ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಪಾಕಿಸ್ತಾನ ಇನ್ನೇನು ಶಾಕಿಂಗ್ ಫಲಿತಾಂಶ ನೀಡಿತು ಅನ್ನುವಾಗಲೇ ಎಲ್ಲವನ್ನೂ ಕಳೆದುಕೊಂಡಿತ್ತು. ಸ್ಲಾಗ್ ಓವರ್ಗಳಲ್ಲಿನ ಒತ್ತಡ ಪಾಕ್ ತಂಡದಿಂದ ಗೆಲುವನ್ನು ಕಿತ್ತುಕೊಂಡಿತ್ತು. ಕೊನೆಯ ಓವರ್ ವರೆಗೂ ಹೋರಾಟ ಮಾಡಿದ ದಕ್ಷಿಣ ಆಫ್ರಿಕಾ 6 ರನ್ಗಳಿಂದ ಪಂದ್ಯ ಗೆದ್ದು ಬೀಗಿತು.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಲಾರ ವೋಲ್ವರ್ಟ್ 75 ರನ್ ಮತ್ತು ನಾಯಕಿ ಸುನ್ ಲಸ್ 62 ರನ್ಗಳ ನೆರವಿನಿಂದ ಉತ್ತಮ ಮೊತ್ತ ಕಲೆಹಾಕುವತ್ತ ಮುಖಮಾಡಿತು. ಆದರೆ ಗುಲಾಂ ಫಾತಿಮಾ ಮತ್ತು ಫಾತಿಮಾ ಸನಾ ದಕ್ಷಿಣ ಆಫ್ರಿಕಾವನ್ನು ಕಟ್ಟಿಹಾಕಿದರು. ತ್ರಿಷಾ ಚೆಟ್ಟಿ ಮತ್ತು ಟೈರನ್ ತಲಾ 31 ರನ್ಗಳಿಸಿದ್ದರಿಂದ ದಕ್ಷಿಣ ಆಪ್ರಿಕಾ ನಿಗದಿತ 50 ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡು 223 ರನ್ಗಳಿಸುವ ಹಾಗಾಯಿತು. ಸನಾ ಮತ್ತು ಗುಲಾಂ ತಲಾ 3 ವಿಕೆಟ್ ಪಡೆದರು.
ಪಾಕಿಸ್ತಾನ ಚೇಸಿಂಗ್ ವೇಳೆ ಸಿದ್ರ ಅಮೀನ್ (12) ಮತ್ತು ನಾಯಕಿ ಬಿಸ್ಮಾ ಮರೂಫ್ (0) ವಿಕೆಟ್ ಬೇಗನೆ ಕಳೆದುಕೊಂಡೂ ನಹಿದಾ ಖಾನ್ (40) ಮತ್ತು ಒಮೈಮಾ ಸೊಹೈಲ್ (65) ಮೂಲಕ ಹೋರಾಟ ಸಂಘಟಿಸಿತು. ಇವರ ಜೊತೆ ನಿದಾ ದಾರ್ ಕೂಡ 55 ರನ್ ಸಿಡಿಸಿರು. ಸ್ಲಾಗ್ ಓವರುಗಳಲ್ಲಿ ಪಾಕ್ ವಿಕೆಟ್ ಗಳನ್ನು ಕಳೆದುಕೊಂಡಿತು. ಕೊನೆಯ ಓವರ್ನಲ್ಲಿ ಪಾಕ್ ಗೆಲುವಿಗೆ 10 ರನ್ ಬೇಕಿತ್ತು. 2 ವಿಕೆಟ್ ಕೂಡ ಕೈಯಲ್ಲಿತ್ತು. ಆದರೆ ಬೌಲರ್ ಇಸ್ಮಾಯಿಲ್ ಲೆಕ್ಕಾಚಾರ ತಲೆ ಕೆಳಗೆ ಮಾಡಿದರು. ಪಾಕ್ 217 ರನ್ಗಳಿಗೆ ಆಲೌಟ್ ಆಗಿ 6 ರನ್ಗಳ ಸೋಲನುಭವಿಸಿತು.