Once upon a time ಕ್ರಿಕೆಟ್ ದೇವರು.. ಈಗ ಕ್ರಿಕೆಟ್ ರಾಕ್ಷಸ kohli-and-sachin saaksha tv
ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಕ್ರಿಕೆಟ್ ರಾಕ್ಷಸ , ಕಿಂಗ್ ವಿರಾಟ್ ಕೊಹ್ಲಿ ಕೇವಲ ತಮ್ಮ ಬ್ಯಾಟಿಂಗ್ ನಿಂದಲೇ ವಿಶ್ವ ಕ್ರಿಕೆಟ್ ನ ದೊರೆಗಳಾಗಿದ್ದಾರೆ. ಈ ಇಬ್ಬರು ದಿಗ್ಗಜ ಬ್ಯಾಟರ್ ಗಳ ಮಧ್ಯೆ ಸಾಕಷ್ಟು ಸಾಮ್ಯತೆಗಳಿವೆ. ಕೆರಿಯರ್ ಅನ್ನ ಒಂದೇ ರೀತಿ ಕಟ್ಟಿಕೊಂಡು ಉತ್ತನ ಶಿಖರಗಳನ್ನ ಏರಿದ ಈ ಬ್ಯಾಟಿಂಗ್ ಮಾಂತ್ರಿಕ ಮಧ್ಯೆ ರನ್ ಗಳು, ಸೆಂಚೂರಿಗಳು, ದಾಖಲೆಗಳಷ್ಟೇ ಅಲ್ಲ ಮತ್ತೊಂದು ಕುತೂಹಲಕಾರಿ ಅಂಶದಲ್ಲೂ ಹೋಲಿಕೆ ಇದೆ. ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸುವುದರೊಂದಿಗೆ ಈ ವಿಚಾರ ಮುನ್ನೆಲೆಗೆ ಬಂದಿದೆ.
1997 ರಲ್ಲಿ ಸಚಿನ್ ತೆಂಡುಲ್ಕರ್ ಅವರನ್ನ ಹೇಗೆ ಟೀಂ ಇಂಡಿಯಾದ ನಾಯಕನ ಸ್ಥಾನದಿಂದ ವಜಾಗೊಳಿಸಲಾಯಿತೋ ಹಾಗೇ ವಿರಾಟ್ ಕೊಹ್ಲಿ ವಿಷಯದಲ್ಲಾಗಿದೆ.
ನನ್ನನ್ನ ನಾಯಕತ್ವದಿಂದ ವಜಾಗೊಳಿಸಿದ್ದಾಗ ಮೊದಲೇ ನನಗೆ ಬಿಸಿಸಿಐ ತಿಳಿಸಿರಲಿಲ್ಲ. ಮೀಡಿಯಾ ಮೂಲಕ ಆ ವಿಚಾರವನ್ನು ತಿಳಿದುಕೊಂಡ ನಾನು ಸಾಕಷ್ಟು ನೊಂದಿದ್ದೆ. ಅವಮಾನಕರವಾಗಿ ನನ್ನನ್ನು ನಾಯಕತ್ವದಿಂದ ಕೆಳಗಿಳಿಸಿದ್ದು, ತುಂಬಾ ಬೇಸರವನ್ನುಂಟು ಮಾಡಿತ್ತು ಎಂದು ಸಚಿನ್, ತಮ್ಮ ಪ್ಲೇಯಿಂಟ್ ಇಟ್ ಮೈ ವೇ ನಲ್ಲಿ ತಿಳಿಸಿದ್ದಾರೆ. ಆಗ ಸಚಿನ್ ಅವರಿಗೆ ತಿಳಿಸದೇ ಕ್ಯಾಪ್ಟನ್ಸಿ ಸ್ಥಾನದಿಂದ ಅವರನ್ನ ವಜಾಗೊಳಿಸಿದ್ದ ಬಿಸಿಸಿಐ ಇದೀಗ ಕೊಹ್ಲಿ ವಿಚಾರದಲ್ಲೂ ಅದೇ ರೀತಿ ಮಾಡಿದೆ.
ಹೌದು..! ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕರಾದ ಬಳಿಕ ಸಾಕಷ್ಟು ಐತಿಹಾಸಿಕ ಜಯಗಳು ಟೀಂ ಇಂಡಿಯಾ ಪಾಲಾಗಿವೆ. ಐಸಿಸಿ ಟ್ರೋಫಿ ಹೊರತು ಪಡಿಸಿ ದೇಶ- ವಿದೇಶದಲ್ಲಿ ಟೀಂ ಇಂಡಿಯಾ ಘರ್ಜಿಸಿದೆ. ಆದ್ರೆ ಕಳೆದ ಟಿ 20 ವಿಶ್ವಕಪ್ ವೇಳೆ ವಿರಾಟ್ ಕೊಹ್ಲಿ, ಏಕದಿನ ಮತ್ತು ಟೆಸ್ಟ್ ನಾಯಕತ್ವದ ಕಡೆ ಗಮನ ಹರಿಸುವ ನಿಟ್ಟಿನಲ್ಲಿ ಟಿ 20 ಮಾದರಿ ಕ್ರಿಕೆಟ್ ನ ನಾಯಕತ್ವಕ್ಕೆ ಗುಡ್ ಬೈ ಹೇಳಿದರು. ಅವರ ಸ್ಥಾನಕ್ಕೆ ರೋಹಿತ್ ಶರ್ಮಾ ಬಂದರು.
ಆದ್ರೆ ಕ್ಷಿಪ್ರ ಗತಿಯ ಬೆಳವಣಿಗೆಗಳ ಮಧ್ಯೆ ಬಿಸಿಸಿಐ ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿ ಅವರನ್ನ ವಜಾಗೊಳಿಸಿತು. ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಏಕದಿನ ಕ್ರಿಕೆಟ್ ನ ನಾಯಕರಾಗಿ ವಿರಾಟ್ ಈ ಹಿಂದೆ ಟೀಂ ಇಂಡಿಯಾದ ಯಾವ ನಾಯಕನಿಗೂ ಇಲ್ಲದ ದಾಖಲೆ ಇದ್ದರೂ ಅವರಿಂದ ನಾಯಕತ್ವ ಕಿತ್ತುಕೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಹಾಗೇ ಕೆಲ ಅನುಮಾನಗಳಿಗೂ ಕಾರಣವಾಗಿತ್ತು.
ಇತ್ತೀಚೆಗೆ ಈ ಬಗ್ಗೆ ಪ್ರೆಸ್ ಮೀಟ್ ನಡೆಸಿದ್ದ ವಿರಾಟ್, ಏಕದಿನ ನಾಯಕತ್ವದಿಂದ ತಮ್ಮನ್ನ ವಜಾಗೊಳಿಸಿದ್ದ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ. ಯಾರೂ ನನ್ನ ಜೊತೆ ಮಾತನಾಡಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಇದು ಹೀಗಿದ್ದರೇ ಟೀಂ ಇಂಡಿಯಾದ ಖ್ಯಾತಿಯನ್ನ ಸಾಗರೋತ್ತರಕ್ಕೆ ದಾಟಿಸಿದ ಈ ಇಬ್ಬರು ಲೆಜೆಂಡ್ಸ್ ಗಳನ್ನು ಅವಮಾನಕರ ರೀತಿಯಾಗಿ ನಾಯಕತ್ವದಿಂದ ಕೆಳಗಿಳಿಸಿದ್ದು, ಅವರಿಗಿದ್ದ ಸ್ಟಾರ್ ಡಂ ನಿಂದಲೇ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಇಬ್ಬರ ಕ್ರೇಜ್ಅನ್ನ ತಗ್ಗಿಸುವ ನಿಟ್ಟಿನಲ್ಲಿ ಬಿಸಿಸಿಐ ಈ ರೀತಿ ಮಾಡಿದೆ ಎನ್ನುತ್ತಿದ್ದಾರೆ ನೆಟ್ಟಿಗರು.