Thrilling ಕೊನೆಯ ಓವರ್: ರೋಚಕ ಪಂದ್ಯ ಗೆದ್ದ Team India
ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನು 3 ರನ್‌ಗಳಿಂದ ಸೋಲಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, ನಾಯಕ ಶಿಖರ್ ಧವನ್ (97), ಶುಭಮನ್ ಗಿಲ್ (64) ಹಾಗೂ ಶ್ರೇಯಸ್ ಅಯ್ಯರ್ (54) ಅವರ ಅರ್ಧಶತಕದ ನೆರವಿನಿಂದ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿತು.
ಇದಕ್ಕೆ ಉತ್ತರವಾಗಿ ಕೆರಿಬಿಯನ್ ತಂಡ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 305 ರನ್ ಗಳಿಸಲಷ್ಟೇ ಶಕ್ತವಾಯಿತು. ಕೈಲ್ ಮೇಯರ್ಸ್ ವೆಸ್ಟ್ ಇಂಡೀಸ್ ಪರ ಗರಿಷ್ಠ 75 ರನ್ ಗಳಿಸಿದರು. ಬ್ರಾಂಡನ್ ಕಿಂಗ್ 54 ರನ್ ಗಳಿಸಿದರು. ಭಾರತದ ಪರ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ಯುಜ್ವೇಂದ್ರ ಚಹಾಲ್ ತಲಾ 2 ವಿಕೆಟ್ ಪಡೆದರು.

ಕೊನೆಯ ಓವರ್ ಥ್ರಿಲ್
ವೆಸ್ಟ್ ಇಂಡೀಸ್ ಗೆಲ್ಲಲು ಕೊನೆಯ ಓವರ್‌ನಲ್ಲಿ 15 ರನ್ ಗಳಿಸಬೇಕಾಗಿತ್ತು, ಆದರೆ ಅವರು ಕೇವಲ 11 ರನ್ ಗಳಿಸಲು ಸಾಧ್ಯವಾಯಿತು. ರೊಮಾರಿಯೊ ಶೆಫರ್ಡ್ (39) ಮತ್ತು ಅಕೀಲ್ ಹೊಸೈನ್ (33) ಅಜೇಯ ಜೊತೆಯಾಟದಿಂದ ವಿಂಡೀಸ್ ತಂಡವನ್ನು ಗೆಲ್ಲಲು ಪ್ರಯತ್ನಿಸಿದರು. ಆದರೆ ಮೊಹಮ್ಮದ್ ಸಿರಾಜ್ ಅದಕ್ಕೆ ಅವಕಾಶ ನೀಡಲಿಲ್ಲ. 97 ರನ್‌ಗಳ ಇನಿಂಗ್ಸ್ ಆಡಿದ ಟೀಂ ಇಂಡಿಯಾ ನಾಯಕ ಶಿಖರ್ ಧವನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದು ವೆಸ್ಟ್ ಇಂಡೀಸ್‌ಗೆ ಸತತ 7ನೇ ಏಕದಿನ ಅಂತಾರಾಷ್ಟ್ರೀಯ ಸೋಲು.

ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್‌ಗೆ 105 ಎಸೆತಗಳಲ್ಲಿ 119 ರನ್‌ಗಳ ಜೊತೆಯಾಟ ನೀಡಿದರು. ನಾಯಕ ಧವನ್ 53 ಎಸೆತಗಳಲ್ಲಿ 50 ರನ್ ಮತ್ತು ಶುಭಮನ್ ಗಿಲ್ 52 ಎಸೆತಗಳಲ್ಲಿ 64 ರನ್ ಕೊಡುಗೆ ನೀಡಿದರು. ಶ್ರೇಯಸ್ ಅಯ್ಯರ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 54 ರನ್ ಗಳಿಸಿ ಔಟಾದರು. ಶ್ರೇಯಸ್ ಅಯ್ಯರ್ ಮತ್ತು ಶಿಖರ್ ಧವನ್ ಎರಡನೇ ವಿಕೆಟ್‌ಗೆ 97 ಎಸೆತಗಳಲ್ಲಿ 94 ರನ್‌ಗಳ ಜೊತೆಯಾಟ ನೀಡಿದರು. ವೆಸ್ಟ್ ಇಂಡೀಸ್ ಪರ ಅಲ್ಜಾರಿ ಜೋಸೆಫ್ ಮತ್ತು ಗುಡಕೇಶ್ ಮೋತಿ ಗರಿಷ್ಠ 2-2 ವಿಕೆಟ್ ಪಡೆದರು.

ಉಭಯ ತಂಡಗಳ ನಡುವೆ ಇದುವರೆಗೆ 137 ಪಂದ್ಯಗಳು ನಡೆದಿವೆ. ಭಾರತ 68 ಪಂದ್ಯಗಳನ್ನು ಗೆದ್ದು 63 ಪಂದ್ಯಗಳಲ್ಲಿ ಸೋತಿದೆ. ಇದೇ ವೇಳೆ 2 ಪಂದ್ಯಗಳು ಟೈ ಆಗಿವೆ. 4 ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.

ವೆಸ್ಟ್ ಇಂಡೀಸ್ ಕೊನೆಯ ಬಾರಿಗೆ 2006 ರಲ್ಲಿ ತವರಿನಲ್ಲಿ ನಡೆದ ODI ಸರಣಿಯಲ್ಲಿ ಭಾರತವನ್ನು ಸೋಲಿಸಿತ್ತು. ಇದಾದ ನಂತರ ಭಾರತ ನಾಲ್ಕು ಬಾರಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದು, ಪ್ರತಿ ಬಾರಿ ಗೆದ್ದಿದೆ. ಉಭಯ ತಂಡಗಳ ನಡುವೆ ಒಟ್ಟು ಒಂಬತ್ತು ಏಕದಿನ ಸರಣಿಗಳು ನಡೆದಿದ್ದು, ಈ ಪೈಕಿ ಬ್ಲೂ ಆರ್ಮಿ ಐದರಲ್ಲಿ ಜಯ ಸಾಧಿಸಿದೆ.