Jaspreet bumrah- ಬೇಸರದಲ್ಲಿ ಟ್ವೀಟ್ ಮಾಡಿದ ಯಾರ್ಕರ್ ಕಿಂಗ್
ಮುಂಬರುವ ಟಿ20 ವಿಶ್ವಕಪ್ ನಲ್ಲಿ ತಂಡದ ಭಾಗವಾಗದಿರುವುದಕ್ಕೆ ಟೀಮ್ ಇಂಡಿಯಾದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಬೇಸರ ಹೊರ ಹಾಕಿದ್ದಾರೆ.
ಬೆನ್ನು ನೋವಿಗೆ ಗುರಿಯಾಗಿರುವ ಬುಮ್ರಾ ಅಧಿಕೃತವಾಗಿ ಟಿ20 ವಿಶ್ವಕಪ್ ನಿಂದ ಹೊರ ನಡೆದಿದ್ದಾರೆ.
ಟ್ವೀಟರ್ ನಲ್ಲಿ ಈ ಕುರಿತು ಬುಮ್ರಾ, ಟಿ20 ವಿಶ್ವಕಪ್ ಸಮಸ್ಯೆಯಿಂದಾಗಿ ಅಂತಾ ನನಗೆ ತುಂಬ ನಿರಾಸೆಯಾಗಿದೆ. ನಿಮ್ಮ ಹಾರೈಕೆ, ಬೆಂಬಲಕ್ಕ ಧನ್ಯವಾದ. ನಾನು ಚೇತರಿಸಿಕೊಂಡ ನಂತರ ವಿಶ್ವಕಪ್ ನಲ್ಲಿ ತಂಡವನ್ನು ಬೆಂಬಲಿಸುತ್ತೇನೆ ಎಂದು ಬುಮ್ರಾ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಸೋಮವಾರ ತಜ್ಞರ ಜೊತೆ ಚರ್ಚಿಸಿ ಬುಮ್ರಾ ಟಿ20 ವಿಶ್ವಕಪ್ ನಿಂದ ಅಧಿಕೃತವಾಗಿ ಹೊರ ನಡೆದಿದ್ದಾರೆ ಎಂದು ಬಿಸಿಸಿಐ ಹೇಳಿತು.
ಟಿ20 ವಿಶ್ವಕಪ್ ನಲ್ಲಿ ಬುಮ್ರಾ ಆಡಲು ಸಾದ್ಯವಿಲ್ಲ ಎಂದು ಬಿಸಿಸಿಐ ವೈದ್ಯಕೀಯ ತಂಡ ವರದಿ ನೀಡಿದೆ. ವಿವರವಾದ ಮೌಲ್ಯಮಾಪನ ಮತ್ತು ತಜ್ಞರ ಸಲಹೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಬಿಸಿಸಿಐ ಹೇಳಿದೆ.
ಚುಟುಕು ಮಹಾ ಕದನದಲ್ಲಿ ಬುಮ್ರಾ ಜಾಗದಲ್ಲಿ ಅನುಭವಿ ವೇಗಿ ಮೊಹ್ಮದ್ ಶಮಿ ಅಥವಾ ದೀಪಕ್ ಚಾಹರ್ ಆಡುವ ಸಾಧ್ಯತೆ ಹೆಚ್ಚಿದೆ.
28 ವರ್ಷದ ಬುಮ್ರಾ ಬೆನ್ನು ನೋವಿಗೆ ಗುರಿಯಾಗಿ ಜುಲೈನಲ್ಲಿ ಎರಡು ತಿಂಗಳ ನಂತರ ತಂಡಕ್ಕೆ ಮರಳಿದ್ದರು.