RCB ಜನಪ್ರಿಯತೆಯ ಉತ್ತುಂಗದಲ್ಲಿ ನಮ್ಮ ಬೆಂಗಳೂರು RCB have been declared most popular sports team in Asia in the digital space
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ. ಕಳೆದ 14 ಆವೃತ್ತಿಯ ಟೂರ್ನಿಗಳಲ್ಲೂ ಪ್ರತಿ ಬಾರಿಯೂ ಅಭಿಮಾನಿಗಳು ಈ ಬಾರಿ ಕಪ್ ನಮ್ದೆ ಅಂತ ಅಭಿಮಾನದಿಂದ ಅಭಿಯಾನ ಮಾಡ್ತಾರೆ. ಆದ್ರೆ ಮೂರು ಬಾರಿ ಫೈನಲ್ ಪ್ರವೇಶಿಸಿದ್ರೂ ಕಪ್ ಗೆಲ್ಲಲು ಆರ್ ಸಿಬಿಗೆ ಸಾಧ್ಯವಾಗಿಲ್ಲ.
ಆದ್ರೂ ಆರ್ ಸಿಬಿ ಅಭಿಮಾನಿಗಳು ತಮ್ಮ ಪ್ರೀತಿಯನ್ನು ಬಿಟ್ಟುಕೊಟ್ಟಿಲ್ಲ. ಸೋತು ಸೋತು ಸುಣ್ಣವಾದ್ರೂ ಅಭಿಮಾನ ಮಾತ್ರ ಒಂಚೂರು ಕಮ್ಮಿಯಾಗಿಲ್ಲ.
ಇದೀಗ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮತ್ತೊಂದು ಗರಿ ಸೇರಿಕೊಂಡಿದೆ.
ಸಾಮಾಜಿಕ ಜಾಲ ತಾಣದಲ್ಲಿ ಏಷ್ಯಾದ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಂಡ ತಂಡ ಎಂಬ ಹೆಗ್ಗಳಿಕೆಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಪಾತ್ರವಾಗಿದೆ.
ಡಿಪೋರ್ಟೆಸ್ ಮತ್ತು ಫೈನಾನ್ಜಾಸ್ ಪ್ರಕಾರ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಂಡ ಏಕೈಕ ಕ್ರಿಕೆಟ್ ತಂಡವಾಗಿದೆ.
ಇನ್ನುಳಿದಂತೆ ಯೂರೋಪ್ ನ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ ಬಾಲ್ ಕ್ಲಬ್, ಅಮೆರಿಕಾದ ಫ್ಲೆಮಾಂಗೊ ಮತ್ತು ಆಫ್ರಿಕಾದ ಆಲ್ ಆಹ್ಲೆ ಎಸ್ಇಸಿ ಮತ್ತು ಒಸಿಯಾನಿಯಾದ ಕಾಲಿಂಗ್ ವುಡ್ ತಂಡಗಳು ಹೆಚ್ಚು ಜನಪ್ರಿಯತೆಯ ತಂಡಗಳ ಪಟ್ಟಿಯಲ್ಲಿ ಅಗ್ರ ಸ್ಥಾನಗಳಲ್ಲಿ ಕಾಣಿಸಿಕೊಂಡಿವೆ.
ಈಗಾಗಲೇ ಆರ್ ಸಿಬಿ ತಂಡವು ಪಾಡ್ ಕ್ಯಾಸ್ಟ್ ಅನ್ನು ಆರಂಭಿಸಿದೆ. ಮೊದಲ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮುಂದಿಟ್ಟುಕೊಂಡು ಐಪಿಎಲ್ ನನ್ನ ಬದುಕನ್ನು ಹೇಗೆ ಬದಲಾಯಿಸಿತ್ತು ಎಂಬ ಕಾನ್ಸೆಪ್ಟ್ ನಲ್ಲಿ ಕಾರ್ಯಕ್ರಮವನ್ನು ಮಾಡುತ್ತಿದೆ. ಮೊದಲ ಹಂತವಾಗಿ ವಿರಾಟ್ ಕೊಹ್ಲಿಯವರ ಸಂದರ್ಶನವನ್ನು ಮಾಡಲಾಗಿತ್ತು. ಇದಕ್ಕೆ ಉತ್ತಮವಾದ ಸ್ಪಂದನೆಯೂ ಸಿಕ್ಕಿದೆ.