ಇತ್ತಿಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ ಗಮನ ಸೆಳೆದ ಬ್ಯಾಟರ್ ಅಂದ್ರ ಅದು ಸೂರ್ಯಕುಮಾರ್ ಯಾದವ್.
ಟೂರ್ನಿಯಲ್ಲಿ ನಾಲ್ಕನೆ ಕ್ರಮಾಂಕದಲ್ಲಿ ಕಣಕ್ಕಿಳಿದು ಸ್ಫೋಟಕ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ 6 ಇನ್ನಿಂಗ್ಸ್ ಗಳಿಂದ 239 ರನ್ ಕಲೆ ಹಾಕಿದ್ದಾರೆ. 59.75 ಬ್ಯಾಟಿಂಗ್ ಎವರೇಜ್ ಹೊಂದದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಹೊಡೆದ ಮೂರನೆ ಬ್ಯಾಟರ್ ಆಗಿದ್ದಾರೆ.
ಅತಿ ಹೆಚ್ಚು ಸ್ಟ್ರೇಕ್ ರೇಟ್ ಹೊಂದಿದ ತಂಡದ ಎರಡನೆ ಬ್ಯಾಟರ್ ಆಗಿದ್ದಾರೆ.ಟೀಮ್ ಇಂಡಿಯಾದ ಸೂರ್ಯ ಕುಮಾರ್ 189.8 ಸ್ಟ್ರೇಕ್ ರೇಟ್ ಹೊಂದಿದ್ದಾರೆ. ಸೌತ್ ಆಫ್ರಿಕಾದ ರೀಲಿ ರುಸೌ 169.87 ಸ್ಟ್ರೈಕ್ ರೇಟ್ ಪಡೆದಿದ್ದಾರೆ.
ಕರ್ಟಿಸ್ ಕ್ಯಾಂಫರ್ 163.63 ಸ್ಟ್ರೇಕ್ ರೇಟ್, ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್ ವೆಲ್ 161.64 ಸ್ಟ್ರೇಕ್ ರೇಟ್, ಮಾರ್ಕಸ್ ಸ್ಟೋಯ್ನಿಸ್ 161.53 ಸ್ಟ್ರೈಕ್ ರೇಟ್, ದಕ್ಷಿಣ ಆಫ್ರಿಕಾದ ಕ್ವಿಂಟಾನ್ ಡಿಕಾಕ್ 161.03,ನ್ಯೂಜಿಲೆಂಡ್ ತಂಡದ ಗ್ಲೇನ್ ಫಿಲೀಪ್ಸ್ 158.26 ಸ್ಟ್ರೇಕ್ ರೇಟ್ ಹೊಂದಿದ ಸ್ಟಾರ್ ಬ್ಯಾಟರ್ಗಳಾಗಿದ್ದಾರೆ.