Sourav Ganguly.- ರಹಾನೆ ಮತ್ತು ಪೂಜಾರಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕಿವಿ ಮಾತು..!
ಕಳಪೆ ಫಾರ್ಮ್ ನಿಂದ ಟೀಕೆಗೆ ಗುರಿಯಾಗುತ್ತಿರುವ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯಾ ರಹಾನೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ.
ಈಗಾಗಲೇ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯಾ ರಹಾನೆ ಅವರು ಟೆಸ್ಟ್ ಪಂದ್ಯಗಳಲ್ಲಿ ತೀರಾ ಕಳಪೆ ಮಟ್ಟದ ಪ್ರದರ್ಶನ ನೀಡುತ್ತಿದ್ದಾರೆ. ಅನುಭವಿ ಆಟಗಾರರು ಮತ್ತು ಟೆಸ್ಟ್ ಸ್ಪೆಷಲಿಸ್ಟ್ ಗಳಾಗಿರುವ ರಹಾನೆ ಮತ್ತು ಪೂಜಾರ ಬ್ಯಾಟ್ ನಿಂದ ಸರಾಗವಾಗಿ ಹರಿದು ಬರುತ್ತಿಲ್ಲ. ಹೀಗಾಗಿ ತಂಡದಲ್ಲಿ ಅವರ ಸ್ಥಾನಗಳು ಕೂಡ ಅಲುಗಾಡುತ್ತಿವೆ.
ಇದನ್ನು ಅರಿತುಕೊಂಡಿರುವ ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಅತ್ಯಮೂಲ್ಯವಾದ ಸಲಹೆ ನೀಡಿದ್ದಾರೆ.
Sourav Ganguly advices Cheteshwar Pujara and Ajinkya Rahane
ಅಜಿಂಕ್ಯಾ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರು ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಲು ದೇಸಿ ಕ್ರಿಕೆಟ್ ನಲ್ಲಿ ಆಡಬೇಕು. ಮುಂಬರು ರಣಜಿ ಟೂರ್ನಿಗಳಲ್ಲಿ ಆಡಿ ಕಳೆದು ಹೋಗಿರುವ ಫಾರ್ಮ್ ಅನ್ನು ಮತ್ತೆ ಪಡೆದುಕೊಳ್ಳಬೇಕು ಎಂದು ಸೌರವ್ ಗಂಗೂಲಿ ಅವರು ರಹಾನೆ ಮತ್ತು ಪೂಜಾರ ಅವರಿಗೆ ಕಿವಿ ಮಾತು ಹೇಳಿದ್ದಾರೆ.
ಅಜಿಂಕ್ಯಾ ರಹಾನೆ ಮತ್ತು ಪೂಜಾರ ಏಕದಿನ ತಂಡದಲ್ಲಿ ಇಲ್ಲ. ಹೀಗಾಗಿ ಇದೇ ತಿಂಗಳು ಆರಂಭವಾಗಲಿರುವ ರಣಜಿ ಪಂದ್ಯಗಳಲ್ಲಿ ಆಡಬೇಕು. ಅಲ್ಲಿ ಉತ್ತಮ ರನ್ ಗಳಿಸಿ ಫಾರ್ಮ್ ಕಂಡುಕೊಳ್ಳಬೇಕು ಎಂದು ಪರೋಕ್ಷವಾಗಿ ಗಂಗೂಲಿ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಫಾರ್ಮ್ ಕಳೆದುಕೊಂಡಾಗ ರಣಜಿ ಪಂದ್ಯಗಳಲ್ಲಿ ನಾವು ಆಡಿದ್ದೇವೆ. ರಣಜಿ ಟೂರ್ನಿಯಲ್ಲಿ ಆಡೋದು ತುಂಬಾ ಉತ್ತಮ. ಕಳೆದು ಹೋಗಿರುವ ಫಾರ್ಮ್ ಅನ್ನು ಕಂಡುಕೊಳ್ಳಲು ರಣಜಿ ಪಂದ್ಯಗಳು ಉತ್ತಮ ವೇದಿಕೆಯಾಗಿದೆ. ಪೂಜಾರ ಮತ್ತು ರಹಾನೆ ಅವರಿಗೆ ರಣಜಿ ಪಂದ್ಯ ಆಡಲು ಯಾವುದೇ ತೊಂದರೆ ಇಲ್ಲ ಎಂದು ಗಂಗೂಲಿ ಹೇಳಿದ್ದಾರೆ.
2005ರಲ್ಲಿ ಸೌರವ್ ಗಂಗೂಲಿ ಕೂಡ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿದ್ದರು. ಅಲ್ಲದೆ ತಂಡದಿಂದ ಹೊರಗುಳಿದಿದ್ದರು. ಆಗ ಗಂಗೂಲಿ ಕೂಡ ರಣಜಿ ಪಂದ್ಯ ಆಡಿ ಕಮ್ ಬ್ಯಾಕ್ ಮಾಡಿದ್ದರು. ಹಾಗೇ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮ,ಣ್, ಅನಿಲ್ ಕುಂಬ್ಳೆ ಮೊದಲಾದ ಆಟಗಾರರು ಕೂಡ ರಣಜಿ ಪಂದ್ಯಗಳನ್ನು ಆಡುತ್ತಿದ್ದರು.