ಟೀಮ್ ಇಂಡಿಯಾ (Team India) ಮತ್ತು ಇಂಗ್ಲೆಂಡ್ (England) ನಡುವಿನ ಅಂತಿಮ ಏಕದಿನ ಪಂದ್ಯಕ್ಕೆ (ODI Match) ವೇದಿಕೆ ಸಿದ್ಧವಾಗಿದೆ. ಮ್ಯಾಂಚೆಸ್ಟರ್ನಲ್ಲಿ ಯಾರು ಮ್ಯಾಜಿಕ್ ಮಾಡ್ತಾರೆ ಅನ್ನುವ ಕುತೂಹಲವಿದೆ. ಈ ಪಂದ್ಯ ಗೆದ್ದವರು ಸರಣಿ ಗೆದ್ದ ಹಿರಿಮೆ ಜೊತೆಗೆ ಕಪ್ ಎತ್ತಿ ಸಂಭ್ರಮಿಸಲಿದ್ದಾರೆ.
ಮೊದಲ ಪಂದ್ಯದಲ್ಲಿ ಭಾರತ ಅದ್ಭತ ಬೌಲಿಂಗ್ ಪ್ರದರ್ಶನದ ಜೊತೆಗೆ ಬ್ಯಾಟಿಂಗ್ನಲ್ಲೂ ಮಿಂಚಿದ ಭಾರತ 10 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತ್ತು. ಆದರೆ ಲಾರ್ಡ್ಸ್ನಲ್ಲಿ ನಡೆದ 2ನೇ ಪಂದ್ಯದಲ್ಲಿ ಭಾರತ ವೈಫಲ್ಯ ಕಂಡಿತ್ತು. ಮೇಲುಗೈ ಸಾಧಿಸಿದ ಇಂಗ್ಲೆಂಡ್ 100 ರನ್ಗಳಿಂದ ಪಂದ್ಯ ಗೆದ್ದು ಸರಣಿಯಲ್ಲಿ (ODI Series)1-1ರ ಸಮಬಲ ಸಾಧಿಸಿತ್ತು. ಈಗ 3ನೇ ಪಂದ್ಯದ ಕಥೆ. ಇಲ್ಲಿ ಗೆದ್ದವರಿಗೆ ಸರಣಿ ಗೆಲುವಿನ ಬಹುಮಾನ ಸಿಗುತ್ತದೆ.
ಅಂದಹಾಗೇ ಟೀಮ್ ಇಂಡಿಯಾ ಕೊನೆಯ ಪಂದ್ಯಕ್ಕೆ ಬದಲಾವಣೆಗೆ ಮಾಡುವುದು ಸಂಶಯ. ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಶಿಖರ್ ಧವನ್ ಮೊದಲ ಪಂದ್ಯದಲ್ಲಿ ಆಡಿದಂತೆ ಆಡುವುದು ಅನಿವಾರ್ಯ. ವಿರಾಟ್ ಕೊಹ್ಲಿಯಿಂದ (Virat Kohli) ಮ್ಯಾಜಿಕಲ್ ಇನ್ನಿಂಗ್ಸ್ ನಿರೀಕ್ಷೆ ಹೆಚ್ಚಿದೆ. ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯಾ, ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾಗೂ ಬ್ಯಾಟಿಂಗ್ ತಾಕತ್ತು ಇದೆ.
ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಇಂಗ್ಲೆಂಡ್ನ ಬ್ಯಾಟಿಂಗ್ ಶಕ್ತಿಯನ್ನು ಟೆಸ್ಟ್ ಮಾಡಲಿದ್ದಾರೆ. ಪ್ರಸಿಧ್ ಕೃಷ್ಣಗೆ ವಿಕೆಟ್ ಬೀಳುತ್ತಿಲ್ಲ. ಯಜುವೇಂದ್ರ ಚಹಲ್ ಸ್ಪಿನ್ ಮೂಲಕ ಎದುರಾಳಿಯನ್ನು ಕಾಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯಾ ಮತ್ತುಜಡೇಜಾ ಬೌಲಿಂಗ್ನಲ್ಲೂ ಕೈ ಜೋಡಿಸುತ್ತಾರೆ.
ಲಾರ್ಡ್ಸ್ನಲ್ಲಿ ಇಂಗ್ಲೆಂಡ್ ಗೆದ್ದರೂ ಸಾಕಷ್ಟು ಸುಧಾರಿಸಿಕೊಳ್ಳಬೇಕಿದೆ. ಜೇಸನ್ ರಾಯ್ ರನ್ ಬರ ದುಬಾರಿ ಆಗುತ್ತಿದೆ. ಜಾನಿ ಬೇರ್ ಸ್ಟೋವ್ ಮತ್ತು ಬೆನ್ ಸ್ಟೋಕ್ಸ್ ಕೂಡ ಲಯಕ್ಕೆ ಮರಳಬೇಕಿದೆ. ಜೋ ರೂಟ್ ಬದಲು ಹ್ಯಾರಿ ಬ್ರೂಕ್ ಆಡುವ ಸಾಧ್ಯತೆ ಇದೆ. ಜೋಸ್ ಬಟ್ಲರ್ ಮತ್ತು ಲಿವಿಂಗ್ ಸ್ಟೋನ್ ಮೇಲೆ ಹೆಚ್ಚು ನಂಬಿಕೆ ಇದೆ. ಮೊಯಿನ್ ಅಲಿಯೂ ಟ್ರಂಪ್ ಕಾರ್ಡ್ ಆಲ್ರೌಂಡರ್.
ಡೇವಿಡ್ ವಿಲ್ಲಿ, ಬೈಡನ್ ಕಾರ್ಸ್, ಕ್ರೆಗ್ ಓವರ್ಟನ್, ಬೆನ್ ಸ್ಟೋಕ್ಸ್ ಮತ್ತು ಮೊಯಿನ್ ಅಲಿ ಬೌಲಿಂಗ್ನಲ್ಲಿ ಮತ್ತಷ್ಟು ಪರಿಣಾಮಕಾರಿ ಆದರೆ ಇಂಗ್ಲೆಂಡ್ ಚಿಂತೆ ದೂರವಾಗಲಿದೆ.
ಭಾರತಕ್ಕೆ ಮ್ಯಾಂಚೆಸ್ಟರ್ ಪಿಚ್ನದ್ದೇ ಚಿಂತೆ. ಸ್ವಿಂಗ್ ಹೆಚ್ಚಿರುವ ಕಡೆ ಭಾರತೀಯ ಬ್ಯಾಟ್ಸ್ಮನ್ಗಳು ಎಡವಿದ್ದಾರೆ. ಹೀಗಾಗಿ ಇಂಗ್ಲೆಂಡ್ ಈ ಬಗ್ಗೆ ಕಣ್ಣಿಟ್ಟಿದೆ. ಒಟ್ಟಿನಲ್ಲಿ ಒಂದು ರೋಚಕ ಪಂದ್ಯಕ್ಕೆ ವೇದಿಕೆ ಸೃಷ್ಟಿಯಾಗಿದೆ. ಯಾರು ಗೆಲ್ತಾರೆ ಅನ್ನುವ ಕುತೂಹಲ ಹೆಚ್ಚಿದೆ.