SL v PAK test cricket : ಬಾಬರ್ ಆಜ಼ಂ ಶತಕದ ಅಬ್ಬರ: ಅತ್ಯಧಿಕ ಶತಕ ಬಾರಿಸಿ ಮಿಂಚಿದ ಪಾಕ್ ನಾಯಕ

ಭರ್ಜರಿ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜ಼ಂ, ಅತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಆ ಮೂಲಕ ಹೆಚ್ಚು ಶತಕ ಬಾರಿಸಿದ ಪಾಕ್ ತಂಡದ ನಾಯಕರಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.
2022ರಲ್ಲಿ ಅದ್ಭುತ ಫಾರ್ಮ್ ಕಂಡುಕೊಂಡಿರುವ ಬಾಬರ್ ಆಜ಼ಂ, ತಂಡದ ಬ್ಯಾಟಿಂಗ್ ಶಕ್ತಿಯಾಗಿ ಮಿಂಚುತ್ತಿದ್ದಾರೆ. ಅತಿಥೇಯ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಬಾಬರ್ ಆಜ಼ಂ(119) ಶತಕ ಸಿಡಿಸಿ ಅಬ್ಬರಿಸಿದರು. ಆ ಮೂಲಕ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದ್ದ ತಂಡಕ್ಕೆ ಆಸರೆಯಾದ ಬಾಬರ್, ಪಾಕಿಸ್ತಾನ ತಂಡದ ನಾಯಕನಾಗಿ ಒಂಭತ್ತನೇ ಸೆಂಚುರಿ ಬಾರಿಸಿದರು. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಪಾಕಿಸ್ತಾನ ತಂಡದ ನಾಯಕನಾಗಿ ಹೆಚ್ಚು ಶತಕಗಳಿಸಿದ ಸಾಧನೆಯ ಮಾಡಿದರು. ಆ ಮೂಲಕ ಪಾಕ್ ತಂಡದ ಮಾಜಿ ಆಟಗಾರ ಇನ್ಜಮಾಮ್-ಉಲ್-ಹಕ್ ಅವರನ್ನ ಹಿಂದಿಕ್ಕಿದರು.

ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದಂದು ಕಣಕ್ಕಿಳಿದ ಬಾಬರ್ ಆಜ಼ಂ, ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದರು. ತಮ್ಮ 70ನೇ ಇನ್ನಿಂಗ್ಸ್ ನಲ್ಲಿ 9ನೇ ಶತಕ ಸಿಡಿಸಿದ ಬಾಬರ್ ಅವರ ಶತಕದ ನೆರವಿನಿಂದ ಪಾಕಿಸ್ತಾನ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 218 ರನ್ಗಳಿಸುವ ಮೂಲಕ 4 ರನ್ ಗಳ ಹಿನ್ನಡೆ ಅನುಭವಿಸಿತು. ಬಾಬರ್ ಆಜ಼ಂ ಹೊರತುಪಡಿಸಿ ಪಾಕಿಸ್ತಾನದ ಯಾವುದೇ ಬ್ಯಾಟ್ಸ್ಮನ್ ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ಹೆಚ್ಚು ಶತಕಗಳಿಸಿದ ಪಾಕಿಸ್ತಾನದ ನಾಯಕರು
ಬಾಬರ್ ಆಜ಼ಂ – 9 ಶತಕ (70 ಇನ್ನಿಂಗ್ಸ್)
ಇನ್ಜಮಾಮ್-ಉಲ್-ಹಕ್ – 9 ಶತಕ (131 ಇನ್ನಿಂಗ್ಸ್)
ಮಿಸ್ಬಾ-ಉಲ್-ಹಕ್ – 8 ಶತಕ (151 ಇನ್ನಿಂಗ್ಸ್)
ಇಮ್ರಾನ್ ಖಾನ್ – 6 ಶತಕ (187 ಇನ್ನಿಂಗ್ಸ್)
ಅಜ಼ರ್ ಅಲಿ – 5 ಶತಕ (40 ಇನ್ನಿಂಗ್ಸ್)