Shikhar Dhawan – ರೀಲ್ ನಲ್ಲಿ ಇಂದಿರಾ ನಗರದ ಗೂಂಡಾ..!

ಶಿಖರ್ ಧವನ್. ಟೀಮ್ ಇಂಡಿಯಾದ ಗಬ್ಬರ್ ಸಿಂಗ್. ಸದಾ ಸ್ಟೈಲೀಶ್ ಆಗಿರುವ ಶಿಖರ್ ಧವನ್ ಅವರು ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾವನ್ನು ಮುನ್ನೆಡೆಸುತ್ತಿದ್ದಾರೆ.
ಕ್ರಿಕೆಟ್ ಮೈದಾನದಲ್ಲಿ ಕ್ಯಾಚ್ ಹಿಡಿಯುವಾಗ ತೊಡೆ ತಟ್ಟಿ ಸಂಭ್ರಮಿಸುವ ಸ್ಟೈಲ್ಲೇ ಸೂಪರ್. ಬಿರುಸಿನ ಬ್ಯಾಟಿಂಗ್ ಜೊತೆಗೆ ಕೂಲ್ ಆಗಿಯೇ ಇರುವ ಧವನ್ ಮೈದಾನದ ಹೊರಗೂ ಅಷ್ಟೇ ಖುಷ್ ಖುಷ್ ಆಗಿರುತ್ತಾರೆ.
ಅದರಲ್ಲೂ ಸಾಮಾಜಿಕ ಜಾಲ ತಾಣದಲ್ಲೂ ಧವನ್ ತುಂಬಾನೇ ಆಕ್ಟೀವ್ ಆಗಿರುತ್ತಾರೆ. ವಿಭಿನ್ನ ಕಂಟೆಟ್ ಹಾಗೂ ರೀಲ್ಸ್ ಮೂಲಕವೂ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ.
ಇದೀಗ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಜುಲೈ 22ರಂದು ಮೊದಲ ಏಕದಿನ ಪಂದ್ಯವನ್ನು ಆಡಲಿದೆ. ಒಟ್ಟು ಮೂರು ಏಕದಿನ ಪಂದ್ಯಗಳನ್ನು ಟೀಮ್ ಇಂಡಿಯಾ ಕೆರೆಬಿಯನ್ ನಾಡಿನಲ್ಲಿ ಆಡಲಿದೆ. ಏಕದಿನ ಸರಣಿಗೆ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಬ್ ಪಂತ್, ಜಸ್ಪ್ರಿತ್ ಬೂಮ್ರಾ, ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಬಳಿಕ ಐದು ಪಂದ್ಯಗಳ ಟಿ-20 ಸರಣಿ ನಡೆಯಲಿದೆ.

ಟೀಮ್ ಇಂಡಿಯಾ ಪೋರ್ಟ್ ಆಫ್ ಸ್ಪೇನ್ ಗೆ ಆಗಮಿಸಿದಾಗ ಶಿಖರ್ ಧವನ್ ಟೀಮ್ ಇಂಡಿಯಾ ಆಟಗಾರರ ಜೊತೆ ರೀಲ್ಸ್ ಮಾಡಿದ್ದಾರೆ. – ಈ ರೀಲ್ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಕೂಡ ಆಗಿದೆ.
ಈ ರೀಲ್ ನ ವಿಶೇಷ ಅಂದ್ರೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಕೂಡ ಕಾಣಿಸಿಕೊಂಡಿರುವುದು. ಶಿಖರ್ ಧವನ್ ಮೊದಲು ಕಾಣಿಸಿಕೊಂಡ್ರೆ, ನಂತರ ಟೀಮ್ ಇಂಡಿಯಾ ಆಟಗಾರರು ಕಾಣಿಸಿಕೊಂಡಿದ್ದಾರೆ. ವಿಡಿಯೋದ ಕೊನೆಯಲ್ಲಿ ರಾಹುಲ್ ದ್ರಾವಿಡ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಸಾಮಾನ್ಯವಾಗಿ ರಾಹುಲ್ ದ್ರಾವಿಡ್ ಗಂಭೀರವಾಗಿಯೇ ಇರುತ್ತಾರೆ. ಆದ್ರೆ ಈ ವಿಡಿಯೋದಲ್ಲಿ ಟೀಮ್ ಇಂಡಿಯಾದ ಹುಡುಗಾಟದ ಹುಡುಗರ ಜೊತೆ ಹುಡುಗಾಟ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
rahul dravid team india sports karnataka
ಇನ್ನು ವಿಡಿಯೋಗೆ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಕಮೆಂಟ್ ಗಳು ಕೂಡ ಬಂದಿವೆ. ಟೀಮ್ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಮತ್ತು ಬಾಲಿವುಡ್ ನಟ ರಣ್ವೀರ್ ಸಿಂಗ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಅಂದ ಹಾಗೇ ಶಿಖರ್ ಧವನ್ ಅವರು ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವುದು ಇದು ಎರಡನೇ ಬಾರಿ. ಇನ್ನೊಂದು ವಿಶೇಷ ಅಂದ್ರೆ ಎರಡು ಬಾರಿ ಕೂಡ ಧವನ್ ತಂಡಕ್ಕೆ ಕೋಚ್ ಆಗಿದ್ದು ರಾಹುಲ್ ದ್ರಾವಿಡ್. ಟೀಮ್ ಇಂಡಿಯಾದ ಹೆಡ್ ಕೋಚ್ ಆಗುವುದಕ್ಕೆ ಮುನ್ನ ದ್ರಾವಿಡ್ ಅವರು ಎನ್ ಸಿಎ ಮುಖ್ಯಸ್ಥರಾಗಿದ್ದರು. ಆಗ ಶ್ರೀಲಂಕಾ ವಿರುದ್ಧ ಟಿ-20 ಸರಣಿಗೆ ಶಿಖರ್ ಧವನ್ ನಾಯಕನಾಗಿದ್ರೆ, ರಾಹುಲ್ ದ್ರಾವಿಡ್ ಕೋಚ್ ಆಗಿದ್ದರು.