ಟೀಮ್ ಇಂಡಿಯಾದ ಸ್ಪೋಟಕ ಓಪನರ್ ಇಶನ್ ಕಿಶನ್ ಆಟದ ಬಗ್ಗೆ ಎಲ್ಲರಿಗೂ ಗೊತ್ತು. ಸ್ಟೈಲಿಶ್ ಲೆಫ್ಟ್ ಹ್ಯಾಂಡರ್ ತಾಂತ್ರಿಕವಾಗಿಯೂ ಸೂಪರ್ ಆಗಿದ್ದಾರೆ. ಆದರೆ ಅದೃಷ್ಟ ಅನ್ನುವುದೇ ಈತನಿಗಿಲ್ಲ. ದೇಶೀಯ ಕ್ರಿಕೆಟ್ನಿಂದ ಹಿಡಿದು ಐಪಿಎಲ್ ತನಕ ಅವಕಾಶ ಸಿಕ್ಕಾಗಲೆಲ್ಲಾ ಇಶನ್ ಕಿಶನ್ ಮಿಂಚುಹರಿಸುತ್ತಿದ್ದರು. ಆದರೆ ಟೀಮ್ ಇಂಡಿಯಾದಲ್ಲಿ ಮಾತ್ರ ಜಾಗ ಗಟ್ಟಿಯಾಗಿಲ್ಲ.
ಅಂದಹಾಗೇ ಇಶನ್ ಕಿಶನ್ ರಿಷಬ್ ಪಂತ್ಗೆ ಅಂಡರ್ 19 ತಂಡದಲ್ಲಿ ಕ್ಯಾಪ್ಟನ್ ಆಗಿದ್ದವರು. ವಿಕೆಟ್ ಕೀಪಿಂಗ್ನಲ್ಲೂ ರಿಷಬ್ಗಿಂತ ಹೆಚ್ಚು ತಾಂತ್ರಿಕವಾಗಿ ಪಕ್ಕಾ ಇದ್ದಾರೆ. ಜೊತೆಗೆ ಉತ್ತಮ ಫೀಲ್ಡರ್ ಕೂಡ ಹೌದು. ಆದರೆ ರಿಷಬ್ ಫೀಲ್ಡಿಂಗ್ ಬಗ್ಗೆ ಹೆಚ್ಚು ಗೊತ್ತಿಲ್ಲ. ಹೀಗಾಗಿ ಅಂಡರ್ 19 ಸಮಯದಲ್ಲಿ ಇಶನ್ ರಿಷಬ್ಗೆ ಕೀಪಿಂಗ್ ಗ್ಲೌಸ್ ಹಸ್ತಾಂತರ ಮಾಡಿದ್ದರು. ಆದರೆ ಅಲ್ಲಿಂದ ಮುಂದೆ ರಿಷಬ್ ಟೀಮ್ ಇಂಡಿಯಾಕ್ಕೆ ಕೀಪರ್ ಆಗಿ ಎಂಟ್ರಿ ಕೊಟ್ರು. ಇಶನ್ ಕಿಶನ್ ತಂಡದಲ್ಲಿ ಸ್ಥಾನ ಪಡೆಯಲು ಕೂಡ ಒದ್ದಾಟ ನಡೆಸಿದರು.
ಈಗ ಇಶನ್ ಕಿಶನ್ಗೆ ಸತತವಾಗಿ ಅವಕಾಶಗಳು ಸಿಗುತ್ತಿವೆ. ಆದರೆ ಒಂದು ರೀತಿಯಲ್ಲಿ ಬದಲಿ ಆಟಗಾರನ ಸ್ಥಾನದಲ್ಲಿ ಅನ್ನುವುದನ್ನ ಗಮನಿಸಬೇಕು. ಯಾಕಂದರೆ ರಾಹುಲ್ ಅಥವಾ ರೋಹಿತ್ ತಂಡದಲ್ಲಿದರೆ ಈತನಿಗೆ ಜಾಗವಿಲ್ಲ. ರಾಹುಲ್ ಅಥವಾ ರೋಹಿತ್ಗೆ ವಿರಾಮ ಸಿಕ್ಕರೆ ಮಾತ್ರ ಕಿಶನ್ಗೆ ಅವಕಾಶ ಅನ್ನುವ ಹಾಗಾಗಿದೆ.
ಇಶನ್ ಕಿಶನ್ ಟಾಪ್ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡ್ತಾರೆ. ಕೀಪಿಂಗ್ ಕೂಡ ಮಾಡ್ತಾರೆ. ವಯಸ್ಸು ಕಡಿಮೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೆಚ್ಚು ಅವಕಾಶ ಸಿಕ್ಕರೂ ಸಿಗಬಹುದು. ಆದರೆ ಸದ್ಯಕ್ಕಂತೂ ಇಶನ್ ಕಿಶನ್ ಟೀಮ್ ಇಂಡಿಯಾದ ಅನ್ ಲಕ್ಕಿ ಪ್ಲೇಯರ್.