ಐಪಿಎಲ್ 15ನೇ ಸೀಸನ್ ನಲ್ಲಿ ಶನಿವಾರದವರೆಗೆ 53 ಪಂದ್ಯಗಳು ನಡೆದಿವೆ. ರಾಜಸ್ಥಾನ್ ರಾಯಲ್ಸ್ ಲೀಗ್ನಲ್ಲಿ ಇನ್ನೂ ಮೂರು ಪಂದ್ಯಗಳನ್ನು ಆಡಬೇಕಿದೆ. ಈ ಮೂರು ಪಂದ್ಯಗಳು ರಾಜಸ್ಥಾನಕ್ಕೆ ಪ್ಲೇ-ಆಫ್ಗೆ ಹೋಗಲು ಬಹಳ ಮುಖ್ಯ. ಅದಕ್ಕೂ ಮುನ್ನ ರಾಜಸ್ಥಾನದ ಸ್ಟಾರ್ ಬ್ಯಾಟ್ಸ್ಮನ್ ವೆಸ್ಟ್ ಇಂಡೀಸ್ನ ಶಿಮ್ರೊನ್ ಹೆಟ್ಮೆಯರ್ ತಂಡವನ್ನು ತೊರೆದು ತಮ್ಮ ದೇಶಕ್ಕೆ (ಗಯಾನಾ) ಮರಳಿದ್ದಾರೆ.
![IPL ಬಿಟ್ಟು ತವರಿಗೆ ಮರಳಿದ Shimron Hetmyer ಕಾರಣ ಏನು ಗೊತ್ತಾ? 3 Shimron Hetmyer wife2](http://sportskarnataka.com/wp-content/uploads/2022/05/Shimron-Hetmyer-wife2.jpg)
Shimron Hetmyer has travelled back to Guyana early morning today for the imminent birth of his first child, but he’ll be back soon. 💗
Read more: https://t.co/cTUb3vFiNl#RoyalsFamily | @SHetmyer pic.twitter.com/u52aO9Dcct
— Rajasthan Royals (@rajasthanroyals) May 8, 2022
ಶಿಮ್ರೊನ್ ಹೆಟ್ಮೆಯರ್ ಅವರ ಪತ್ನಿ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಆದ್ದರಿಂದ ಅವರು ತಮ್ಮ ದೇಶಕ್ಕೆ ಮರಳಿದ್ದಾರೆ ಎಂದು ರಾಜಸ್ಥಾನ್ ರಾಯಲ್ಸ್ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ ಪೋಸ್ಟ್ನಲ್ಲಿ ತಿಳಿಸಿದೆ. ಅವರು ಶೀಘ್ರದಲ್ಲೇ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮಗುವಿನ ಜನನದ ನಂತರ ಅವರು ಮತ್ತೆ ಹಿಂತಿರುಗುತ್ತಾರೆ ಮತ್ತು ತಂಡದ ಭಾಗವಾಗುತ್ತಾರೆ ಎಂದು ತಿಳಿಸಿದೆ.
![IPL ಬಿಟ್ಟು ತವರಿಗೆ ಮರಳಿದ Shimron Hetmyer ಕಾರಣ ಏನು ಗೊತ್ತಾ? 4 Shimron Hetmyer 3](http://sportskarnataka.com/wp-content/uploads/2022/05/Shimron-Hetmyer-3.webp)
ರಾಜಸ್ಥಾನ ಪರ ಹೆಟ್ಮೆಯರ್ 73ರ ಸರಾಸರಿಯಲ್ಲಿ ರನ್
ಈ ಋತುವಿನಲ್ಲಿ ರಾಜಸ್ಥಾನ ಪರ ಹೆಟ್ಮೆಯರ್ 11 ಪಂದ್ಯಗಳಲ್ಲಿ 72.75 ಸರಾಸರಿಯಲ್ಲಿ 291 ರನ್ ಗಳಿಸಿದ್ದಾರೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಹೆಟ್ಮೆಯರ್ 16 ಎಸೆತಗಳಲ್ಲಿ 33 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದ್ದರು. ಐಪಿಎಲ್ನ ಮೆಗಾ ಹರಾಜಿನಲ್ಲಿ ಅವರನ್ನು ರಾಜಸ್ಥಾನ 8.50 ಕೋಟಿ ರೂಪಾಯಿಗೆ ಖರೀದಿಸಿತ್ತು.
![IPL ಬಿಟ್ಟು ತವರಿಗೆ ಮರಳಿದ Shimron Hetmyer ಕಾರಣ ಏನು ಗೊತ್ತಾ? 5 Shimron Hetmyer 2](http://sportskarnataka.com/wp-content/uploads/2022/05/Shimron-Hetmyer-2.webp)
ಐಪಿಎಲ್ ಲೀಗ್ನಲ್ಲಿ ರಾಜಸ್ಥಾನ್ ರಾಯಲ್ಸ್ ಇನ್ನೂ ಮೂರು ಪಂದ್ಯಗಳನ್ನು ಆಡಬೇಕಿದೆ. ರಾಜಸ್ಥಾನ ಮೇ 11 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ, ಮೇ 15 ರಂದು ಲಖನೌ ಜೈಂಟ್ಸ್ ವಿರುದ್ಧ ಮತ್ತು ಮೇ 20 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಬೇಕಾಗಿದೆ.
ರಾಜಸ್ಥಾನ್ ರಾಯಲ್ಸ್ ತಂಡ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದುವರೆಗೆ ಆಡಿದ 11 ಪಂದ್ಯಗಳಲ್ಲಿ ರಾಜಸ್ಥಾನ 7ರಲ್ಲಿ ಗೆದ್ದು 3ರಲ್ಲಿ ಸೋತಿದೆ.