ಕ್ರಿಕೆಟ್‌ನಲ್ಲಿ ಕೆಲವೊಮ್ಮೆ ಅನಿವಾರ್ಯ ಅನ್ನುವ ಬದಲಾವಣೆಗಳಾಗುತ್ತವೆ. ಒಮ್ಮೊಮ್ಮೆ ಇವು ತಂಡಕ್ಕೆ ವರವಾದರೆ, ಹಲವು ಬಾರಿ ಶಾಪವಾಗಿದೆ. ಟೀಮ್ ಇಂಡಿಯಾದಲ್ಲಾಗಿರುವ (Team India) ಬದಲಾವಣೆಗಳು ತಂಡದ ಲೆಕ್ಕಾಚಾರ ತಪ್ಪಿಸಿವೆ. ಅಷ್ಟೇ ಅಲ್ಲ ಆಟದ ಲಯವನ್ನು ಕೆಡಿಸಿದೆ. ಪಂತ್ ಬೇಕಾ ಅಥವಾ ಕಾರ್ತಿಕ್ (Pant VS DK)ಆಡಬೇಕಾ ಅನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಗಾಯಗೊಂಡ ರವೀಂದ್ರ ಜಡೇಜಾ (Ravindra Jadeja) ಸ್ಥಾನಕ್ಕೆ ಅಕ್ಸರ್ ಪಟೇಲ್ (Axar Patel) ಬಂದಿದ್ದಾರೆ. ಅಕ್ಸರ್ ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಜಡೇಜಾ ಸ್ಥಾನವನ್ನು ತುಂಬಬಹುದು. ಆದರೆ ಬ್ಯಾಟಿಂಗ್‌ನಲ್ಲಿ ಅಂದುಕೊಂಡಷ್ಟು ಸ್ಥಿರ ಪ್ರದರ್ಶನ ನೀಡಿಲ್ಲ. ಹೀಗಾಗಿ ಅಕ್ಸರ್ ಪಟೇಲ್ ಬದಲು ರಿಷಬ್ ಪಂತ್ (Rishab Pant) ಸ್ಥಾನ ಪಡೆದರು. ಎಡಗೈ ಬ್ಯಾಟ್ಸ್‌ಮನ್ ಅನ್ನುವ ಕಾರಣ ಅದರ ಹಿಂದಿತ್ತು. ಲೆಗ್‌ಸ್ಪಿನ್ನರ್‌ಗಳನ್ನು ಮತ್ತು ಎಡಗೈ ಸ್ಪಿನ್ನರ್‌ಗಳನ್ನು ದಂಡಿಸಲು ಲೆಫ್ಟ್ ಹ್ಯಾಂಡ್ ಬ್ಯಾಟ್ಸ್‌ಮನ್ ಬೇಕೇ ಬೇಕು ಅನ್ನುವ ಕಾಲ್ಕ್ಯೂಲೇಷನ್ ಇದ್ದರ ಹಿಂದಿತ್ತು.
ಟೀಮ್ ಇಂಡಿಯಾದ ಈ ಆಯ್ಕೆ ಬೌಲಿಂಗ್ ಮೇಲೆ ಹೊಡೆತ ಕೊಡುತ್ತೆ ಅನ್ನುವ ಲೆಕ್ಕಾಚಾರವಿತ್ತು. ಹೀಗಾಗಿ ಅಲ್ಲಿಗೆ ದಿನೇಶ್ ಕಾರ್ತಿಕ್ (Dinesh Karthik) ಬದಲು ಎಕ್ಸ್ ಟ್ರಾ ಸ್ಪಿನ್ನರ್ ಆಯ್ಕೆ ನಡೆಯಿತು. ಆವೇಶ್ ಖಾನ್ ಜಾಗಕ್ಕೆ ದೀಪಕ್ ಹೂಡ (Deepak Hooda) ಬಂದು ಬ್ಯಾಟಿಂಗ್ ಬಲ ಹೆಚ್ಚಿಸಿದೆ. ಆದರೆ ಪಂತ್ (Pant) ಸ್ಪಿನ್ನರ್‌ಗಳ ವಿರುದ್ಧ ಮಿಂಚಲಿಲ್ಲ. ಟೀಮ್ ಇಂಡಿಯಾದ ಲೆಕ್ಕಾಚಾರ ಉಲ್ಟಾ ಆಯಿತು.
ಟೀಮ್ ಇಂಡಿಯಾದ ಎಲ್ಲಾ ಆಟಗಾರರು ರೈಟ್ ಹ್ಯಾಂಡ್ ಬ್ಯಾಟ್ಸ್‌ಮನ್‌ಗಳೇ ಆಗಿದ್ದಾರೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಹಸರಂಗ ಅವರನ್ನು ಎದುರಿಸಲು ಪಂತ್ ಅವರ ಅವಶ್ಯಕತೆ ಇದೆ. ಒಂದು ವೇಳೆ ಪಂತ್ ಕೈ ಬಿಟ್ರೆ ದಿನೇಶ್ ಕಾರ್ತಿಕ್ (DK) ಸ್ಥಾನ ಪಡೆಯುತ್ತಾರೆ. ಜೊತೆಗೆ ಯಜುವೇಂದ್ರ ಚಹಲ್ ಅಥವಾ ರವಿ ಬಿಷ್ಣೋಯಿ (Ravi Bishnoi) ಇಬ್ಬರಲ್ಲಿ ಒಬ್ಬರು ಅಕ್ಸರ್ ಪಟೇಲ್‌ಗೆ ದಾರಿ ಮಾಡಿಕೊಡಬೇಕಾಗುತ್ತದೆ. ಒಟ್ಟಿನಲ್ಲಿ ಜಡೇಜಾಗೆ ಆಗಿರುವ ಗಾಯ ಟೀಮ್ ಇಂಡಿಯಾದ ಲೆಕ್ಕಾಚಾರ ತಪ್ಪಿಸಿದೆ. ಟಿ೨೦ ವಿಶ್ವಕಪ್ ಹತ್ತಿರದಲ್ಲಿರುವಾಗ ಭಾರತ ಲಯ ತಪ್ಪಿರುವುದು ಅಭಿಮಾನಿಗಳಿಗೆ ಕಸಿವಿಸಿ ಉಂಟು ಮಾಡಿದೆ.