ಟೀಂ ಇಂಡಿಯಾ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ T20I ಕ್ರಿಕೆಟ್ನಲ್ಲಿ ಹೊಸ ಮೈಲುಗಲ್ಲು ತಲುಪಿದ್ದಾರೆ. ತಮ್ಮ ಅದ್ಭುತ ಬ್ಯಾಟಿಂಗ್ನಿಂದಲೇ ಗಮನ ಸೆಳೆದಿರುವ ಎಡಗೈ ಬ್ಯಾಟರ್, T20Iನಲ್ಲಿ ಎರಡು ಸಾವಿರ ರನ್ಗಳ ಗಡಿದಾಟಿದ್ದಾರೆ.
ಅತಿಥೇಯ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರ ಮಂದಾನ, ಟೀಂ ಇಂಡಿಯಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂದಾನ 39 ರನ್ಗಳಿಸಿ ಮಿಂಚಿದರಲ್ಲದೇ, ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 2000 ರನ್ಗಳ ಗಡಿದಾಟಿದರು. ಇದರೊಂದಿಗೆ ಈ ಸಾಧನೆ ಮಾಡಿದ ಭಾರತ ಮಹಿಳಾ ಕ್ರಿಕೆಟ್ನ 3ನೇ ಆಟಗಾರ್ತಿ ಹಾಗೂ ಭಾರತ ಕ್ರಿಕೆಟ್ನ 5ನೇ ಪ್ಲೇಯರ್ ಎಂಬ ಹೆಗ್ಗಳಿಕೆ ಪಡೆದರು.
ಭಾರತ ಮಹಿಳಾ ಆಟಗಾರ್ತಿಯರ ಪರ ಹರ್ಮನ್ಪ್ರೀತ್ ಕೌರ್, 2372 ರನ್ಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ. ಟೀಂ ಇಂಡಿಯಾದ ಮಾಜಿ ಆಟಗಾರ್ತಿ ಮಿಥಾಲಿ ರಾಜ್ 2364 ರನ್ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಇದೀಗ ಇವರ ಸಾಲಿಗೆ ಸೇರ್ಪಡೆಯಾಗಿರುವ ಸ್ಮೃತಿ ಮಂದಾನ 2011 ರನ್ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
ಇನ್ನೂ ಒಟ್ಟಾರೆ ಭಾರತದ ಆಟಗಾರರ ಸಾಲಿನಲ್ಲಿ ಸ್ಮೃತಿ ಮಂದಾನ 5ನೇ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾದ ಪುರುಷ ತಂಡದ ನಾಯಕ ʼಹಿಟ್ ಮ್ಯಾನ್ʼ ರೋಹಿತ್ ಶರ್ಮ 3313 ರನ್ಗಳೊಂದಿಗೆ 1ನೇ ಸ್ಥಾನದಲ್ಲಿದ್ದರೆ. ʼರನ್ ಮಷಿನ್ʼ ವಿರಾಟ್ ಕೊಹ್ಲಿ 3296 ರನ್ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಹರ್ಮನ್ಪ್ರೀತ್ ಕೌರ್, ಮಿಥಾಲಿ ರಾಜ್ ಹಾಗೂ ಸ್ಮೃತಿ ಮಂದಾನ ನಂತರದ ಸ್ಥಾನದಲ್ಲಿದ್ದಾರೆ.