾ ತಂಡ ಏರ್ ರೈಫಲ್ ತಂಡ ಬಂಗಾರದ ಪದಕ ಪಡೆದಿತ್ತು.
ಅಂತಾರಾಷ್ಟ್ರೀಯ ಶೂಟಿಂಗ್ ಫೆಡರೇಶನ್ ವಿಶ್ವಕಪ್‌ನಲ್ಲಿ ಭಾರತದ ಸ್ಪರ್ಧಿಗಳು ಎರಡು ಚಿನ್ನ ಹಾಗೂ ಮೂರು ಬೆಳ್ಳಿ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದೆ. ಕೊರಿಯಾ ಅಗ್ರ ಸ್ಥಾನ ಹೊಂದಿದೆ.
50 ಮೀಟರ್ ರೈಫಲ್ 3 ಪ್ರೋಜಿಶನ್ ಮಿಕ್ಸಡ್ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಸಪ್ನಿಲ್ ಕುಸಾಲೆ, ಪ್ರಸಕ್ತ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟಾರೆಯಾಗಿ ಮೂರು ಪದಕ ಪಡೆಯುವ ಮೂಲಕ ಹಿರಿಮೆ ಮೆರೆದರು.