ಮಿರ್‌ಪುರದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್‌ನ ಎರಡನೇ ದಿನದಂದು ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 365 ರನ್‌ಗಳಿಗೆ ಆಲೌಟ್ ಆಗಿದ್ದು, ಪ್ರವಾಸಿ ಶ್ರೀಲಂಕಾ ತಂಡ ದಿನದಾಟದ ಅಂತ್ಯಕ್ಕೆ ತನ್ನ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತ್ತು.
ಮೊದಲ ಇನ್ನಿಂಗ್ಸ್ ನಲ್ಲಿ ಮುಶ್ಫಿಕರ್ ರಹೀಮ್ (175*) ಮತ್ತು ಲಿಟ್ಟನ್ ದಾಸ್ (141) ಹೊರತುಪಡಿಸಿ, ಅವರ ಯಾವುದೇ ಆಟಗಾರರು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಉಳಿಯಲು ಸಾಧ್ಯವಾಗಲಿಲ್ಲ. ಬಾಂಗ್ಲಾದೇಶ ಐದು ಬ್ಯಾಟ್ಸ್‌ಮನ್ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
ಬಾಂಗ್ಲಾದೇಶ 5 ವಿಕೆಟ್ ಗೆ 277 ರನ್ ಗಳಿಂದ ಎರಡನೇ ದಿನದಾಟವನ್ನು ಪ್ರಾರಂಭಿಸಿತು. ಮೊದಲ ದಿನದ ಶತಕ ಬಾರಿಸಿದ್ದ ಲಿಟ್ಟನ್ ದಾಸ್ ಮತ್ತು ಮುಶ್ಫಿಕರ್ ರಹೀಮ್ ನಿಧಾನವಾಗಿ ಆಟ ಮುಂದುವರಿಸಿದರು. ಆದಾಗ್ಯೂ, ಲಿಟ್ಟನ್ ದಾಸ್ ಎರಡನೇ ದಿನ ಕ್ರೀಸ್‌ನಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಲೀಟನ್ 141 ರನ್ ಗಳಿಸಿ ಆರನೇ ವಿಕೆಟ್ ರೂಪದಲ್ಲಿ ಔಟಾದರು.
ಲಿಟ್ಟನ್ ದಾಸ್ ಔಟಾದ ನಂತರ, ಮುಶ್ಫಿಕರ್ ರಹೀಮ್ ಒಂದು ತುದಿಯನ್ನು ಹಿಡಿದಿಟ್ಟುಕೊಂಡರು ಆದರೆ ಅವರಿಗೆ ಇತರ ಬ್ಯಾಟ್ಸ್‌ಮನ್‌ಗಳ ಬೆಂಬಲ ನೀಡಲಿಲ್ಲ. ಇಡೀ ತಂಡ 365 ಸ್ಕೋರ್‌ನಲ್ಲಿ ಪೆವಿಲಿಯನ್‌ಗೆ ಮರಳಿತು. ಮುಷ್ಫಿಕರ್ ರಹೀಮ್ 175 ರನ್ ಗಳಿಸಿ ಅಜೇಯರಾಗಿ ಉಳಿದರು. ಮುಶ್ಫಿಕರ್ ಮತ್ತು ಲಿಟ್ಟನ್ ದಾಸ್ ಹೊರತುಪಡಿಸಿ, ತಾಜಿಯುಲ್ ಇಸ್ಲಾಂ ಮಾತ್ರ ಎರಡಂಕಿಯ ಮೊತ್ತವನ್ನು ಮುಟ್ಟಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶದ 365 ರನ್‌ಗಳಿಗೆ ಉತ್ತರವಾಗಿ ಶ್ರೀಲಂಕಾ ಆರಂಭಿಕರು ಉತ್ತಮ ಆರಂಭ ನೀಡಿದರು. ಅವರ ಆರಂಭಿಕರಾದ ಓಶದ ಫೆರ್ನಾಂಡೋ ಮತ್ತು ದಿಮುತ್ ಕರುಣಾರತ್ನೆ ಅರ್ಧಶತಕಗಳನ್ನು ಬಾರಿಸಿದರು. ಮತ್ತು ಮೊದಲ ವಿಕೆಟ್‌ಗೆ 95 ರನ್ ಸೇರಿಸಿದರು. ಫರ್ನಾಂಡೊ 57 ರನ್ ಗಳಿಸಿ ಹುಸೇನ್‌ಗೆ ಬಲಿಯಾದರು. ಇದಾದ ಬಳಿಕ ಕುಶಾಲ್ ಮೆಂಡಿಸ್ ಗೆ ಶಕೀಬ್ ಖೆಡ್ಡಾ ತೋಡಿದರು.
ದಿಮುತ್ ಕರುಣಾರತ್ನೆ ತಮ್ಮ ಟೆಸ್ಟ್ ವೃತ್ತಿಜೀವನದ 29ನೇ ಅರ್ಧಶತಕ ದಾಖಲಿಸಿದರು. ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 2 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿದೆ. ನಾಯಕ ಕರುಣಾರತ್ನೆ 70 ರನ್ ಗಳಿಸಿ ನೈಟ್ ವಾಚ್ ಮನ್ ರಜಿತಾ ಖಾತೆ ತೆರೆಯದೆ ಕ್ರೀಸ್ ನಲ್ಲಿದ್ದಾರೆ. ಶ್ರೀಲಂಕಾ ಇನ್ನೂ ಬಾಂಗ್ಲಾದೇಶಕ್ಕಿಂತ 222 ರನ್ ಹಿನ್ನಡೆ ಅನುಭವಿಸುತ್ತಿದೆ.