ಜಿಂಬಾಬ್ವೆ (Zimbabwe) ಕ್ರಿಕೆಟ್ (Cricketer) ತಂಡದ ಆಲ್ರೌಂಡರ್ (Allrounder) ಸಿಕಂದರ್ ರಾಜಾ (Sikandar Raza) ಈ ತಿಂಗಳ ಐಸಿಸಿ ಪುರುಷ ಕ್ರಿಕೆಟಿಗ ಪ್ರಶಸ್ತಿ (ICC Monthly Award) ಪಡೆದಿದ್ದಾರೆ. ಈ ಮೂಲಕ ಈ ಗೌರವ ಪಡೆದ ಮೊದಲ ಜಿಂಬಾಬ್ವೆಯ ಕ್ರಿಕೆಟರ್ ಎಂದು ಇತಿಹಾಸ ಬರೆದಿದ್ದಾರೆ. ರಾಜಾ ನ್ಯೂಜಿಲೆಂಡ್ ಆಲ್ರೌಂಡ್ (Newzealand) ಮಿಚೆಲ್ ಸ್ಯಾಂಟ್ನರ್ (Mithel Santner) ಮತ್ತು ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕ (England Test Cricket Captain) ಬೆನ್ ಸ್ಟೋಕ್ಸ್ (Ben Stokes) ಹಿಂದಿಕ್ಕಿ ಈ ಗೌರವ ಪಡೆದಿದ್ದಾರೆ. ರಾಜಾ ಆಗಸ್ಟ್ ತಿಂಗಳಲ್ಲಿ ಏಕದಿನ ಕ್ರಿಕೆಟ್ನಲ್ಲಿ 3 ಶತಕಗಳನು ದಾಖಲಿಸಿ ಈ ಗೌರವ ಸಂಪಾದಿಸಿದ್ದಾರೆ.
ರಾಜಾ ಬಾಂಗ್ಲಾದೇಶ ವಿರುದ್ಧ ಅಜೇಯ 135 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಆ ಬಳಿಕ ಮುಂದಿನ ಪಂದ್ಯದಲ್ಲೂ ಬಾಂಗ್ಲಾ ವಿರುದ್ಧ ಅಜೇಯ 117 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮಿಂಚಿದ್ದರು. ತವರಿನಲ್ಲಿ ಭಾರತದ ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲೂ 95 ಎಸೆತಗಳಲ್ಲಿ 115 ರನ್ಗಳಿಸಿದ್ದರು. ಆದರೆ ಆ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಲಾಗಲಿಲ್ಲ.
ಬ್ಯಾಟಿಂಗ್ ಜೊತೆ ಬೌಲಿಂಗ್ನಲ್ಲೂ ಸಿಕಂದರ್ ರಾಜಾ ಮಿಂಚಿನ ಆಟ ಪ್ರದರ್ಶಿಸಿದ್ದರು. ಒಟ್ಟಾರೆ ಪ್ರದರ್ಶನದಲ್ಲಿ ರಾಜಾ ಸ್ಯಾಂಟ್ನರ್ ಮತ್ತು ಸ್ಟೋಕ್ಸ್ಗಿಂತ ಮುಂದೆ ನಿಂತು ಈ ಗೌರವ ಪಡೆದುಕೊಂಡಿದ್ದಾರೆ.