Sourav Ganguly- ಆಯ್ಕೆ ಸಮಿತಿ ಸಭೆಯಲ್ಲಿ ಗಂಗೂಲಿಗೆ ಏನು ಕೆಲಸ ?
ಭಾರತೀಯ ಕ್ರಿಕೆಟ್ ನಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ವಿವಾದ ಚಕ್ರವ್ಯೂಹದಲ್ಲಿ ಸಿಲುಕಿತ್ತಿದ್ದಾರೆ.
ಬಿಸಿಸಿಐ ಅಧ್ಯಕ್ಷರಾದ ಬಳಿಕ ಗಂಗೂಲಿ ಒಂದಲ್ಲ ಒಂದು ಕಾರಣದಿಂದ ಸುದ್ದಿಯ ಕೇಂದ್ರ ಬಿಂದುವಾಗುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ವಿರಾಟ್ ಕೊಹ್ಲಿ ವಿರುದ್ದದ ಜಟಾಪಟಿಯ ನಂತರ ಸೌರವ್ ಗಂಗೂಲಿ ಕೆಲವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
ಹೌದು, ವಿರಾಟ್ Pಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲು ಮುಖ್ಯ ಕಾರಣ ಸೌರವ್ ಗಂಗೂಲಿ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆಪ್ತ ಸ್ನೇಹಿತ ರಾಹುಲ್ ದ್ರಾವಿಡ್ ಅವರ ಹೆಡ್ ಕೋಚ್ ಹುದ್ದೆಯನ್ನು ಸುಗಮಗೊಳಿಸಲು, ವಿರಾಟ್ ಕೊಹ್ಲಿಯವರನ್ನು ನಾಯಕತ್ವದಿಂದ ಕೆಳಗಿಸಲು ಗಂಗೂಲಿ ಮಾಸ್ಟರ್ ಪ್ಲಾನ್ ಮಾಡಿದ್ದರು. ಹೀಗಾಗಿಯೇ ವಿರಾಟ್ ಕೊಹ್ಲಿ ಗಂಗೂಲಿ ವಿರುದ್ದವೇ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಇದೀಗ ಬಿಸಿಸಿಐಯನ್ನು ಎದುರು ಹಾಕೊಂಡ್ರೆ ತನಗೆ ಉಳಿಗಾಲವಿಲ್ಲ ಎಂಬುದನ್ನು ಅರಿತುಕೊಂಡಿರುವ ವಿರಾಟ್ ಕೊಹ್ಲಿ ಈಗ ಸೈಲೆಂಟ್ ಆಗಿದ್ದಾರೆ. ಬ್ಯಾಟ್ ನಿಂದಲೇ ಎಲ್ಲದಕ್ಕೂ ಉತ್ತರ ನೀಡುವ ಮನಸ್ಥಿತಿಯಲ್ಲಿದ್ದಾರೆ ಟೀಮ್ ಇಂಡಿಯಾದ ಮಾಜಿ ನಾಯಕ.
ಇದೀಗ ಸೌರವ್ ಗಂಗೂಲಿ ವಿರುದ್ದ ಮತ್ತೊಂದು ಆರೋಪ ಕೇಳಿಬರುತ್ತಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಆಯ್ಕೆ ಸಮಿತಿಯ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ. ಆಯ್ಕೆ ಸಮಿತಿಯ ಮೇಲೆ ತನ್ನ ಪ್ರಭಾವವನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಅಪವಾದ ಸೌರವ್ ಗಂಗೂಲಿ ಮೇಲಿದೆ.
Sourav Ganguly- Did Ganguly Influence Team Selection?
ಬಿಸಿಸಿಐ ನಿಯಮದ ಪ್ರಕಾರ ಬಿಸಿಸಿಐ ಅಧ್ಯಕ್ಷರು ಆಯ್ಕೆ ಸಮಿತಿಯ ಸಭೆಯಲ್ಲಿ ಭಾಗಿಯಾಗುವಂತಿಲ್ಲ. ತಂಡವನ್ನು ಆಯ್ಕೆ ಮಾಡುವ ಸಂಪೂರ್ಣ ಸ್ವಾತಂತ್ರ್ಯ ಆಯ್ಕೆ ಸಮಿತಿಯ ಸದಸ್ಯರು ಮತ್ತು ಮುಖ್ಯಸ್ಥರಿಗೆ ಇರುತ್ತದೆ. ಹೀಗಾಗಿ ಗಂಗೂಲಿ ಆಯ್ಕೆ ಸಮಿತಿ ಸಭೆಯಲ್ಲಿ ಭಾಗಿಯಾಗುತ್ತಿರುವುದನ್ನು ಪ್ರಶ್ನೆ ಕೂಡ ಮಾಡಲಾಗುತ್ತಿದೆ.
ಈಗಾಗಲೇ ಇಬ್ಬರು ಹಿರಿಯ ಕ್ರೀಡಾಪತ್ರಕರ್ತರು ಬಹಿರಮಗವಾಗಿಯೇ ಗಂಗೂಲಿಯವರ ನಡೆಯನ್ನು ಪ್ರಶ್ನೆ ಮಾಡಿದ್ದಾರೆ. ಆಯ್ಕೆ ಸಮಿತಿಯ ಸಭೆಯಲ್ಲಿ ಗಂಗೂಲಿಗೆ ಏನು ಕೆಲಸ ? ಆಯ್ಕೆ ಸಮಿತಿ ಸಭೆಯಲ್ಲಿ ಭಾಗವಹಿಸುವುದು ಗಂಗೂಲಿಯ ಕೆಲಸವಲ್ಲ ಎಂದು ಹೇಳಿದ್ದಾರೆ.
ಅಷ್ಟಕ್ಕೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಹಿಂದೆ ಟೀಮ್ ಇಂಡಿಯಾದ ನಾಯಕನಾಗಿದ್ದವರು. ನಾಯಕನಾಗಿ ಆಯ್ಕೆ ಸಮಿತಿ ಸಭೆಯಲ್ಲಿ ಭಾಗವಹಿಸಿ ತನಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಗಂಗೂಲಿಗೆ ಸಿಕ್ಕಿತ್ತು. ಆದ್ರೆ ಇದೀಗ ಗಂಗೂಲಿ ಯಾಕೆ ಹೀಗೆ ಮಾಡಿದ್ರು ? ತಂಡದ ಣಾಯಕನಿಗೆ ತಂಡದ ಆಟಗಾರರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಇರುವಾಗ ಗಂಗೂಲಿ ಯಾಕೆ ಆಯ್ಕೆ ಸಮಿತಿ ಸಭೆಯಲ್ಲಿ ಭಾಗಿಯಾಗುತ್ತಾರೆ ? ಒಂದು ವೇಳೆ ಬಿಸಿಸಿಐ ಅಧ್ಯಕ್ಷರೇ ತಂಡವನ್ನು ಆಯ್ಕೆ ಮಾಡುವುದಾದ್ರೆ ಆಯ್ಕೆ ಸಮಿತಿ ಯಾಕೆ ಬೇಕು ?
ಒಟ್ಟಿನಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಡೀ ಭಾರತೀಯ ಕ್ರಿಕೆಟ್ ರಂಗವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಗಂಗೂಲಿಯವರ ಈ ಸರ್ವಾಧಿಕಾರಿ ಧೋರಣೆ ಇದೀಗ ಅವರಿಗೆ ಮುಳುವಾಗುವ ಸಾಧ್ಯತೆಗಳೂ ಇವೆ. ಒಟ್ಟಾರೆ, ದಾದಾ ಈಗ ವಿವಾದದ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ.