ಇದು ಲೀಗ್ ಹಂತದಲ್ಲೇ ಸನ್ ರೈಸರ್ಸ್ ಗೆ ಎದುರಾಗಿರುವ ನಾಕೌಟ್ ಮ್ಯಾಚ್. ಇಲ್ಲಿ ಗೆದ್ದರೆ ಮಾತ್ರ ಲೆಕ್ಕಾಚಾರದ ಆಧಾರದಲ್ಲಿ ಪ್ಲೆ-ಆಫ್ ಚಾನ್ಸ್ ಇದೆ. ಮುಂಬೈ ಸನ್ ರೈಸರ್ಸ್ ಆಟಕ್ಕೆ ಮಂಗಳ ಹಾಡುವ ಪ್ಲಾನ್ನಲ್ಲಿದೆ. ವಾಂಖೆಡೆ ಮೈದಾನ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ಸನ್ರೈಸರ್ಸ್ ತಂಡಕ್ಕೆ ಬೌಲಿಂಗ್ ಸಮಸ್ಯೆ ಅಲ್ಲ. ಆದರೆ 8.74ರ ಎಕಾನಮಿ ರೇಟ್ ಬೌಲರ್ ಗಳ ಮೇಲೆ ಒತ್ತಡ ಹಾಕಿದೆ. ಆದರೆ ಅಸ್ಥಿರ ಬ್ಯಾಟಿಂಗ್ ಲೈನ್ ಅಪ್ ತಂಡವನ್ನು ಒದ್ದಾಟ ನಡೆಸುವ ಹಾಗೆ ಮಾಡಿದೆ.
ಆರಂಭದಲ್ಲಿ ಸನ್ ರೈಸರ್ಸ್ 2 ಸೋಲುಗಳ ಜೊತೆ ಆಟ ಆರಂಭಿಸಿತು. ಆ ಬಳಿಕ ಸತತ 5 ಗೆಲುವು ಕಂಡಿತ್ತು. ಆದರೆ ಕೊನೆಯ 5 ಪಂದ್ಯಗಳಲ್ಲಿ ಮತ್ತೆ ಸೋತಿದೆ. ಸನ್ಗ್ ರೈಸರ್ಸ್ನ ಬ್ಯಾಟಿಂಗ್ ಕೈಕೊಟ್ಟಿದೆ. ಏಡಿಯನ್ ಮಾರ್ಕ್ ರಾಂ, ನಿಕೊಲಸ್ ಪೂರನ್ ಮತ್ತು ರಾಹುಲ್ ತ್ರಿಪಾಠಿ ಮೇಲೆ ಹೆಚ್ಚು ಹೊರೆ ಬಿದ್ದಿದೆ. ನಾಯಕ ಕೇನ್ ವಿಲಿಯಮ್ಸನ್ ವೈಫಲ್ಯ, ಅಭಿಷೇಕ್ ಶರ್ಮಾ ಅಸ್ಥಿರ ಪ್ರದರ್ಶನ ಮತ್ತು ಕೆಳ ಸರದಿಯ ಕಳಪೆ ಪ್ರದರ್ಶನ ದುಬಾರಿ ಆಗಿದೆ.
ಭುವನೇಶ್ವರ್ ಕುಮಾರ್ ಮತ್ತು ವೇಗಿ ಉಮ್ರನ್ ಮಲಿಕ್ ವಿಕೆಟ್ ಬೇಟೆಯಲ್ಲೂ ಮುಂದಿದ್ದಾರೆ. ಆದರೆ ಮಾರ್ಕೋ ಯಾನ್ಸನ್ ಇತ್ತೀಚೆಗೆ ಕೈಕೊಟ್ಟಿದ್ದಾರೆ. ವಾಷಿಂಗ್ಟನ್ ಸುಂದರ್ ಫಿಟ್ನೆಸ್ ತಲೆನೋವು ತಂದಿದೆ. ನಟರಾಜನ್ ಕಳೆದ ಕೆಲವು ಪಂದ್ಯಗಳಲ್ಲಿ ದುಬಾರಿ ಆಗಿದ್ದಾರೆ.
ಮುಂಬೈ ಇಂಡಿಯನ್ಸ್ ಒತ್ತಡವಿಲ್ಲದೆ ಕಣಕ್ಕಿಳಿಯಲಿದೆ. ಮುಂದಿನ ಸೀಸನ್ ನಲ್ಲಿ ಸ್ಥಾನ ಪಡೆಯುವ ಕನಸು ಹಲವು ಆಟಗಾರರಲ್ಲಿದೆ. ರೋಹಿತ್, ಇಶನ್ ಕಿಶನ್ ಹಳೆಯ ಲಯಕ್ಕೆ ಮರಳಲು ಪ್ಲಾನ್ ಮಾಡಿದ್ದಾರೆ. ತಿಲಕ್ ವರ್ಮಾ ಇಂಪ್ರೆಸ್ ಮಾಡಿದ್ದಾರೆ. ಟಿಮ್ ಡೇವಿಡ್ ಪೊಲ್ಲಾರ್ಡ್ ಜಾಗಕ್ಕೆ ಸೂಕ್ತ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಬೌಲಿಂಗ್ನಲ್ಲೂ ಡೇನಿಯಲ್ ಸ್ಯಾಮ್ಸ್, ಜಸ್ ಪ್ರಿತ್ ಬುಮ್ರಾಗೆ ಜೊತೆಗಾರ ಅನ್ನುವುದನ್ನು ತೋರಿಸಿದ್ದಾರೆ. ಒಟ್ಟಿನಲ್ಲಿ ಮುಂಬೈ ಸನ್ ರೈಸರ್ಸ್ ಆಟ ಮುಗಿಸಲು ಪ್ಲಾನ್ ಮಾಡಿದ್ದರೆ, ಕೇನ್ ಬಳಕ ರೇಸ್ನಲ್ಲಿ ಉಳಿಯುವ ಪ್ಲಾನ್ ಮಾಡಿದೆ.