Sri Lanka crisis – ಪೆಟ್ರೋಲ್ ಗಾಗಿ ಎರಡು ದಿನ ಕ್ಯೂನಲ್ಲಿ ನಿಂತ ಲಂಕಾ ಕ್ರಿಕೆಟಿಗ

ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾ ಜನತೆ ಪ್ರತಿ ದಿನವೂ ಪರದಾಡುತ್ತಿದ್ದಾರೆ. ದಿನ ನಿತ್ಯದ ವಸ್ತುಗಳನ್ನು ಖರೀದಿ ಮಾಡಲು ದುಡ್ಡಿಲ್ಲ. ದುಡ್ಡು ಇದ್ರೂ ಸಿಗುತ್ತಿಲ್ಲ. ತಿನ್ನುವ ಆಹಾರ, ಕುಡಿಯುವ ನೀರಿಗಾಗಿ ಕೂಡ ಜನ ಪರತಪಿಸುತ್ತಿದ್ದಾರೆ.
ಈ ಎಲ್ಲಾ ಸಮಸ್ಯೆಗಳನ್ನು ಅನುಭವಿಸುತ್ತಿರುವ ಬಡ ಜನರು ಮಾತ್ರವಲ್ಲ. ಮಧ್ಯಮ ವರ್ಗ, ಶ್ರೀಮಂತರು, ಸೆಲೆಬ್ರಿಟಿಗಳು ಎಲ್ಲರು ಪ್ರತಿ ದಿನ ಪಡುವ ಯಾತನೆಯಾಗಿದೆ.
ಇದೀಗ ಶ್ರೀಲಂಕಾ ಕ್ರಿಕೆಟಿಗ ಚಾಮಿಕಾ ಕರುಣರತ್ನೆ ಅವರು ತಮಗೆ ಆಗಿರುವ ಅನುಭವವನ್ನು ಹೇಳಿಕೊಂಡಿದ್ದಾರೆ.
ಪೆಟ್ರೋಲ್ ಗಾಗಿ ನಾನು ಎರಡು ದಿನ ಕ್ಯೂನಲ್ಲಿ ನಿಂತಿದ್ದೆ. ಕೊನೆಗೂ 10 ಸಾವಿರ ಕೊಟ್ಟು ಪೆಟ್ರೋಲ್ ಹಾಕಿಸಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
ನಾವು ಕೊಲೊಂಬೊದಲ್ಲಿ ಅಭ್ಯಾಸ ನಡೆಸುತ್ತಿದ್ದೇವೆ. ಅಲ್ಲದೆ ಬೇರೆ ಕ್ರಿಕೆಟ್ ಲೀಗ್ ಪಂದ್ಯಗಳನ್ನು ಆಡಲು ಓಡಾಟ ನಡೆಸಬೇಕಾಗುತ್ತದೆ. ಹೀಗಾಗಿ ನಾನು ಕಳೆದ ಎರಡು ದಿನಗಳಿಂದ ಪೆಟ್ರೋಲ್ ಗಾಗಿ ಕ್ಯೂನಲ್ಲಿ ನಿಂತು ಖರೀದಿ ಮಾಡಿದ್ದೇನೆ ಎಂದು ಚಾಮಿಕಾ ಕರುಣರತ್ನೆ ಹೇಳಿದ್ದಾರೆ.
#WATCH | Sri Lankan cricketer Chamika Karunaratne speaks to ANI; says, "We've to go for practices in Colombo&to different other places as club cricket season is on but I've been standing in queue for fuel for past 2 days. I got it filled for Rs 10,000 which will last 2-3 days…" pic.twitter.com/MkLyPQSNbZ
— ANI (@ANI) July 16, 2022
ಇದೇ ವೇಳೆ ಚಾಮಿಕ ಕರುಣರತ್ನೆ ಅವರು ಭಾರತ ನೀಡಿರುವ ಸಹಾಯವನ್ನು ಹೇಳಿಕೊಂಡಿದ್ದಾರೆ.
ಭಾರತ ನಮ್ಮ ಸಹೋದರ ರಾಷ್ಟ್ರ. ನಮಗೆ ಭಾರತದಿಂದ ತುಂಬಾನೇ ಸಹಾಯವಾಗಿದೆ. ನಮ್ಮ ಸಮಸ್ಯೆಗೆ ಸ್ಪಂದಿಸಿದ್ದಾರೆ. ಭಾರತಕ್ಕೆ ನಾವು ಅಭಾರಿಯಾಗಿದ್ದೇವೆ. ಧನ್ಯವಾದ ಎಂದು ಕರುಣರತ್ನೆ ಅವರು ಭಾರತ ನೀಡಿರುವ ಸಹಾಯವನ್ನು ನೆನಪಿಸಿಕೊಂಡಿದ್ದಾರೆ.
ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದ್ರೂ ಕ್ರಿಕೆಟ್ ಮೇಲಿನ ಪ್ರೀತಿಯನ್ನು ಮಾತ್ರ ಸಿಂಹಳಿಯರು ಬಿಟ್ಟುಕೊಟ್ಟಿಲ್ಲ.
ಇತ್ತೀಚೆಗೆ ಆಸ್ಟ್ರೇಲಿಯಾ ಲಂಕಾ ನೆಲದಲ್ಲಿ ಟೆಸ್ಟ್, ಏಕದಿನ ಮತ್ತು ಟಿ-20 ಸರಣಿಯನ್ನಾಡಿತ್ತು.
ಅದೇ ರೀತಿ ಭಾರತ ಮಹಿಳಾ ತಂಡ ದ್ವೀಪಕ್ಷಿಯ ಸರಣಿಯನ್ನು ಆಡಿದೆ.