ಅತಿಥೇಯ ಶ್ರೀಲಂಕಾ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಏಕದಿನ ಸರಣಿಯ 3ನೇ ಪಂದ್ಯ ಇಂದು ನಡೆಯಲಿದೆ. ಕೊಲಂಬೊದಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಉಭಯ ತಂಡಗಳ ಭರ್ಜರಿ ಸಿದ್ಧತೆ ಮಾಡಿಕೊಂಡಿವೆ.
ಐದು ಪಂದ್ಯಗಳ ಸರಣಿಯಲ್ಲಿ ಎರಡು ತಂಡಗಳು ತಲಾ 1 ಪಂದ್ಯವನ್ನು ಗೆದ್ದಿದ್ದು, ಇಂದಿನ ಪಂದ್ಯ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸುವ ಲೆಕ್ಕಾಚಾರದಲ್ಲಿವೆ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದ ಆಸೀಸ್, ಸೋಲಿನ ಆಘಾತ ಅನುಭವಿಸಿತು. ಹೀಗಾಗಿ ಕಳೆದ ಪಂದ್ಯದ ತಪ್ಪುಗಳನ್ನು ಸರಿಪಡಿಸಿಕೊಂಡು ಕಣಕ್ಕಿಳಿಯಲು ಆಸೀಸ್ ಸಜ್ಜಾಗಿದೆ. ಇಂದಿನ ಪಂದ್ಯಕ್ಕೆ ಎರಡು ತಂಡಗಳು ಯಾವುದೇ ಬದಲಾವಣೆ ಇಲ್ಲದೆ ಆಡುವ ಸಾಧ್ಯತೆ ಇದೆ.
ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ಗೆಲುವಿನ ಲಯ ಕಂಡುಕೊಂಡಿರುವ ಶ್ರೀಲಂಕಾ, ಇದೇ ಆತ್ಮವಿಶ್ವಾಸದೊಂದಿಗೆ ಆಡಲಿದೆ. 2023ರ ವಿಶ್ವಕಪ್ ದೃಷ್ಟಿಯಲ್ಲಿ ಶ್ರೀಲಂಕಾ ಪಾಲಿಗೆ ಈ ಸರಣಿ ಅತ್ಯಂತ ಮಹತ್ವದ್ದಾಗಿದ್ದು, ಇಂದಿನ ಪಂದ್ಯದಲ್ಲಿ ಗೆದ್ದು ಮುನ್ನಡೆ ಸಾಧಿಸುವ ನಿರೀಕ್ಷೆ ಹೊಂದಿದೆ. ಆದರೆ ಶ್ರೀಲಂಕಾ ತಂಡದ ಆಲ್ರೌಂಡರ್ ವನಿಂದು ಹಸರಂಗ ಅಲಭ್ಯತೆ ತಂಡಕ್ಕೆ ಹಿನ್ನಡೆ ಮೂಡಿಸಿದೆ. ಎರಡು ತಂಡದಲ್ಲೂ ಬೌಲರ್ಗಳು ಉತ್ತಮ ಪ್ರದರ್ಶನ ಬರುತ್ತಿದ್ದ ಬ್ಯಾಟಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ಹೊರಬರುತ್ತಿಲ್ಲ. ಸಂಘಟಿತ ಪ್ರದರ್ಶನದಿಂದ ಗೆಲುವು ಸಾಧಿಸಿರುವ ಎರಡು ತಂಡದ ಬ್ಯಾಟಿಂಗ್ ವಿಭಾಗದ ಮೇಲೆ ಹೆಚ್ಚಿನ ಒತ್ತಡ ಇದೆ.