ಪಂಜಾಬ್ ಕಿಂಗ್ಸ್ಗೆ ಪ್ಲೇಆಫ್ ಆಸೆ ಬೇರೆ ತಂಡಗಳ ಆಟದ ಮೇಲೆ ಅವಲಂಬಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಂಜಾಬ್ ಆಟಗಾರ ಓಡಿಯನ್ ಸ್ಮಿತ್ ಒಂದು ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ವೀಡಿಯೋ ನೋಡಿದರೆ ನಕ್ಕು ನಕ್ಕು ಸುಸ್ತಾಗುತ್ತದೆ. ಒಡಿಯನ್ ಸ್ಮಿತ್ ಅವರ ಒಂದು ಸೀನಿನಿಂದ, ಇಡೀ ಪಂಜಾಬ್ ತಂಡದ ಆಟಗಾರರು ಇಸ್ಪಿಟ್ ಎಲೆಗಳ ರೀತಿ ಪಟಪಟನೇ ಬಿದ್ದಿವೆ.
ಸಾಮಾಜಿಕ ತಾಣಾಟದಲ್ಲಿ ವೈರಲ್ ಆಗಿರುವ ಈ 10 ಸೆಕೆಂಡುಗಳ ವೀಡಿಯೊದಲ್ಲಿ, ಪಂಜಾಬ್ ಕಿಂಗ್ಸ್ ಆಟಗಾರ ಓಡಿಯನ್ ಸ್ಮಿತ್ ಸೀನುತ್ತಾರೆ. ಇವರು ಸೀನುತ್ತಿದ್ದಂತೆ ಪಂಜಾಬ್ ಮುಂದೆ ಇದ್ದ ಉಳಿದ ಆಟಗಾರರು ಒಬ್ಬರ ಹಿಂದೆ ಒಬ್ಬರು ಬೀಳುತ್ತಾ ಹೋಗುತ್ತಾರೆ.
Odean be like: Kyun hila dala na⁉️ 😂#PunjabKings #SaddaPunjab #IPL2022 #ਸਾਡਾਪੰਜਾਬ #OdeanSmith pic.twitter.com/VpKzKMB95Y
— Punjab Kings (@PunjabKingsIPL) May 15, 2022
ಈ ವಿಡಿಯೋ ಟ್ವಿಟರ್ ನಲ್ಲಿ ಹಾಕುತ್ತಿದ್ದಂತೆ ಸಖತ್ ವೈರಲ್ ಆಗಿದೆ. ಈ ವಿಡಿಯೋಗೆ ಅಭಿಮಾನಿಗಳು ಸಖತ್ ಕಮೆಂಟ್ ಮಾಡಿದ್ದಾರೆ. ಇಲ್ಲಿ ಆಟಗಾರರು ಬೀಳುತ್ತಿರುವಂತೆ ನಿಮ್ಮ ವಿಕೆಟ್ಗಳೂ ಬೀಳುತ್ತಲೇ ಇರುತ್ತವೆ ಎಂದು ಅಭಿಮಾನಿಗಳು ಹೇಳಿದ್ದಾರೆ.

ಐಪಿಎಲ್ 15 ರ 64 ನೇ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಡೆಲ್ಲಿ ತಂಡ ಪಂಜಾಬ್ ತಂಡವನ್ನು 17 ರನ್ಗಳಿಂದ ಸೋಲಿಸಿತು. ಡಿಸಿ ಪರ ಶಾರ್ದೂಲ್ ಠಾಕೂರ್ ಅದ್ಭುತ ಬೌಲಿಂಗ್ ನಡೆಸಿ 4 ವಿಕೆಟ್ ಪಡೆದರು. ಪಂಜಾಬ್ ಪರ ಜಿತೇಶ್ ಶರ್ಮಾ ಅತಿ ಹೆಚ್ಚು ರನ್ ಗಳಿಸಿದರು. ಅವರು 34 ಎಸೆತಗಳಲ್ಲಿ 44 ರನ್ ಗಳಿಸಿದರು, ಆದರೆ ತಂಡವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.