ಭಾರತದ ಸ್ಟಾರ್ ಓಪನರ್ ಸ್ಮೃತಿ ಮಂಧಾನ T20 ಕ್ರಿಕೆಟ್‌ನಲ್ಲಿ 100 ಪಂದ್ಯಗಳನ್ನು ಆಡಿದ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಸಿಲ್ಹೆಟ್‌ನಲ್ಲಿ ನಡೆದ ಮಹಿಳಾ ಏಷ್ಯಾ ಕಪ್‌ನಲ್ಲಿ ಥಾಯ್ಲೆಂಡ್ ವಿರುದ್ಧದ
ಪಂದ್ಯದಲ್ಲಿ ಮಂಧಾನಾ ಈ ಸಾಧನೆ ಮಾಡಿದರು. ಅಲ್ಲದೆ. 100 ಪಂದ್ಯವಾಡಿದ ಎರಡನೇ ಭಾರತೀಯ ಆಟಗಾರ್ತಿಯಾಗಿದ್ದಾರೆ.
ಸ್ಮೃತಿ 100 ಪಂದ್ಯಗಳಲ್ಲಿ 26.96 ಸರಾಸರಿಯಲ್ಲಿ 2,373 ರನ್ ಗಳಿಸಿದ್ದಾರೆ. ಎಡಗೈ ಬ್ಯಾಟರ್ 17 ಅರ್ಧ ಶತಕಗಳನ್ನು ಗಳಿಸಿದ್ದಾರೆ, ಅತ್ಯುತ್ತಮ ವೈಯಕ್ತಿಕ ಸ್ಕೋರ್ 86 ರನ್ ಆಗಿದೆ. ಇದಕ್ಕೂ ಮುನ್ನ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ 100ಕ್ಕೂ ಹೆಚ್ಚಿನ ಪಂದ್ಯಗಳನ್ನು ಆಡಿದ ಏಕೈಕ ಆಟಗಾರ್ತಿಯಾಗಿದ್ದರು. ಅವರು 135 T20 ಅಂತ
ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 27.28 ಸರಾಸರಿಯಲ್ಲಿ 2,647 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು ಎಂಟು ಅರ್ಧ ಶತಕಗಳು ಅವರ ಬ್ಯಾಟ್‌ನಿಂದ ಹೊರಹೊಮ್ಮಿವೆ. ಅಲ್ಲದೆ, ಈ ಮಾದರಿಯಲ್ಲಿ ಭಾರತ ಪರ 32 ವಿಕೆಟ್‌ಗಳನ್ನು ಪಡೆದಿದ್ದಾರೆ.
ನ್ಯೂಜಿಲೆಂಡ್‌ನ ಅನುಭವಿ ಆಟಗಾರ್ತಿ ಸುಜಿ ಬೇಟ್ಸ್ (136 ಪಂದ್ಯ , ಇಂಗ್ಲೆಂಡ್‌ನ ಡೇನಿಯಲ್ ವ್ಯಾಟ್ (135), ಆಸ್ಟ್ರೇಲಿಯದ ಅಲಿಸ್ಸಾ ಹೀಲಿ (132), ವೆಸ್ಟ್ ಇಂಡೀಸ್ ಡೇಂಡ್ರಾ ಡಾಟಿನ್ (127) T20 ಪಂದ್ಯಗಳನ್ನು ಆಡಿದ್ದಾರೆ.
ಹರ್ಮನ್‌ಪ್ರೀತ್ ಕೌರ್ ಥಾಯ್ಲೆಂಡ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾದ ಕಾರಣ ಮಂಧಾನ ತಂಡವನ್ನು ಮುನ್ನಡೆಸಿದರು. ಅಲ್ಲದೆ, ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.