ಟೀಮ್ ಇಂಡಿಯಾ (Team India) ಆಟಗಾರ ಅಂಬಾಟಿ ರಾಯುಡು (Ambati Rayudu) ಮುಂಬರುವ ದೇಶಿಯ ಟೂರ್ನಿಗಳಲ್ಲಿ(Domestic Tournament) ಬರೋಡಾ (Baroda) ತಂಡವನ್ನು ಪ್ರತಿನಿಧಿಸಲಿದ್ದಾರೆ. ಆಂಧ್ರ ಕ್ರಿಕೆಟ್ ಅಸೋಸಿಯೇಶನ್ನಿಂದ NOC ಪಡೆದಿರುವ ರಾಯುಡು 2ನೇ ಬಾರಿಗೆ ಬರೋಡಾ ತಂಡವನ್ನು ವೃತ್ತಿಪರ ಆಟಗಾರನಾಗಿ ಪ್ರವೇಶಿಸಲಿದ್ದಾರೆ. ಮೂರೂ ಫಾರ್ಮೆಟ್ ಆಟಕ್ಕೆ ರಾಯುಡು ಲಭ್ಯರಿದ್ದು, 2017ರ ಬಳಿಕ ಮೊದಲ ಬಾರಿಗೆ ಪ್ರಥಮ ದರ್ಜೆ ಪಂದ್ಯಗಳನ್ನು ಆಡಲಿದ್ದಾರೆ.

ರಾಯುಡು ಜೊತೆಗೆ ದೀಪಕ್ ಹೂಡ (Deepak Hooda) ಕೂಡ ಬರೋಡಾ ತಂಡವನ್ನು ಸೇರಿಕೊಳ್ಳಲಿದ್ದಾರೆ. ಹೂಡಾ ನಾಯಕ ಕೃನಾಲ್ ಪಾಂಡ್ಯಾ (Krunal Pandya) ಜೊತೆಗಿನ ಜಗಳದಿಂದಾಗಿ ತಂಡದಿಂದ ಹೊರ ಬಿದ್ದಿದ್ದರು. ಸದ್ಯ ಹೂಡ ಟೀಮ್ ಇಂಡಿಯಾದಲ್ಲಿ ಸ್ಥಾನ ಕೂಡ ಪಡೆದುಕೊಂಡಿದ್ದಾರೆ.

ದೇಶೀಯ ಕ್ರಿಕೆಟ್ನಲ್ಲಿ ಬರೋಡಾ ಹೊಸ ಸಾಧನೆ ಮಾಡುವ ದೃಷ್ಟಿಯಿಂದ ಈ ನಿರ್ಧಾರಗಳನ್ನು ಮಾಡಿದೆ. ಐಪಿಎಲ್ನಂತೆ ಆಟಗಾರರಿಗೆ ಇಲ್ಲೂ ಅವಕಾಶ ಸಿಗಲಿದೆ ಅನ್ನುವುದು ಈ ನಿರ್ಧಾರಗಳ ಹಿಂದಿನ ಲೆಕ್ಕಾಚಾರವಾಗಿದೆ.