Surya Kumar Yadav – ಸೂರ್ಯನ ಪ್ರಭಾವಕ್ಕೆ ಟಿ-20 ದಾಖಲೆಗಳು ಉಡೀಸ್..!
![Surya Kumar Yadav - ಸೂರ್ಯನ ಪ್ರಭಾವಕ್ಕೆ ಟಿ-20 ದಾಖಲೆಗಳು ಉಡೀಸ್..! 3 Suryakumar Yadav team india sports karnataka](http://sportskarnataka.com/wp-content/uploads/2022/09/Suryakumar-Yadav-1-200x300.webp)
ಸೂರ್ಯ ಕುಮಾರ್ ಯಾದವ್. ಸದ್ಯದ ವಿಶ್ವ ಟಿ-20 ಕ್ರಿಕೆಟ್ ನಲ್ಲಿ ಪ್ರಖರ ಸೂರ್ಯನಂತೆ ಕಂಗೋಳಿಸುತ್ತಿದ್ದಾರೆ. ಹೊಡಿಬಡಿ ಆಟದ ಜೊತೆ 360 ಡಿಗ್ರಿಯ ಶೈಲಿಯಲ್ಲಿ ಬ್ಯಾಟ್ ಬೀಸುವ ಸೂರ್ಯ ಕುಮಾರ್ ಯಾದವ್ ಬೌಲರ್ ಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದ್ದಾರೆ.
ಬೌಂಡರಿ -ಸಿಕ್ಸರ್ ಗಳ ಮೂಲಕವೇ ತನ್ನ ಚಿತ್ರ ವಿಚಿತ್ರ ಹೊಡೆತಗಳ ಮೂಲಕ ಅಬ್ಬರಿಸುತ್ತಿರುವ ಸೂರ್ಯನ ಆಟಕ್ಕೆ ಎದುರಾಳಿ ತಂಡ ಮಾತ್ರವಲ್ಲ ಕ್ರಿಕೆಟ್ ಪಂಡಿತರು ಚಕಿತಗೊಳ್ಳುತ್ತಿದ್ದಾರೆ. ಮನಬಂದಂತೆ ಬೌಲರ್ ಗಳನ್ನು ದಂಡಿಸುವ ಸೂರ್ಯ ಈಗ ಟೀಮ್ ಇಂಡಿಯಾದ ರನ್ ಮೇಷಿನ್. ಜೊತೆಗೆ ಟೀಮ್ ಇಂಡಿಯಾದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಗುವಾಹಟಿಯಲ್ಲಿ ನಡೆದಿದ್ದ ಎರಡನೇ ಟಿ-20 ಪಂದ್ಯದಲ್ಲಿ ಸೂರ್ಯ 18 ಎಸೆತಗಳಲ್ಲಿ 50 ರನ್ ಗಳಿಸಿದ್ರು. 22 ರನ್ ಎಸೆತಗಳಲ್ಲಿ 62 ರನ್ ಗಳಿಸಿದ್ದಾಗ ರನೌಟಾದ್ರು. ಹಾಗೇ ಮೊದಲ ಟಿ-20 ಪಂದ್ಯದಲ್ಲೂ ಸ್ಪೋಟಕ ಅರ್ಧಶತಕ ಸಿಡಿಸಿದ್ದರು.
ಅಂದ ಹಾಗೇ ಸೂರ್ಯ ಕುಮಾರ್ ಅವರ ಈ ಸ್ಪೋಟಕ ಇನಿಂಗ್ಸ್ ಗಳಿಂದ ಟಿ-20 ಕ್ರಿಕೆಟ್ ನ ಎರಡು ದಾಖಲೆಗಳು ಅಳಿಸಿ ಹೋಗಿವೆ. ಆ ಎರಡು ದಾಖಲೆಗಳ ಒಡೆಯ ಈಗ ಸೂರ್ಯ ಕುಮಾರ್ ಯಾದವ್
ಹೌದು, ಟಿ-20 ಕ್ರಿಕೆಟ್ ನ ಎಸೆತಗಳ ಲೆಕ್ಕಚಾರದಲ್ಲಿ ವೇಗÀವಾಗಿ ಒಂದು ಸಾವಿರ ರನ್ ಪೂರೈಸಿದ್ದ ದಾಖಲೆ ಈಗ ಸೂರ್ಯ ಕುಮಾರ್ ಯಾದವ್ ಅವರದ್ದಾಗಿದೆ. ಈ ಹಿಂದೆ ಈ ದಾಖಲೆ ಗ್ಲೇನ್ ಮ್ಯಾಕ್ಸ್ ವೆಲ್ ಅವರ ಹೆಸರಿನಲ್ಲಿತ್ತು. ಗ್ಲೇನ್ ಮ್ಯಾಕ್ಸ್ ವೆಲ್ 604 ಎಸೆತಗಳಲ್ಲಿ ಒಂದು ಸಾವಿರ ರನ್ ಗಳಿಸಿದ್ರೆ, ಸೂರ್ಯ ಕುಮಾರ್ ಯಾದವ್ 574 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. ಇನ್ನುಳಿದಂತೆ ಕಾಲಿನ್ ಮುನ್ರೊ 635 ಎಸೆತಗಳಲ್ಲಿ, ಎವಿನ್ ಲೂವಿಸ್ 640 ಎಸೆತಗಳಲ್ಲಿ ಹಾಗೂ ತಿಸಾರ ಪೆರೆರಾ ಅವರು 654 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.
ಇನ್ನು ಟಿ-20 ಕ್ರಿಕೆಟ್ ನ ಪಂದ್ಯಗಳ ಲೆಕ್ಕಚಾರದಲ್ಲಿ ವೇಗವಾಗಿ ಒಂದು ಸಾವಿರ ರನ್ ಗಳಿಸಿದ್ದ ಭಾರತದ ಮೂರನೇ ಆಟಗಾರನಾಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ. ಸೂರ್ಯ ಕುಮಾರ್ ಯಾದವ್ 31 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಇನ್ನು ಈ ವರ್ಷದ ಕ್ಯಾಲೆಂಡರ್ ನಲ್ಲಿ ಸೂರ್ಯ ಕುಮಾರ್ ಯಾದವ್ ಟಿ-20 ಕ್ರಿಕೆಟ್ ನಲ್ಲಿ 50 ಸಿಕ್ಸರ್ ಗಳನ್ನು ಹೊಡೆದಿದ್ದಾರೆ. ಇದು ಕೂಡ ಹೊಸ ದಾಖಲೆಯಗಿದೆ. ಈ ಹಿಂದೆ ಪಾಕಿಸ್ತಾನದ ಮಹಮ್ಮದ್ ರಿಜ್ವಾನ್ 42 ಸಿಕ್ಸರ್ ಗಳನ್ನು ಹೊಡೆದಿದ್ದರು. ನ್ಯೂಜಿಲೆಂಡ್ ನ ಮಾರ್ಟಿನ್ ಗಪ್ಟಿಲ್ 41 ಸಿಕ್ಸರ್ ಗಳನ್ನು ಬಾರಿಸಿದ್ದರು.