IPL 2022 ಈಗ ಕೊನೆಯ ಹಂತದತ್ತ ಮುಖ ಮಾಡಿದೆ. ಟೂರ್ನಿಯಲ್ಲಿ ಇದುವರೆಗೆ 59 ಪಂದ್ಯಗಳು ನಡೆದಿವೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಪ್ಲೇ ಆಫ್ ಗೆ ಅರ್ಹತೆ ಪಡೆದಿದೆ. ಶೀಘ್ರದಲ್ಲೇ ಇನ್ನೂ 3 ತಂಡಗಳು ಪ್ಲೇ ಆಫ್ ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳುತ್ತವೆ. ಈ ವರ್ಷ ಟೂರ್ನಿಯಲ್ಲಿ ಬ್ಯಾಟ್ಸ್ ಮನ್ ಗಳ ಜೊತೆಗೆ ಸ್ಪಿನ್ನರ್ ಗಳೂ ಸಹ ಎಲ್ಲರ ಚಿತ್ತ ಕದ್ದಿದ್ದಾರೆ.
ಪ್ರಸಕ್ತ ಋತುವಿನಲ್ಲಿ ಸ್ಪಿನ್ನರ್ ಗಳು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಮೂವರು ಪರ್ಪಲ್ ಕ್ಯಾಪ್ ಗೆಲ್ಲುವ ಪ್ರಬಲ ಸ್ಪರ್ಧಿಗಳೆಂದು ಪರಿಗಣಿಸಲಾಗಿದೆ.

ಯುಜುವೇಂದ್ರ ಚಹಾಲ್
ರಾಜಸ್ಥಾನ್ ರಾಯಲ್ಸ್ ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ಉತ್ತಮ ಲಯದಲ್ಲಿದ್ದಾರೆ. 12 ಪಂದ್ಯಗಳಲ್ಲಿ 48 ಓವರ್ ಬೌಲಿಂಗ್ ಮಾಡಿರುವ ಅವರು 362 ರನ್ ನೀಡಿ 23 ವಿಕೆಟ್ ಪಡೆದಿದ್ದಾರೆ. ಈ ಸಮಯದಲ್ಲಿ ಅವರ ಏಕನಾಮಿ 7.54 ಮತ್ತು ಸರಾಸರಿ 15.73 ಆಗಿದೆ. ಈ ಋತುವಿನಲ್ಲಿ ಅವರ ಅತ್ಯುತ್ತಮ ಪ್ರದರ್ಶನ 40ಕ್ಕೆ 5 ಆಗಿದೆ. ಚಹಲ್ ಒಮ್ಮೆ 4 ಮತ್ತು ಒಮ್ಮೆ 5 ವಿಕೆಟ್ ಪಡೆದಿದ್ದಾರೆ. ಅವರು ಇನ್ನೂ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ವನಿಂದು ಹಸರಂಗ
RCB ಬೌಲರ್ ಹಸರಂಗ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. 12 ಪಂದ್ಯಗಳಲ್ಲಿ 41 ಓವರ್ ಬೌಲಿಂಗ್ ಮಾಡಿರುವ ಇವರು 322 ರನ್ ನೀಡಿ 21 ವಿಕೆಟ್ ಪಡೆದಿದ್ದಾರೆ. ಇವರು 7.85 ಏಕನಾಮಿ ಮತ್ತು 15.33 ಸರಾಸರಿ ಆಗಿದೆ. ಈ ಋತುವಿನಲ್ಲಿ ಹಸರಂಗ 18 ರನ್ ನೀಡಿ 5 ವಿಕೆಟ್ ಪಡೆದು ಬೀಗಿದ್ದು ಶ್ರೇಷ್ಠ ಸಾಧನೆಯಾಗಿದೆ. ಹಸರಂಗ ಇದುವರೆಗೆ ತಲಾ ಒಂದೊಂದು ಬಾರಿ 4 ವಿಕೆಟ್ ಮತ್ತು 5 ವಿಕೆಟ್ ಪಡೆದಿದ್ದಾರೆ. ಅವರು ಪ್ರಸ್ತುತ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಕುಲ್‍ದೀಪ್ ಯಾದವ್
ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ ಬೌಲರ್ ಕುಲ್‍ದೀಪ್ ಯಾದವ್ ಐಪಿಎಲ್ 2022 ರಲ್ಲಿ ತಮ್ಮ ಪ್ರದರ್ಶನದ ಮೂಲಕ ಆರ್ಭಟಿಸಿದ್ದಾರೆ. 12 ಪಂದ್ಯಗಳಲ್ಲಿ ಇವರು 42.4 ಓವರ್ ಬೌಲ್ ಮಾಡಿ 372 ರನ್ ನೀಡಿ 18 ವಿಕೆಟ್ ಪಡೆದಿದ್ದಾರೆ. 14 ರನ್ ನೀಡಿ ನಾಲ್ಕು ವಿಕೆಟ್ ಪಡೆದಿದ್ದೇ ಇವರ ಉತ್ತಮ ಪ್ರದರ್ಶನವಾಗಿದೆ. ಯಾದವ್ ಇದುವರೆಗೆ ಎರಡು ಬಾರಿ 4 ವಿಕೆಟ್ ಪಡೆದಿದ್ದಾರೆ. ಅವರು ಪ್ರಸ್ತುತ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.