ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಅಲೆಕ್ಸ್ ಕ್ಯಾರಿ(45*) ಹಾಗೂ ಕೆಮರೂನ್ ಗ್ರೀನ್(25*) ಜವಾಬ್ದಾರಿಯ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 4 ವಿಕೆಟ್‌ಗಳ ಗೆಲುವು ಸಾಧಿಸಿತು.
ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಚಮಿಕ ಕರುಣಾರತ್ನೆ(75*) ಅವರ ಅದ್ಭುತ ಬ್ಯಾಟಿಂಗ್‌ನಿಂದ 43.1 ಓವರ್‌ಗಳಲ್ಲಿ 160 ರನ್‌ಗಳಿಗೆ ಆಲೌಟ್ ಆಯಿತು. ಈ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ 39.3 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್‌ಗಳಿಸುವ ಮೂಲಕ ಗೆಲವು ಸಾಧಿಸಿತು. ಈ ಗೆಲುವಿನೊಂದಿಗೆ ಈಗಾಗಲೇ ಸರಣಿ ಸೋಲು ಕಂಡಿರುವ ಆಸೀಸ್ 2-3ರ ಅಂತರದಿಂದ ಸರಣಿ ಪೂರ್ಣಗೊಳಿಸಿತು.

ಲಂಕಾ ಬ್ಯಾಟಿಂಗ್ ವೈಫಲ್ಯ:
ಕೊನೆಯ ಲೀಗ್ ಪಂದ್ಯದಲ್ಲೂ ಗೆಲುವು ಸಾಧಿಸುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಶ್ರೀಲಂಕಾ ಬ್ಯಾಟಿಂಗ್ ವೈಫಲ್ಯ ಕಂಡಿತು. ಆರಂಭಿಕರಾದ ಗುಣತಿಲಕಾ(8) ಹಾಗೂ ನಿಸ್ಸಂಕಾ(2) ಬಹುಬೇಗನೆ ವಿಕೆಟ್ ಒಪ್ಪಿಸಿದರೆ. ಕುಸಲ್ ಮೆಂಡಿಸ್(26) ರನ್‌ಗಳ ಉಪಯುಕ್ತ ರನ್‌ಗಳಿಸಿ ಔಟಾದರು. ನಂತರ ಬಂದ ಚಂಡಿಮಾಲ್(6), ಅಸಲಂಕಾ(14), ಶಣಕಾ(1) ಹಾಗೂ ವೆಲ್ಲಲಗೆ(4) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಒಂದೆಡೆ ವಿಕೆಟ್‌ಗಳು ಬೀಳುತ್ತಿದ್ದರು ಜವಾಬ್ದಾರಿಯ ಆಟವಾಡಿದ ಕರುಣಾರತ್ನೆ(75) ಆಕರ್ಷಕ ಬ್ಯಾಟಿಂಗ್ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 150 ರನ್‌ಗಳ ಗಡಿದಾಟಿಸಿದರು. ಕೆಳ ಕ್ರಮಾಂಕದಲ್ಲಿ ವೆಂಡರ್ಸೆ(4), ಮಧುಸನ್(15) ಹಾಗೂ ತೀಕ್ಷಣ(2) ಹೆಚ್ಚಿನ ರನ್‌ಗಳಿಸಲಿಲ್ಲ. ಆಸ್ಟ್ರೇಲಿಯಾ ಪರ ಹೆಜ಼ಲ್ವುಡ್, ಕುನ್ಹೆಮನ್ ಹಾಗೂ ಕಮ್ಮಿನ್ಸ್ ತಲಾ 2 ವಿಕೆಟ್ ಪಡೆದರೆ, ಮ್ಯಾಕ್ಸ್‌ವೆಲ್ ಹಾಗೂ ಗ್ರೀನ್ 1 ವಿಕೆಟ್ ಪಡೆದುಕೊಂಡರು.
ಆಸೀಸ್‌ಗೆ ಕ್ಯಾರಿ-ಗ್ರೀನ್ ಆಸರೆ:
ಶ್ರೀಲಂಕಾ ನೀಡಿದ 161 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾಕ್ಕೆ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟರು. ಆರಂಭಿಕರಾದ ವಾರ್ನರ್(10) ಹಾಗೂ ಫಿಂಚ್(0) ನಿರೀಕ್ಷಿತ ಆರಂಭ ನೀಡುವಲ್ಲಿ ವಿಫಲರಾದರು. ಇವರ ಬೆನ್ನಲ್ಲೇ ಜೋಶ್ ಇಂಗ್ಲಿಸ್(5) ಸಹ ಪೆವಿಲಿಯನ್ ಸೇರಿದರು. ಬಳಿಕ ಜೊತೆಯಾದ ಮಿಚೆಲ್ ಮಾರ್ಷ್(24), ಲಬುಸ್ಚೆಗ್ನೆ(31) ಹಾಗೂ ಮ್ಯಾಕ್ಸ್‌ವೆಲ್(16) ತಂಡಕ್ಕೆ ಚೇತರಿಕೆ ನೀಡಿದರು. ಅಂತಿಮವಾಗಿ ಅಲೆಕ್ಸ್ ಕ್ಯಾರಿ(45*) ಹಾಗೂ ಕೆಮರೂನ್ ಗ್ರೀನ್(25*) ತಂಡವನ್ನು ಗೆಲುವಿನ ದಡಸೇರಿಸುವಲ್ಲಿ ಯಶಸ್ವಿಯಾದರು. ಲಂಕಾ ಪರ ದುನಿತ್ ವೆಲ್ಲಲಗೆ(3/42), ತೀಕ್ಷಣ(2/26) ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಲಂಕಾ ಪರ 5ನೇ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಚಮಿಕಾ ಕರುಣಾರತ್ನೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಉತ್ತಮ ಆಟವಾಡಿದ ಕುಸಲ್ ಮೆಂಡಿಸ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.