Wednesday, March 22, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Asia Cup 2022

ಶ್ರೀಲಂಕಾ ಮುಡಿಗೆ Asia Cup ಕಿರೀಟ

ಫೈನಲ್ ನಲ್ಲಿ ಮುಗ್ಗರಿಸಿದ ಪಾಕಿಸ್ತಾನ, ಜಯದಲ್ಲಿ ಮಿಂಚಿದ ವನಿಂದು ಹಸರಂಗ, ರಾಜಪಕ್ಸೆ

September 12, 2022
in Asia Cup 2022, Cricket, ಏಷ್ಯಾ ಕಪ್ 2022, ಕ್ರಿಕೆಟ್
Sri Lanka won Asia Cup

Sri Lanka won Asia Cup

Share on FacebookShare on TwitterShare on WhatsAppShare on Telegram

ಏಷ್ಯಾಕಪ್ (Asia Cup) ಟಿ-20 ಟೂರ್ನಿಯಲ್ಲಿ ಫೈನಲ್ ನಲ್ಲಿ ಶ್ರೀಲಂಕಾ (Sri Lanka) 23 ರನ್ ಗಳಿಂದ ಪಾಕಿಸ್ತಾನ (Pakistan) ತಂಡವನ್ನು ಮಣಿಸಿದೆ. ಮಹತ್ವದ ಪಂದ್ಯದಲ್ಲಿ ಶ್ರೀಲಂಕಾ ಪರ ವನಿಂದು ಹಸರಂಗ (36 ರನ್ ಹಾಗೂ 34ಕ್ಕೆ 3) ಹಾಗೂ ಬಾನುಕ ರಾಜಪಕ್ಸೆ (ಅಜೇಯ 71 ರನ್) ಇವರು ಜಯದಲ್ಲಿ ಮಿಂಚಿದರು. ಯಾರೂ ಊಹಿಸಿದ ರೀತಿ ಪ್ರದರ್ಶನ ನೀಡಿದ ಲಂಕಾ ಆರನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ (Sri Lanka), ನಿಗದಿತ 20 ಓವರ್‌ಗಳಲ್ಲಿ ಆರು  ವಿಕೆಟ್ ಕಳೆದುಕೊಂಡು 171 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಾಕ್ (Pakistan) 20 ಓವರ್ ಗಳಲ್ಲಿ 147 ರನ್ ಗೆ ಸರ್ವಪತನ ಹೊಂದಿತು.

 

Danushka Gunathilaka

ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡದ ಪತುನ ನಿಸ್ಸಾಂಕ (8), ಕುಸಾಲ್ ಮೆಂಡಿಸ್ (0) ಮಹತ್ವದ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದ ದನುಶಕ ಗುಣತಿಲಕ (1) ಸಹ ಹಾರೀಸ್ ರೌಫ್ ತೋಡಿದ ಖೆಡ್ಡಾಗೆ ಬಲಿಯಾದರು.

Dhananjaya de Silva

ಮಧ್ಯಮ ಕ್ರಮಾಂಕದಲ್ಲಿ ಧನಂಜಯ್ ಡಿ ಸಿಲ್ವಾ 21 ಎಸೆತಗಳಲ್ಲಿ 28 ರನ್ ಬಾರಿಸಿ ನಾಲ್ಕನೇ ವಿಕೆಟ್ ರೂಪದಲ್ಲಿ ಔಟ್ ಆದರು. ದಸುನ್ ಶನಕ (2) ಸಹ ಬೇಗನೆ ವಿಕೆಟ್ ಒಪ್ಪಿಸಿದರು.

Bhanuka Rajapaksa

58 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಬಾನುಕ ರಾಜಪಕ್ಸೆ (Bhanuka Rajapaksa) ಹಾಗೂ ವನಿಂದು ಹಸರಂಗ ತಂಡಕ್ಕೆ ಕೊಂಚ ಆಧಾರವಾದರು. ಈ ಜೋಡಿ ತಂಡ ಉತ್ತಮ ಮೊತ್ತ ಕಲೆ ಹಾಕುವಲ್ಲಿ ಶ್ರಮಿಸಿತು. ಈ ಜೋಡಿ 36 ಎಸೆತಗಳಲ್ಲಿ 58 ರನ್ ಬಾರಿಸಿದರು. ವನಿಂದು ಹಸರಂಗ 21 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 36 ರನ್ ಸಿಡಿಸಿದರು.

Wanindu Hasaranga

ಚಮಿಕ ಕರುಣರತ್ನೆ (14) ಹಾಗೂ ಬಾನುಕ ರಾಜಪಕ್ಸೆ ಜೋಡಿ 31 ಎಸೆತಗಳಲ್ಲಿ 54 ರನ್ ಜೋಡಿಸಿದರು. ಬಾನುಕ ರಾಜಪಕ್ಸೆ 45 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಯಾದಿಂದ ಅಜೇಯ 71 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು.

ಶ್ರೀಲಂಕಾ 20 ಓವರ್ ಗಳಲ್ಲಿ 6 ವಿಕೆಟ್ ಗೆ 170 ರನ್ ಸೇರಿಸಿತು. ಪಾಕ್ ಪರ ಹಾರೀಸ್ ರೌಫ್ 29 ರನ್ ನೀಡಿ ಮೂರು ವಿಕೆಟ್ ಪಡೆದರು.

Pramod Madushan

ಗುರಿಯನ್ನು ಬೆನ್ನಟ್ಟಿದ ಪಾಕ್ ತಂಡದ ಆರಂಭ ಕಳಪೆಯಾಗಿತ್ತು. ನಾಯಕ ಬಾಬರ್ ಅಜಮ್ (5), ಫಖಾರ್ ಜಮಾನ್ (0) ರನ್ ಕಲೆ ಹಾಕುವಕಲ್ಲಿ ವಿಫಲರಾದರು. ಬೇಗನೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಮೊಹಮ್ಮದ್ ರಿಜ್ವಾನ್ ಹಾಗೂ ಇಫ್ತಿಖಾರ್ ಅಹ್ಮದ್ ಜೋಡಿ ಮನಮೋಹಕ ಆಟದ ಪ್ರದರ್ಶನ ನೀಡಿತು. ಈ ಜೋಡಿ 59 ಎಸೆತಗಳಲ್ಲಿ 71 ರನ್ ಸೇರಿಸಿತು.

345865

ಇಪಿಖಾರ್ 32 ರನ್ ಬಾರಿಸಿದ್ದಾಗ ಪ್ರಮೋದ್ ಮದುಶನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

ಆರಂಭಿಕ ಮೊಹಮ್ಮದ್ ರಿಜ್ವಾನ್ 49 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 55 ರನ್ ಬಾರಿಸಿ ಸೋಲಿನಲ್ಲಿ ಮಿಂಚಿದರು. ಉಳಿದ ಬ್ಯಾಟರ್ ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.

Wanindu Hasaranga 1

ವನಿಂದು ಹಸರಂಗ ಇನ್ನಿಂಗ್ಸ್ ನ 17ನೇ ಪಂದ್ಯ ಬೌಲ್ ಮಾಡಿ ಮೂರು ವಿಕೆಟ್ ಪಡೆದು ಪಾಕ್ ತಂಡಕ್ಕೆ ಶಾಕ್ ನೀಡಿದರು.

345871

Sri Lanka, Asia Cup, Pakistan, T-20

74d0916721d44f8d60ce477de639569c?s=150&d=mm&r=g

vinayaka

See author's posts

Tags: Asia CupPakistansri Lankat-20Win
ShareTweetSendShare
Next Post
Carlos Alcaraz

US open 2022- Carlos Alcaraz ಟೆನಿಸ್ ಜಗತ್ತಿಗೆ ಚಾಂಪಿಯನ್ ಆಟಗಾರನ ಎಂಟ್ರಿ..! ಯುಎಸ್ ಓಪನ್ ಗೆದ್ದ ಸ್ಪೇನ್ ನ ಹೊಸ ಗೂಳಿ..!

Leave a Reply Cancel reply

Your email address will not be published. Required fields are marked *

Stay Connected test

Recent News

WPL ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಆರ್‍ಸಿಬಿ

WPL ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಆರ್‍ಸಿಬಿ

March 22, 2023
Tri Nation Football ಇಂದಿನಿಂದ ಅಂತಾರಾಷ್ಟ್ರೀಯ ತ್ರಿಕೋನ ಫುಟ್ಬಾಲ್ ಟೂರ್ನಿ 

Tri Nation Football ಇಂದಿನಿಂದ ಅಂತಾರಾಷ್ಟ್ರೀಯ ತ್ರಿಕೋನ ಫುಟ್ಬಾಲ್ ಟೂರ್ನಿ 

March 22, 2023
Women’s Boxing Championship ಕ್ವಾರ್ಟರಗೆ ನಿಖಾತ್, ನೀತು ಮನೀಶಾ

Women’s Boxing Championship ಕ್ವಾರ್ಟರಗೆ ನಿಖಾತ್, ನೀತು ಮನೀಶಾ

March 22, 2023
INDvsAus ಇಂದು  ಭಾರತ ಆಸ್ಟ್ರೇಲಿಯಾ ನಿರ್ಣಾಯಕ ಕದನ

INDvsAus ಇಂದು  ಭಾರತ ಆಸ್ಟ್ರೇಲಿಯಾ ನಿರ್ಣಾಯಕ ಕದನ

March 22, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram