P.V.Sindhu – ಸಿಂಧು ಮುಡಿಗೆ ಮತ್ತೊಂದು ಪ್ರಶಸ್ತಿಯ ಗರಿ..!

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರು ಸಿಂಗಾಪುರ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಪಿ.ವಿ. ಸಿಂಧು ಅದ್ಭುತ ಆಟವನ್ನು ಪ್ರದರ್ಶಿಸಿದ್ರು.
ತಾಳ್ಮೆಯ ಜೊತೆಗೆ ಆಕ್ರಮಣಕಾರಿ ಆಟವನ್ನು ಆಡಿದ್ದ ಸಿಂಧು ಅವರ ಮನಮೋಹಕ ಆಟಕ್ಕೆ ಚೀನಾದ ವಾಂಗ್ ಝಿ ಯಿ ಅವರನ್ನು ಅಚ್ಚರಿಗೊಳಿಸಿದ್ರು.
ಫೈನಲ್ ಪಂದ್ಯದಲ್ಲಿ ಸಿಂಧು ಅವರು 21-19, 11-21, 21-15ರಿಂದ ವಾಂಗ್ ಝಿ ಯಿ ಅವರನ್ನು ಪರಾಭವಗೊಳಿಸಿದ್ರು.
22ರ ಹರೆಯದ ಚೀನಾದ ವಾಂಗ್ ಝಿ ಯಿ ಅವರು ಏಷ್ಯಾನ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು.

ಈ ಗೆಲುವಿನ ಮೂಲಕ ಪಿ.ವಿ. ಸಿಂಧು ಅವರು ಮುಂಬರುವ ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ. ಜುಲೈ 28ರಿಂದ ಕಾಮನ್ ವೆಲ್ತ್ ಗೇಮ್ಸ್ ನಡೆಯಲಿದೆ.
ಅಂದ ಹಾಗೇ ಪಿ.ವಿ. ಸಿಂಧು ಅವರು ಈ ಋತುವಿನಲ್ಲಿ ಮೂರನೇ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಹಿಂದೆ ಸೈಯ್ಯದ್ ಮೋದಿ ಇಂಟರ್ ನ್ಯಾಷನಲ್ ಮತ್ತು ಸ್ವಿಸ್ ಓಪನ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. ಈ ಹಿಂದೆ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಸಿಂಧು ಅವರು ತನ್ನದಾಗಿಸಿಕೊಂಡಿದ್ದರು. ಅಲ್ಲದೆ ಎರಡು ಒಲಿಂಪಿಕ್ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದರು.
27ರ ಹರೆಯದ ಪಿ.ವಿ. ಸಿಂಧು ಅವರು ಅದ್ಭುತವಾದ ಲಯದಲ್ಲಿದ್ದಾರೆ. ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸಿದ್ರೆ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವುದರಲ್ಲಿ ಎರಡು ಮಾತಿಲ್ಲ. ಅಭಿನಂದನೆಗಳು ಪಿ.ವಿ. ಸಿಂಧು.