ಓಶಾಡೋ ಫೆರ್ನಾಂಡೋ ( 64 ರನ್), ಕುಸಾಲ್ ಮೆಂಡಿಸ್ (76) ಮತ್ತು ದಿನೇಶ್ ಚಾಂಡಿಮಲ್ (ಅಜೇಯ 86) ರನ್ ( Dinesh Chandimal )ಗಳನೆರವಿನಿಂದ ಶ್ರೀಲಂಕಾ (Srilanka) ಗಾಲೆಯಲ್ಲಿ (Galle Test Match )ನಡೆಯುತ್ತಿರುವ ಪಾಕಿಸ್ತಾನ ( Pakistan )ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 3ನೇ ದಿನ ಗೌರವ ಸಂಪಾದಿಸಿದೆ. ಪಾಕಿಸ್ತಾನ 4ನೇ ದಿನ ಟಫ್ ಟಾರ್ಗೆಟ್ ಚೇಸ್ ಮಾಡುವ ಅನಿವಾರ್ಯತೆಗೆ ಸಿಲುಕಲಿದೆ.
3ನೇ ದಿನ ಆರಂಭಿಸಿದ ಶ್ರೀಲಂಕಾ ನೈಟ್ ವಾಚ್ಮನ್ ಕಸುನ್ ರಂಜಿತಾ (7 ರನ್) ವಿಕೆಟ್ ಬೇಗನೆ ಕಳೆದುಕೊಂಡಿತು. ಆದರೆ ಓಪನರ್ ಒಶಾಡೋ ಫೆರ್ನಾಂಡೋ ಮತ್ತು ಕುಸಾಲ್ ಮೆಂಡಿಸ್ ಇನ್ನಿಂಗ್ಸ್ ಕಟ್ಟಿದರು. ಇದು ಪಾಕ್ಗೆ ದುಬಾರಿ ಆಯಿತು. ಫೆರ್ನಾಂಡೋ 64 ರನ್ ಸಿಡಿಸಿ ಔಟಾದರು. ಮಾಜಿ ನಾಯಕ ಆ್ಯಂಜಲೋ ಮ್ಯಾಥ್ಯೂಸ್ ಕೂಡ 9 ರನ್ಗಳಿಗಿಂತ ಮುಂದೆ ಹೋಗಲಿಲ್ಲ.
ಈ ನಡುವೆ ಮೆಂಡಿಸ್ ಜೊತೆ ದಿನೇಶ್ ಚಾಂಡಿಮಲ್ ಇನ್ನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದರು. ಆದರೆ ಮೆಂಡಿಸ್ 76 ರನ್ ಸಿಡಿಸಿ ಔಟಾದರು. ದಿನೇಶ್ ಚಾಂಡಿಮಲ್ ಒಂದು ಕಡೆ ರನ್ಗಳಿಸುತ್ತಾ ಇದ್ರೂ ಇನ್ನೊಂದು ಕಡೆ ವಿಕೆಟ್ ಉರುಳುತ್ತಿತ್ತು. ಧನಂಜ ಡಿ ಸಿಲ್ವಾ (20 ರನ್), ನಿರೋಷನ್ ಡಿಕ್ವೆಲ್ಲಾ ( 12 ರನ್) ಮತ್ತು ರಮೇಶ್ ಮೆಂಡಿಸ್ (12 ರನ್) ಹೆಚ್ಚು ಹೊತ್ತು ನಿಲ್ಲಲಿಲ್ಲ.
ಹೆಚ್ಚು ಕ್ರೀಸ್ ಕಾಯ್ದುಕೊಂಡ ಚಾಂಡಿಮಲ್ಗೆ ಕೆಳ ಸರದಿಯ ಬ್ಯಾಟ್ಸ್ಮನ್ಗಳು ಸಾಥ್ ನೀಡಿದರು. ಮಹೀಶ್ ತೀಕ್ಷಣ 57 ಎಸೆತ ಆಡಿ ಔಟಾದರು. ದಿನದ ಅಂತ್ಯಕ್ಕೆ ಮೆಂಡೀಸ್ 121 ಎಸೆತಗಳಲ್ಲಿ 5 ಫೋರ್ ಮತ್ತು 2 ಸಿಕ್ಸರ್ ನೆರವಿನಿಂದ ಅಜೇಯ 86 ರನ್ಗಳಿಸಿದ್ದಾರೆ. ಪ್ರಭಾತ್ ಜಯಸೂರ್ಯ ಒಬ್ರೇ ಕ್ರೀಸ್ನಲ್ಲಿ ಉಳಿದಿದ್ದಾರೆ. ಶ್ರೀಲಂಕಾ 2ನೇ ಇನ್ನಿಂಗ್ಸ್ನಲ್ಲಿ ಈಗಾಗಲೇ 9 ವಿಕೆಟ್ ಕಳೆದುಕೊಂಡು 329 ರನ್ಗಳಿಸಿ ಪಂದ್ಯದಲ್ಲಿ 333 ರನ್ ಮುನ್ನಡೆ ಸಾಧಿಸಿದೆ.
ಟರ್ನಿಂಗ್ ಟ್ರ್ಯಾಕ್ನಲ್ಲಿ ಪಾಕ್ ತಂಡ ಸ್ಪಿನ್ನರ್ಗಳಾದ ಮೊಹಮ್ಮದ್ ನವಾಜ್ 5 ಹಾಗೂ ಯಾಸಿರ್ ಶಾ 3 ವಿಕೆಟ್ ಪಡೆದಿದ್ದಾರೆ. 4ನೇ ದಿನ ಪಾಕ್ ಚೇಸಿಂಗ್ ಟಫ್ ಆಗಿದ್ದರೂ, ಇಂಟ್ರೆಸ್ಟಿಂಗ್ ಆಗಿರಲಿದೆ.