ರ್
ಒಬ್ಬರ ದುರಾದೃಷ್ಟ ಮತ್ತೊಬ್ಬರಿಗೆ ಅದೃಷ್ಟವಾಗುತ್ತದೆ ಅನ್ನುವುದು ಕ್ರಿಕೆಟ್‌ನಲ್ಲಿ ಸತ್ಯವಾಗಿದೆ. ಟೀಮ್ ಇಂಡಿಯಾದ (Team India) ಯುವ ವೇಗಿ (Fast Bowler) ಕರ್ನಾಟದಕ ಪ್ರಸಿಧ್ ಕೃಷ್ಣ (Prasidh Krishna) ನ್ಯೂಜಿಲೆಂಡ್ (Newzealand A) ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ (India A) ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಮೊಣಕಾಲಿನ ಗಾಯಕ್ಕೆ ಒಳಗಾಗಿ ತಂಡದಿಂದ ಹೊರಬಿದ್ದಿದ್ದಾರೆ. ಪ್ರಸಿಧ್ ಜಾಗಕ್ಕೆ ಶಾರ್ದೂಲ್ ಥಾಕೂರ್ (Shardul Thakur) ಆಯ್ಕೆಯಾಗಿದ್ದಾರೆ.
26 ವರ್ಷದ ಪ್ರಸಿಧ್ ಬೆನ್ನು ನೋವಿನ ಸಮಸ್ಯೆ ಕೂಡ ಎದುರಿಸುತ್ತಿದ್ದಾರೆ ಎಂದು ಬಿಸಿಸಿಐ (BCCI) ಹೇಳಿದೆ. ಹೀಗಾಗಿ ಮೊದಲ ಟೆಸ್ಟ್ ಪಂದ್ಯದಲ್ಲೂ ಅವರು ಆಡಲಿಲ್ಲ. ಇವರ ಜಾಗದಲ್ಲಿ ಮುಖೇಶ್ ಕುಮಾರ್ ಆಡಿ ಗಮನ ಸೆಳೆಯುವ ಪ್ರದರ್ಶನ ನೀಡಿದ್ದರು. ಶಾರ್ದೂಲ್ ದುಲೀಪ್ ಟ್ರೋಫಿ ಪಂದ್ಯಕ್ಕೆ ಪಶ್ಚಿಮ ವಲಯ ಪರವಾಗಿ ಆಡಲು ಆಯ್ಕೆಯಾಗಿದ್ದರು. ಈಗ ಭಾರತ ಎ ತಂಡಕ್ಕೆ ಸೇರಿಕೊಳ್ಳಬೇಕೀರುವುದರಿಂದ ಥಾಕೂರ್ ಜಾಗದಲ್ಲಿ ಸೌರಾಷ್ಟ್ರದ ಚೇತನ್ ಸಕಾರಿಯಾ ಆಡಲಿದ್ದಾರೆ.
ಭಾರತ ಎ ತಂಡ ಇನ್ನೆರಡು ಟೆಸ್ಟ್ ಪಂದ್ಯಗಳನ್ನು ನ್ಯೂಜಿಲೆಂಡ್ ಎ ವಿರುದ್ಧ ಆಡಲಿದೆ. 2ನೇ ಟೆಸ್ಟ್ ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನದಲ್ಲಿ ನಡೆದರೆ ಕೊನೆಯ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ.
ದುಲೀಪ್ ಟ್ರೋಫಿಯಲ್ಲಿ (Duleep Trophy) ಪಶ್ಚಿಮ ವಲಯ (West Zone) ತಂಡವನ್ನು ಅಜಿಂಕ್ಯಾ ರಹಾನೆ (Ajinkya Rahane) ಮುನ್ನಡೆಸಲಿದ್ದಾರೆ . ಸೆಪ್ಟಂಬರ್ 8 ರಿಂದ 25ರ ತನಕ ದುಲೀಪ್ ಟ್ರೋಫಿ ಪಂದ್ಯಗಳು ನಡೆಯಲಿದೆ. ಟೆಸ್ಟ್ ತಂಡದಲ್ಲಿ ಮತ್ತೆ ಸ್ಥಾನದ ಕನಸಿನಲ್ಲಿರುವ ರಹಾನೆಗೆ ಈ ಪಂದ್ಯ ಅತಿ ಮುಖ್ಯ ಎನಿಸಿದೆ.