ನಾಯಕ ಆರನ್ ಫಿಂಚ್(62), ಟ್ರಾವಿಸ್ ಹೆಡ್(70*) ಅರ್ಧಶತಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ಜವಾಬ್ದಾರಿಯು ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 291 ರನ್ಗಳಿಸಿದೆ.
ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಘಾತದ ನಡುವೆಯೂ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾ 50 ಓವರ್ಗಳಲ್ಲಿ 6 ವಿಕೆಟ್ಗೆ 291 ರನ್ಗಳಿಸಿತು. ಆಸೀಸ್ ಪರ ಆರನ್ ಫಿಂಚ್(62) ಹಾಗೂ ಟ್ರಾವಿಸ್ ಹೆಡ್(70*) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ನಾಯಕ ಫಿಂಚ್ ಆಸರೆ:
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸೀಸ್ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್(9) ಬಹುಬೇಗನೆ ನಿರ್ಗಮಿಸಿದರೆ, ನಂತರ ಬಂದ ಮಿಚೆಲ್ ಮಾರ್ಷ್(10) ಸಹ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಬಳಿಕ ಕಣಕ್ಕಿಳಿದ ಲಬುಸ್ಚೆಗ್ನೆ(20) ಉಪಯುಕ್ತ ರನ್ಗಳಿಸಿ ಹೊರ ನಡೆದರು. ಒಂದೆಡೆ ವಿಕೆಟ್ ಬೀಳುತ್ತಿದ್ದರು ಜವಾಬ್ದಾರಿಯ ಆಟವಾಡಿದ ನಾಯಕ ಆರನ್ ಫಿಂಚ್ 62 ರನ್ (85 ಬಾಲ್, 4 ಬೌಂಡರಿ, 1 ಸಿಕ್ಸ್) ಅರ್ಧಶತಕ ಸಿಡಿಸಿ ಮಿಂಚಿದರು.
ಟ್ರಾವಿಸ್ ಹೆಡ್ ಅರ್ಧಶತಕ:
ಮಧ್ಯಮ ಕ್ರಮಾಂಕದಲ್ಲಿ ಜೊತೆಯಾದ ಅಲೆಕ್ಸ್ ಕ್ಯಾರಿ(49) ಹಾಗೂ ಟ್ರಾವಿಸ್ ಹೆಡ್ 70* ರನ್(65 ಬಾಲ್, 3 ಬೌಂಡರಿ, 3 ಸಿಕ್ಸ್) ಉತ್ತಮ ಆಟವಾಡಿದರು. ಶ್ರೀಲಂಕಾ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಈ ಜೋಡಿ, 5ನೇ ವಿಕೆಟ್ಗೆ 72 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಕೆಳ ಕ್ರಮಾಂಕದಲ್ಲಿ ಬಂದ ಗ್ಲೆನ್ ಮ್ಯಾಕ್ಸ್ವೆಲ್(33) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಟ್ರಾವಿಸ್ ಹೆಡ್, ಅರ್ಧಶತಕದ ಮೂಲಕ ತಂಡದ ಮೊತ್ತವನ್ನ 291ಕ್ಕೆ ಏರಿಸಿದರು. ಶ್ರೀಲಂಕಾ ಪರ ವೆಂಡರ್ಸೆ 3/49 ವಿಕೆಟ್ ಪಡೆದು ಮಿಂಚಿದರೆ, ಚಮೀರಾ, ವೆಲ್ಲಲಗೆ, ಧನಂಜಯ ಡಿಸಿಲ್ವಾ ತಲಾ 1 ವಿಕೆಟ್ ಪಡೆದರು.