ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಗೆ ಬಿಲ್ಡ್ ಅಪ್ ಆಗುತ್ತಿದೆ. ಬಾಕ್ಸಿಂಗ್ ಡೇ ಟೆಸ್ಟ್ ಬಗ್ಗೆ ಚರ್ಚೆ ಶುರುವಾಗಿದೆ. ಡಿಸೆಂಬರ್ 26ರಿಂದ ಆರಂಭವಾಗುವ ಮೊದಲ ಟೆಸ್ಟ್ ಕುತೂಹಲ ಕೆರಳಿಸಿದೆ. ಈ ಪಂದ್ಯ ಪಂದ್ಯ ಆರಂಭಕ್ಕೂ ಮೊದಲೇಸ ದಕ್ಷಿಣ ಆಫ್ರಿಕಾ ತಂಡಕ್ಕೆ ಶಾಕ್ ಎದುರಾಗಿದೆ. ಹರಿಣಗಳ ಪ್ರಮುಖ ಫಾಸ್ಟ್ ಬೌಲರ್ ಅನ್ರಿಚ್ ನೋರ್ಟ್ಜೆ ಗಾಯಗೊಂಡು ಸರಣಿಯಿಂಲೇ ಹೊರಬಿದ್ದಿದ್ದಾರೆ.
ಅನ್ರಿಚ್ ನೋರ್ಟ್ಜೆ ಟೆಸ್ಟ್ ಸರಣಿಯಿಂದ ಹೊರ ನಡೆದಿರುವುದು ದಕ್ಷಿಣ ಆಫ್ರಿಕಾ ಬೌಲಿಂಗ್ ವಿಭಾಗಕ್ಕೆ ಹೊಡೆತ ನೀಡಲಿದೆ. ಅನ್ರಿಚ್ ನೋರ್ಟ್ಜೆ ಅನುಪಸ್ಥಿತಿಯಲ್ಲಿ ಕಗಿಸೊ ರಬಾಡ ಹಾಗೂ ಲುಂಗಿ ಎನ್ಗಿಡಿ ಅವರ ಮೇಲೆ ಜವಾಬ್ದಾರಿ ಹಾಗೂ ಒತ್ತಡ ಇರಲಿದೆ.
ದಕ್ಷಿಣ ಆಫ್ರಿಕಾ ವೇಗದ ಬೌಲರ್ಗಳ ಎದುರು ಟೀಮ್ ಇಂಡಿಯಾ ಈ ಹಿಂದೆಯೂ ಪರದಾಡಿತ್ತು.ಅದರಲ್ಲೂ 150 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಅನ್ರಿಚ್ ನೋರ್ಟ್ಜೆ ಸೇವೆ ಇಲ್ಲದೇ ಇರುವುದು ತಂಡದ ಬ್ಯಾಲೆನ್ಸ್ಗೆ ಹೊಡೆತ ನೀಡಿದೆ. 12 ಟೆಸ್ಟ್ ಪಂದ್ಯಗಳಾಡಿರುವ ಎನ್ರಿಕ್ ನೊರ್ಕಿಯಾ 47 ವಿಕೆಟ್ಗಳನ್ನು ಪಡೆದಿದ್ದಾರೆ. ಮಾಜಿ ನಾಯಕ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕ್ವಿಂಟಾನ್ ಡಿ ಕಾಕ್ ಕೂಡ ಕೊನೆಯ 2 ಪಂದ್ಯಗಳಿಗೆ ಲಭ್ಯರಿಲ್ಲ. ಹೀಗಾಗಿ ಸರಣಿ ಆರಂಭಕ್ಕೆ ಮುನ್ನವೇ ದಕ್ಷಿಣ ಆಫ್ರಿಕಾ ತಂಡ ವೀಕ್ ಆಗುತ್ತಿದೆ.