Gautam Gambhir- ಬಿಸಿಸಿಐ – ವಿರಾಟ್ ಜಟಾಪಟಿ – ಚಾನೆಲ್ ಗಳ ಟಿಆರ್ ಪಿ ಹೆಚ್ಚಾಯ್ತು
ಗೌತಮ್ ಗಂಭೀರ್.. ಟೀಮ್ ಇಂಡಿಯಾದ ಮಾಜಿ ಆಟಗಾರ. ಹಾಲಿ ಸಂಸದ. ಅಷ್ಟೇ ಅಲ್ಲ ಗೌತಮ್ ಗಂಭೀರ್ ಅವರದ್ದು ನೇರ ನಡೆ ನುಡಿಯ ವ್ಯಕ್ತಿತ್ವ. ಅದು ರಾಜಕೀಯ ಇರಲಿ, ಕ್ರೀಡೆಯೇ ಆಗಿರಲಿ. ತನಗೆ ಅನ್ನಿಸಿದ್ದನ್ನು ನೇರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
ಇದೀಗ ಗೌತಮ್ ಗಂಭೀರ್ ಮತ್ತೊಮ್ಮೆ ಬಿಸಿಸಿಐ ಮತ್ತು ವಿರಾಟ್ ನಡುವಿನ ಜಟಾಪಟಿಯ ಬಗ್ಗೆ ಮಾತನಾಡಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ನಡುವಿನ ವಿವಾದವನ್ನು ಸುಲಭವಾಗಿ ಬಗೆ ಹರಿಸಬಹುದಿತ್ತು. ಇದು ಅಂತರಿಕ ವಿವಾದ. ಇದನ್ನು ಪರಸ್ಪರ ಮಾತನಾಡಿಕೊಂಡು ಬಗೆಹರಿಸಿಕೊಳ್ಳಬಹುದಿತ್ತು. ಇದನ್ನು ದೊಡ್ಡ ವಿವಾದ ಮಾಡುವ ಅಗತ್ಯವಿರಲಿಲ್ಲ ಎಂದು ಗೌತಮ್ ಗಂಭೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
battle’ between Kohli, BCCI- TRP for a lot of new channels
ನಿಜವಾಗಿ ಹೇಳುವುದಾದ್ರೆ ಇದೊಂದು ದೊಡ್ಡ ವಿವಾದವೇ ಅಲ್ಲ. ತಮ್ಮೊಳಗೆ ಬಗೆಹರಿಸಿಕೊಳ್ಳಬಹುದಾಗಿದ್ದ ಸಣ್ನ ವಿವಾದ. ಆದ್ರೆ ಈ ವಿವಾದದಿಂದ ಚಾನೆಲ್ ಗಳ ಟಿಆರ್ ಪಿ ಜಾಸ್ತಿ ಆಯ್ತು. ಅದೇನೇ ಇರಲಿ, ಇದನ್ನು ಸೂಕ್ಷ್ಮವಾಗಿ ನೋಡಿದಾಗ ಇದೇನೂ ದೊಡ್ಡ ವಿಷಯವೇ ಅಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ರು.
ಹಾಗೇ ವಿರಾಟ್ ಮತ್ತು ಬಿಸಿಸಿಐ ನಡುವಿನ ಶೀತಲ ಸಮರವನ್ನು ದೊಡ್ಡ ವಿಷ್ಯವನ್ನಾಗಿಸುವ ಅಗತ್ಯವೇ ಇರಲಿಲ್ಲ. ಹಾಗೇ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯಬಾರದಿತ್ತು. ಟಿ-20 ನಾಯಕತ್ವವನ್ನು ವಿರಾಟ್ ತಾವೇ ತ್ಯಜಿಸಿದ್ರು. ನಂತರ ಏಕದಿನ ತಂಡದ ನಾಯಕತ್ವದಿಂದಲೂ ಕೈಬಿಡಲಾಗಿತ್ತು. ವೈಟ್ ಬಾಲ್ ಕ್ರಿಕೆಟ್ ನ ದೃಷ್ಟಿಕೋನದಿಂದ ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ನಿರ್ಧಾರ ಸರಿಯಾಗಿದೆ ಎಂದೇ ಭಾವಿಸೋಣ. ಆದ್ರೆ ಟೆಸ್ಟ್ ತಂಡದ ನಾಯಕತ್ವದ ನಿರ್ಧಾರ ವಿರಾಟ್ ಕೈಯಲ್ಲಿತ್ತು. ವಿರಾಟ್ ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯಬೇಕಿತ್ತು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.