Sri lanka Crisis: ಪೆಟ್ರೋಲ್ ಗಾಗಿ ಹರಸಾಸಹ ಪಟ್ಟ ಆಲ್‌ರೌಂಡರ್ ಕರುಣಾರತ್ನೆ
ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಇದರ ಬಿಸಿ ಸಾಮಾನ್ಯ ನಾಗರಿಕರ ಜೊತೆಗೆ ಈಗ ಅಲ್ಲಿನ ಕ್ರಿಕೆಟಿಗರೂ ತಟ್ಟಿದೆ. ಶ್ರೀಲಂಕಾ ಆಲ್‌ರೌಂಡರ್ ಚಾಮಿಕಾ ಕರುಣಾರತ್ನೆ ಕಾರಿನಲ್ಲಿ ಪೆಟ್ರೋಲ್ ಇಲ್ಲದ ಕಾರಣ ಅಭ್ಯಾಸಕ್ಕೆ ತೆರಳಲು ಸಾಧ್ಯವಾಗಿಲ್ಲ.
ಪೆಟ್ರೋಲ್‌ಗಾಗಿ ಎರಡು ದಿನ ಕಾಯಬೇಕಾಯಿತು. ದೇಶದ ಪ್ರಸ್ತುತ ಪರಿಸ್ಥಿತಿಯಿಂದ ತೀವ್ರ ನಿರಾಶೆಗೊಂಡಿರುವುದಾಗಿ ಕರುಣಾರತ್ನೆ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಎರಡು ದಿನ ಕಾದು ಪೆಟ್ರೋಲ್ ಸಿಕ್ಕಿತು. ದೇಶದಲ್ಲಿ ತೈಲ ಖಾಲಿಯಾಗಿದೆ. ಕಾರು ಇದ್ದರೂ ಅಭ್ಯಾಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ನನಗೆ ಕೇವಲ 10 ಸಾವಿರ ಪೆಟ್ರೋಲ್ ಸಿಕ್ಕಿದೆ, ಅದು ಕೇವಲ 2 ಅಥವಾ 3 ದಿನಗಳವರೆಗೆ ಸಾಲುತ್ತದೆ” ಎಂದಿದ್ದಾರೆ.
ಶ್ರೀಲಂಕಾ ಏಷ್ಯಾಕಪ್ ಆಯೋಜಿಸಲಾಗುವುದು ಮತ್ತು ಈ ವರ್ಷದ ಶ್ರೀಲಂಕಾ ಪ್ರೀಮಿಯರ್ ಲೀಗ್‌ನ ಪಂದ್ಯಗಳನ್ನು ಸಹ ಪ್ರಕಟಿಸಲಾಗಿದೆ ಎಂದು ಕರುಣಾರತ್ನೆ ಹೇಳಿದರು.
ಶೀಘ್ರದಲ್ಲೇ ಎಲ್ಲವೂ ಸರಿಹೋಗಲಿದೆ ಎಂದು ಕರುಣಾರತ್ನ ಅಭಿಪ್ರಾಯಪಟ್ಟಿದ್ದಾರೆ.ದೇಶದ ಪರಿಸ್ಥಿತಿಯ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ, ಆದರೆ ಏನೂ ಸರಿಯಾಗಿ ನಡೆಯುತ್ತಿಲ್ಲ. ಸರಿಯಾದ ಜನರು ಬರುತ್ತಾರೆ (ಅಧಿಕಾರದಲ್ಲಿ) ಮತ್ತು ಒಳ್ಳೆಯ ಸಮಯಗಳು ಬರುತ್ತವೆ ಎಂದು ಭಾವಿಸುತ್ತೇವೆ. ಜನರು ಒಳ್ಳೆಯವರನ್ನು ಮಾತ್ರ ಆಯ್ಕೆ ಮಾಡುತ್ತಾರೆ. ಭಾರತ ನಮ್ಮ ಸಹೋದರ ದೇಶ. ಅವರು ನಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ನಾನು ಅವರಿಗೆ ಕೃತಜ್ಞನ” ಎಂದು ತಿಳಿಸಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ದೇಶವನ್ನು ತೊರೆದು ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ್ದಾರೆ. ರಾಜಪಕ್ಸೆ ಅವರು ದೇಶ ತೊರೆದ ಬಳಿಕ ಶ್ರೀಲಂಕಾದವರ ಆಕ್ರೋಶ ಭುಗಿಲೆದ್ದಿದೆ. ರಾಜಧಾನಿ ಕೊಲಂಬೊದ ಬೀದಿಗಳಲ್ಲಿ ಪ್ರತಿಭಟನಾಕಾರರು ತೀವ್ರವಾಗಿ ಗಲಭೆ ನಡೆಯುತ್ತಿದೆ. ಜನರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.