Shafali Verma – ಶಫಾಲಿ ವರ್ಮಾ ಹೆಸರಿಗೆ ಸೇರಿಕೊಂಡಿತ್ತು ಮಹಿಳಾ ಟಿ-೨೦ ಕ್ರಿಕೆಟ್ ನ ವಿಶ್ವ ದಾಖಲೆ…!
ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಶಫಾಲಿ ವರ್ಮಾ ಅವರು ನೂತನ ವಿಶ್ವದಾಖಲೆಯೊಂದನ್ನು ಬರೆದಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ಶಫಾಲಿ ವರ್ಮಾ ಅವರು ಬಾಂಗ್ಲಾ ದೇಶದ ವಿರುದ್ಧ ಬಿರುಸಿನ ಅರ್ಧಶತಕ ಸಿಡಿಸಿದ್ದರು. ಈ ವೇಳೆ ಶಫಾಲಿ ವರ್ಮಾ ಅವರು ಟಿ-೨೦ ಮಹಿಳಾ ಕ್ರಿಕೆಟ್ ನಲ್ಲಿ ಒಂದು ಸಾವಿರ ರನ್ ಪೂರೈಸಿದ್ದ ಹೆಗ್ಗಳಿಕೆಗೆ ಪಾತ್ರರಾದ್ರು. ಅಲ್ಲದೆ ಒಂದು ಸಾವಿರ ರನ್ ದಾಖಲಿಸಿದ್ದ ಅತೀ ಕಿರಿಯ ಆಟಗಾರ್ತಿಯಾಗಿಯೂ ಶಫಾಲಿ ವರ್ಮಾ ಹೊರಹೊಮ್ಮಿದ್ರು.
ಸದ್ಯ ಐಸಿಸಿ ವಿಶ್ವ ಮಹಿಳಾ ಟಿ-೨೦ ಶ್ರೇಯಾಂಕ ಪಟ್ಟಿಯಲ್ಲಿ ಶಫಾಲಿ ಅವರು ಏಳನೇ ಸ್ಥಾನದಲ್ಲಿದ್ದಾರೆ. ಅದೇ ರೀತಿ ಒಂದು ಸಾವಿರ ರನ್ ಪೂರೈಸಿದ್ದ ಕಿರಿಯ ಆಟಗಾರ್ತಿ ಎಂಬ ದಾಖಲೆ ಈ ಹಿಂದೆ ಜೆಮಿಮಾಹ್ ರೊಡ್ರಿಗಸ್ ಅವರ ಹೆಸರಿನಲ್ಲಿತ್ತು. ಜೆಮಿಮಾಹ್ ಅವರು ೨೧ ವಷ್ ೩೨ ದಿನಗಳಲ್ಲಿ ಈ ಸಾಧನೆ ಮಾಡಿದ್ರೆ, ಶಫಾಲಿ ವರ್ಮಾ ಅವರು ೧೮ ವರ್ಷ ೨೫೩ ದಿನಗಳಲ್ಲಿ ಈ ದಾಖಲೆಯೊಂದನ್ನು ಬರೆದಿದ್ದಾರೆ.
ಅಂದ ಹಾಗೇ ಶಫಾಲಿ ವರ್ಮಾ ಅವರು ಟಿ=೨೦ ಕ್ರಿಕೆಟ್ ನಲ್ಲಿ ಒಂದು ಸಾವಿರ ರನ್ ದಾಖಲಿಸಿದ್ದ ಭಾರತದ ಐದನೇ ಆಟಗಾರ್ತಿಯಾಗಿದ್ದಾರೆ. ಈ ಹಿಂದೆ ಮಿಥಾಲಿ ರಾಜ್, ಹರ್ಮನ್ ಪ್ರೀತ್ ಕೌರ್, ಜೆಮಿಮಹ್ ರೋಡ್ರಿಗಸ್ ಮತ್ತು ಸ್ಮೃತಿ ಮಂದನಾ ಈಗ ಶಫಾಲಿ ವರ್ಮಾ ಈ ಸಾಧನೆ ಮಾಡಿದ್ದಾರೆ. ಆದ್ರೆ ಅತೀ ವೇಗವಾಗಿ ಒಂದು ಸಾವಿರ ರನ್ ದಾಖಲಿಸಿದ್ದ ದಾಖಲೆ ಮಿಥಾಲಿ ರಾಜ್ ಹೆಸರಿನಲ್ಲಿದೆ.