ಟೀಂ ಇಂಡಿಯಾ(Team India)ದ ಭರವಸೆಯ ಯುವ ಬ್ಯಾಟ್ಸ್ಮನ್ ಶುಭ್ಮನ್ ಗಿಲ್(Shubman Gill) ODI ಕ್ರಿಕೆಟ್ ಪಾದಾರ್ಪಣೆ ಮಾಡಿದ ಮೂರು ವರ್ಷಗಳ ಬಳಿಕ ತಮ್ಮ ಚೊಚ್ಚಲ ಅರ್ಧಶತಕ ದಾಖಲಿಸಿದ್ದಾರೆ. ವೆಸ್ಟ್ ಇಂಡೀಸ್(West Indies) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಶುಭ್ಮನ್ ಗಿಲ್, ಬಿರುಸಿನ ಬ್ಯಾಟಿಂಗ್ ಮೂಲಕ 53 ಬಾಲ್ಗಳಲ್ಲಿ 64 ರನ್ಗಳಿಸಿ ಮಿಂಚಿದರು.
22 ವರ್ಷದ ಶುಭ್ಮನ್ ಗಿಲ್, 2019ರಲ್ಲಿ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಪಡೆದಿದ್ದರು, ನ್ಯೂಜಿ಼ಲೆಂಡ್ ವಿರುದ್ಧದ ಸರಣಿಯ ಮೂಲಕ ODI ಕ್ರಿಕೆಟ್ ಎಂಟ್ರಿಕೊಟ್ಟಿದ್ದರು. ಆದರೆ ನಂತರದ ದಿನಗಳಲ್ಲಿ ಟೀಂ ಇಂಡಿಯಾದ ಏಕದಿನ ತಂಡದಲ್ಲಿ ಶುಭ್ಮನ್ ಗಿಲ್ ಕಾಣಿಸಿಕೊಂಡಿರಲಿಲ್ಲ. ಆದರೆ ಹಿರಿಯ ಆಟಗಾರರ ಅನುಪಸ್ಥಿತಿ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಶುಭ್ಮನ್ ಗಿಲ್ ಆಯ್ಕೆಯಾಗಿದ್ದಾರೆ. ಅಲ್ಲದೇ ಕೆರೆಬಿಯನ್ನರ ವಿರುದ್ಧ ಮೊದಲ ಮುಖಾಮುಖಿಯಲ್ಲೇ ಅತ್ಯುತ್ತಮ ಆಟವಾಡಿದ ಗಿಲ್, 36 ಬಾಲ್ಗಳಲ್ಲಿ ಅರ್ಧಶತಕ ಸಿಡಿಸಿದರು. ಬಿರುಸಿನ ಬ್ಯಾಟಿಂಗ್ನಿಂದ ಮಿಂಚಿದ ಶುಭ್ಮನ್ ಗಿಲ್, ಅಂತಮವಾಗಿ 64 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ತಂಡದ ನಾಯಕ ಶಿಖರ್ ಧವನ್ ಜೊತೆಗೂಡಿ ಇನ್ನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್, ಮೊದಲ ವಿಕೆಟ್ಗೆ 17.4 ಓವರ್ಗಳಲ್ಲಿ 119 ರನ್ಗಳ ಶತಕದ ಜೊತೆಯಾಟವಾಡಿದರು. ತಮ್ಮ ಬ್ಯಾಟಿಂಗ್ನಲ್ಲಿ 6 ಬೌಂಡರಿ, 2 ಸಿಕ್ಸ್ ಸಿಡಿಸಿ ಮಿಂಚಿದ್ದ ಗಿಲ್, ರನ್ಗಳಿಸುವ ಆತುರದಲ್ಲಿ ರನೌಟ್ ಆಗಿ ನಿರಾಸೆ ಮೂಡಿಸಿದರು. ಏಕದಿನ ಕ್ರಿಕೆಟ್ಗಿಂತಲೂ ಹೆಚ್ಚಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಮಿಂಚಿರುವ ಶುಭ್ಮನ್ ಗಿಲ್, ಟೀಂ ಇಂಡಿಯಾ ಪರ 11 ಟೆಸ್ಟ್ ಪಂದ್ಯವನ್ನಾಡಿದ್ದಾರೆ. ಆದರೆ ಏಕದಿನ ಕ್ರಿಕೆಟ್ನಲ್ಲಿ 4 ಪಂದ್ಯವನ್ನಾಡಿರುವ ಗಿಲ್, 28.25ರ ಸರಾಸರಿಯಲ್ಲಿ 113 ರನ್ಗಳಿಸಿದ್ದು, 64 ಗರಿಷ್ಠ ಸ್ಕೋರ್ ಆಗಿದೆ.
WI v IND : ಮೂರು ವರ್ಷದ ಬಳಿಕ ಚೊಚ್ಚಲ ODI