Thursday, February 9, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

Suresh Raina : ಆಟಕ್ಕೆ ವಿದಾಯ ಹೇಳಿದ ರೈನಾ, ಲೆಜೆಂಡ್ಸ್‌ ಲೀಗ್‌ನಲ್ಲಿ ಕಾಣಿಸಿಕೊಳ್ತಾರಾ ಸ್ಟೈಲಿಷ್‌ ಕ್ರಿಕೆಟರ್‌

September 6, 2022
in Cricket, ಕ್ರಿಕೆಟ್
suresh raina sports karnataka ipl 2022

suresh raina sports karnataka ipl 2022

Share on FacebookShare on TwitterShare on WhatsAppShare on Telegram

ಸುರೇಶ್‌ ರೈನಾ (Suresh Raina), ನೋಡಲು ಮುದ್ದು ಮುದ್ದಾಗಿ ಕಾಣುವ ಯಂಗ್‌ಸ್ಟರ್‌. ರಾಹುಲ್‌ ದ್ರಾವಿಡ್‌ (Rahul Dravid), ಸೌರವ್‌ ಗಂಗೂಲಿ (Sourav Ganguly), ಸಚಿನ್‌ ತೆಂಡುಲ್ಕರ್‌ (Sachin Tendulkar) ರಂತಹ ದಿಗ್ಗಜರ ಜೊತೆ ಆಟ ಆಡಿ ಗಮನ ಸೆಳೆದವರು. ಮಹೇಂದ್ರ ಸಿಂಗ್‌ ಧೋನಿ (MS Dhoni), ವಿರಾಟ್‌ ಕೊಹ್ಲಿ (Virat Kohli) ಜೊತೆ ಗೆಳೆತನ ಸಾಧಿಸಿ ಮೈದಾನದಲ್ಲಿ ಮಿಂಚಿದವರು. 2011ರ ಏಕದಿನ ವಿಶ್ವಕಪ್‌ (2011 ODI WC) ಗೆಲುವಿನಲ್ಲಿ ತನ್ನದೇ ಆದ ರೀತಿಯಲ್ಲಿ ಸದ್ದಿಲ್ಲದೆ ಕೊಡುಗೆ ನೀಡಿದ ಕ್ರಿಕೆಟರ್‌. ಐಪಿಎಲ್‌ನಲ್ಲಿ (IPL) ಮಿ. ಐಪಿಎಲ್‌ (Mr.IPL) ಎಂದೇ ಫೇಮಸ್‌ ಆದ ಸೂಪರ್‌ ಸ್ಟಾರ್‌ ಆದವರು ಸುರೇಶ್‌ ರೈನಾ.

Suresh Raina

ಆಟದಲ್ಲಿ ಎಡಗೈ ಬ್ಯಾಟ್ಸ್‌ಮನ್‌ಗೆ ಬೇಕಾದ ಶೈಲಿಯಿತ್ತು. ನಾಯಕತ್ವದ ಗುಣಗಳಿದ್ದವು. ಸವಾಲು ಎದುರಿಸಿ ಮುನ್ನಡೆಯುವ ಧೈರ್ಯವಿತ್ತು. ರೈನಾ ಅಂದರೆ ಟೀಮ್‌ ಮ್ಯಾನ್‌. ತಂಡಕ್ಕಾಗಿ ಎಲ್ಲವನ್ನೂ ಸಮರ್ಪಿಸಿಕೊಂಡಿದ್ದರು. ಎಲ್ಲಿ ಬೇಕಾದರೂ ಬ್ಯಾಟಿಂಗ್‌ ಮಾಡಬಲ್ಲ ಚಾಣಾಕ್ಷತನವಿತ್ತು. ಮೈನ್‌ ಬೌಲರ್‌ಗಳು ವಿಕೆಟ್‌ ಪಡೆಯಲಿಲ್ಲ ಅಂದರೆ ಬ್ರೇಕ್‌ ಥ್ರೂಗಾಗಿ ಕ್ಯಾಪ್ಟನ್‌ ರೈನಾ ಕೈಗೆ ಬಾಲ್‌ ನೀಡುತ್ತಿದ್ದರು. ಗೋಲ್ಡನ್‌ ಆರ್ಮ್‌ ಚಾರ್ಮ್‌ ಅವರಲ್ಲಿತ್ತು. ಇನ್ನು ಫೀಲ್ಡಿಂಗ್‌ನಲ್ಲಂತೂ ಚಿಗರೆ. ಸ್ಲಿಪ್‌ನಿಂದ ಹಿಡಿದು ಲಾಂಗ್‌ ಆನ್‌ ತನಕ, ಮಿಡ್‌ವಿಕೆಟ್‌ನಿಂದ ಹಿಡಿದು ಥರ್ಡ್‌ ಮ್ಯಾನ್‌ ತನಕ ಎಲ್ಲಿ ಬೇಕೋ ಅಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದರು. ದೇವರು ಬೇಕಾದರೂ ಚೆಂಡು ಮಿಸ್‌ ಮಾಡುತ್ತಿದ್ದರು. ಆದರೆ ರೈನಾ ಇದ್ದಾರೆ ಅಂದರೆ ಒಂದೊಂದು ರನ್‌ಗೂ ಬ್ಯಾಟ್ಸ್‌ಮನ್‌ ಯೋಚಿಸಬೇಕಿತ್ತು.

suresh raina sports karnataka ipl 2022

ಎರಡು ವರ್ಷಗಳ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದ ಎಡಗೈ ಆಟಗಾರ ಈಗ ಐಪಿಎಲ್‌ ಹಾಗೂ ಇತರೆ ದೇಶೀಯ ಕ್ರಿಕೆಟ್‌ನಿಂದಲೂ ದೂರವಾಗುವ (Retirmenet) ನಿರ್ಧಾರ ಪ್ರಕಟಿಸಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ & ಗುಜರಾತ್‌ ಲಯನ್ಸ್‌ ಪರ ರೈನಾ ಕ್ರಿಕೆಟ್‌ ಆಡುತ್ತಿದ್ದರು. IPLನ ಗರಿಷ್ಠ ರನ್‌ಗಳಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ರೈನಾ ಕೂಡ ಒಬ್ಬರಾಗಿದ್ದಾರೆ. 33 ವರ್ಷಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್‌ ಮತ್ತು 35 ವರ್ಷಕ್ಕೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಧೈರ್ಯವಂತ ಕ್ರಿಕೆಟರ್‌ ಇವರು. ತನ್ನ ಜೊತೆಗೆ ಅಂಡರ್‌ 19 ತಂಡದಲ್ಲಿ ಆಡಿದ್ದ ರೋಹಿತ್‌ ಶರ್ಮಾ ಟೀಮ್‌ ಇಂಡಿಯಾದ ನಾಯಕನಾಗಿದ್ದಾರೆ. ಆದರೆ ರೈನಾ ಆಟವನ್ನೇ ಮುಗಿಸಿದ್ದಾರೆ.

dhoni and raina sports karnataka

ರೈನಾ, ವೃತ್ತಿ ಜೀವನದಲ್ಲಿ IPLನಲ್ಲಿ 205 ಪಂದ್ಯಗಳನ್ನು ಆಡಿದ್ದಾರೆ. IPL ಟೂರ್ನಿಯಲ್ಲಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದರು. CSKಯ ಹಲವು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2016- 2017ರಲ್ಲಿ ಗುಜರಾತ್‌ ಪರ ಅವರು ಆಡಿದ್ದರು. ವೃತ್ತಿಜೀವನದಲ್ಲಿ 136.73 ಸ್ಟ್ರೈಕ್ ರೇಟ್‌ನೊಂದಿಗೆ 5,528 ರನ್ ಗಳಿಸಿದ್ದಾರೆ. ಹೆಚ್ಚು ಬೌಲಿಂಗ್ ಮಾಡದಿದ್ದರೂ, ಅವರು 25 ವಿಕೆಟ್ ಕಿತ್ತಿದ್ದಾರೆ. ರೈನಾ ಚಿನ್ನ ತಲಾ ಎಂದೇ ಫೇಮಸ್‌ ಆಗಿದ್ದರು.

Host Broadcaster Confirms Raina As Commentator1200 623988a78268b

ಸುರೇಶ್ ರೈನಾ, ಕ್ರಿಕೆಟ್ ಗೆ ವಿದಾಯ ಹೇಳಿದರೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಧೋನಿ ನಾಯಕತ್ವದಲ್ಲಿ ಮಿಂಚಿದ್ದ ರೈನಾ, ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ದಿನವೇ ವಿದಾಯ ಹೇಳಿದ್ದರು. 226 ODIಗಳಲ್ಲಿ 5,615 ರನ್, 18 ಟೆಸ್ಟ್‌ಗಳಲ್ಲಿ 768 ರನ್ ಮತ್ತು 78 T20I ಗಳಲ್ಲಿ 1,605 ರನ್ ಗಳಿಸಿದ್ದಾರೆ. ಒಂದು ದಶಕದಿಂದ ಟೀಮ್ ಇಂಡಿಯಾದ ವಿಶ್ವಾಸಾರ್ಹ ಆಟಗಾರನಾಗಿ ಮುಂದುವರಿದಿದ್ದ ರೈನಾ, ಫಾರ್ಮ್ ಕಳೆದುಕೊಂಡ ಬಳಿಕ ಆಟದಿಂದ ದೂರ ಉಳಿದಿದ್ದರು. ಟೆಸ್ಟ್‌, ಏಕದಿನ ಮತ್ತು ಟಿ೨೦ ಪಂದ್ಯ ಹೀಗೆ ಮೂರೂ ಫಾರ್ಮೆಟ್‌ಗಳಲ್ಲಿ ಶತಕ ಸಿಡಿಸಿದ ಮೊತ್ತ ಮೊದಲ ಬ್ಯಾಟ್ಸ್‌ಮನ್‌ ಅನ್ನುವ ಹಿರಿಮೆ ರೈನಾ ಅವರದ್ದು. ಒಟ್ಟಿನಲ್ಲಿ ರೈನಾ ಆಟಕ್ಕೆ ಗುಡ್‌ ಬೈ ಹೇಳಿರುವುದು ಬೇಜಾರು ತಂದಿದ್ದರೂ, ಚಿನ್ನ ಥಲಾ ಯಾವತ್ತಿದ್ದರೂ ಚಿನ್ನಥಲಾನೇ.

6ae4b3ae44dd720338cc435412543f62?s=150&d=mm&r=g

admin

See author's posts

Tags: IPLRetirmenetsuresh raina
ShareTweetSendShare
Next Post
Aus VS NZ : ಆಸ್ಟ್ರೇಲಿಯಾದ ಗೆಲುವಿಗೆ “ಗ್ರೀನ್‌” ಸಿಗ್ನಲ್‌!

Aus VS NZ : ಆಸ್ಟ್ರೇಲಿಯಾದ ಗೆಲುವಿಗೆ "ಗ್ರೀನ್‌" ಸಿಗ್ನಲ್‌!

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS 1st Test: 450ನೇ ಟೆಸ್ಟ್‌ ವಿಕೆಟ್‌ ಕಬಳಿಸಿದ ʼಕೇರಂ ಬಾಲ್‌ʼ ಸ್ಪೆಷಲಿಸ್ಟ್‌

IND v AUS 1st Test: 450ನೇ ಟೆಸ್ಟ್‌ ವಿಕೆಟ್‌ ಕಬಳಿಸಿದ ʼಕೇರಂ ಬಾಲ್‌ʼ ಸ್ಪೆಷಲಿಸ್ಟ್‌

February 9, 2023
Asia Mixed Championship ಗಾಯಳು ಸಾತ್ವಿಕ್ ಬದಲು ಧ್ರುವ ಕಪಿಲಾ ಆಯ್ಕೆ

Asia Mixed Championship ಗಾಯಳು ಸಾತ್ವಿಕ್ ಬದಲು ಧ್ರುವ ಕಪಿಲಾ ಆಯ್ಕೆ

February 9, 2023
Indian Boxing ಭಾರತ ಬಾಕ್ಸಿಂಗ್ ತಂಡಕ್ಕೆ ರಾಜ್ಯದ ಕುಟ್ಟಪ್ಪ ಕೋಚ್

Indian Boxing ಭಾರತ ಬಾಕ್ಸಿಂಗ್ ತಂಡಕ್ಕೆ ರಾಜ್ಯದ ಕುಟ್ಟಪ್ಪ ಕೋಚ್

February 9, 2023
INDvAUs ಟೆಸ್ಟ್ ಗೆ ಪದಾರ್ಪಣೆ ಮಾಡಿದ ಸೂರ್ಯ ಕುಮಾರ್

INDvAUs ಟೆಸ್ಟ್ ಗೆ ಪದಾರ್ಪಣೆ ಮಾಡಿದ ಸೂರ್ಯ ಕುಮಾರ್

February 9, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram