Novak Djokovic – 89ನೇ ಪ್ರಶಸ್ತಿ ಗೆದ್ದುಕೊಂಡ ನೊವಾಕ್ ಜಾಕೊವಿಕ್
ಅಗ್ರ ಶ್ರೇಯಾಂಕಿತ ಸರ್ಬಿಯಾದ ನೊವಾಕ್ ಜಾಕೊವಿಕ್ ಅವರು ಪ್ರತಿಷ್ಠಿತ ಎಟಿಪಿ 250 ಟೆಲ್ ಆವಿವ್ ಓಪನ್ ಟೆನಿಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಫೈನಲ್ ಪಂದ್ಯದಲ್ಲಿ ನೊವಾಕ್ ಜಾಕೊವಿಕ್ ಅವರು 6-3, 6-4ರಿಂದ ಕ್ರೊವೇಶಿಯಾದ ಮರಿನ್ ಸಿಲಿಕ್ ಅವರನ್ನು ಪರಾಭವಗೊಳಿಸಿದ್ರು. ಇದರೊಂದಿಗೆ ನೊವಾಕ್ ಜಾಕೊವಿಕ್ ಅವರು ಈ ಋತುವಿನ ಮೂರನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಕಳೆದ ಜುಲೈ ನಲ್ಲಿ ನೊವಾಕ್ ಜಾಕೊವಿಕ್ ಅವರು ವಿಂಬಲ್ಡನ್ ಪ್ರಶಸ್ತಿ ಗೆದ್ದ ಬಳಿಕ ಇದೇ ಮೊದಲ ಬಾರಿ ಸಿಂಗಲ್ಸ್ ಟೂರ್ನಿಯನ್ನು ಆಡಿದ್ದರು.
ನೊವಾಕ್ ಜಾಕೊವಿಕ್ ಅವರು ಇಲ್ಲಿಯವರೆಗೆ ಒಟ್ಟು 21 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಅಲ್ಲದೆ ತನ್ನ ಒಟ್ಟು ಪ್ರಶಸ್ತಿಗಳ ಸಂಖ್ಯೆಯನ್ನು 89ಕ್ಕೇರಿಸಿಕೊಂಡಿದ್ದಾರೆ. ಇನ್ನೊಂದೆಡೆ ಕ್ರೊವೇಶಿಯಾದ ಮರಿನ್ ಸಿಲಿಕ್ ವಿರುದ್ಧ 21 ಬಾರಿ ಕಾದಾಟ ನಡೆಸಿದ್ದು 19 ಬಾರಿ ಗೆಲುವಿನ ನಗೆ ಬೀರಿದ್ದಾರೆ.
ಇದೀಗ ನೊವಾಕ್ ಜಾಕೊವಿಕ್ ಅವರು ಎಟಿಪಿ 500 ಆಸ್ಟಾನಾ ಓಪನ್ ಟೂರ್ನಿಯನ್ನು ಆಡಲಿದ್ದಾರೆ. ಈ ಟೂರ್ನಿ ಸೋಮವಾರದಿಂದ ಆರಂಭವಾಗಲಿದೆ. ಇಲ್ಲಿ ನೊವಾಕ್ ಜಾಕೊವಿಕ್ ಅವರು ಕಾರ್ಲೊಸ್ ಆಕ್ಲಾರಾಝ್ ಮತ್ತು ಡೇನಿಲ್ ಮೆಡ್ವೇಡೇವ್ ಅವರನ್ನು ಎದುರಿಸಲಿದ್ದಾರೆ.