Singapore Open: ಪ್ರಶಸ್ತಿಗೆ ಒಂದೇ ಮೆಟ್ಟಿಲು, PV Sindhu ಫೈನಲ್ ಗೆ
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಮಹಿಳಾ ಸೆಮಿಫೈನಲ್ ಪಂದ್ಯದಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು 21-15, 21-07 ರಿಂದ ಜಪಾನ್ ನ ಸೈನಾ ಕವಾಕಮಿ ಅವರನ್ನು ಮಣಿಸಿ ಉಪಾಂತ್ಯ ಪ್ರವೇಶಿದರು. 32 ನಿಮಿಷಗಳ ಕಾದಾಟದಲ್ಲಿ ಸಿಂಧು ಎದುರಾಳಿ ಆಟಗಾರ್ತಿಯನ್ನು ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದರು.

ಮೊದಲ ಗೇಮ್ ನ ಆರಂಭದಲ್ಲಿ ಅಂಕಗಳಲ್ಲಿಯೆಲ್ಲಿ ಹಿನ್ನಡೆ ಅನುಭವಿಸಿದರು. ಪರಿಣಾಮ ಸಿಂಧು 11-10 ರಿಂದ ಮೊದಲಾವಧಿಯಲ್ಲಿ ಮುನ್ನಡೆ ಸಾಧಿಸಿದರು. ನಂತರ ಪುಟಿದೇಳುವ ಸೂಚನೆ ನೀಡಿದ ಜಪಾನ್ ಆಟಗಾರ್ತಿಯ ತಂತ್ರ ಫಲಿಸಲಿಲ್ಲ. ಸಿಂಧು ಅಮೋಘ ಆಟದ ಪ್ರದರ್ಶನ ನೀಡಿ ಗೆಲುವು ದಾಖಲಿಸಿದರು.
ಮೊದಲ ಗೇಮ್ ನಲ್ಲಿ ಗೆಲುವು ದಾಖಲಿಸಿದ್ದ ಸಿಂಧು 1-0ರಿಂದ ಮುನ್ನಡೆ ಸಾಧಿಸಿದರು. ಎರಡನೇ ಗೇಮ್ ನ ಆರಂಭದಿಂದಲೂ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತೆ ಸಿಂಧು 11-04 ರಿಂದ ಮುನ್ನಡೆ ಸಾಧಿಸಿದರು. ಇಲ್ಲಿಂದ ಸಿಂಧು ಹಿಂತಿರುಗಿ ನೋಡಲೇ ಇಲ್ಲ. ಪರಿಣಾಮ ಪಂದ್ಯವನ್ನು ಸುಲಭವಾಗಿ ಗೆದ್ದು ಅಂತಿಮ ಪಂದ್ಯಕ್ಕೆ ಅರ್ಹತೆ ಪಡೆದರು.

ಒಂದು ವೇಳೆ ಸಿಂಧು ಪ್ರಶಸ್ತಿಯನ್ನು ಗೆದ್ದರೆ ಈ ಟೂರ್ನಿಯಲ್ಲಿ ಐದು ವರ್ಷದ ಬಳಿಕ ಭಾರತೀಯ ಆಟಗಾರ ಪ್ರಶಸ್ತಿ ಗೆದ್ದ ಸಾಧನೆ ಆಗುತ್ತದೆ. 2017ರಲ್ಲಿ ಎಚ್.ಎಸ್ ಪ್ರಣಯ್ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು. ಮಹಿಳಾ ವಿಭಾಗದಲ್ಲಿ ಸಿಂಧು ಎರಡನೇ ಬಾರಿಗೆ ಭಾರತಕ್ಕೆ ಪ್ರಶಸ್ತಿ ಗೆದ್ದ ಕೀರ್ತಿ ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಹಿಂದೆ ಸೈನಾ ನೆಹ್ವಾಲ್ 2010ರಲ್ಲಿ ಪ್ರಶಸ್ತಿ ಗೆದ್ದಿದ್ದರು.
Singapore Open, PV Sindhu, final, Semi-final