ಪಾಕಿಸ್ತಾನ ವಿರುದ್ಧ ಟಿ-20 ವಿಶ್ವಕಪ್ ಸೋಲಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿರುವ ಬಗ್ಗೆ ಮೊಹಮ್ಮದ್ ಶಮಿ ಈಗ ಮೌನ ಮುರಿದಿದ್ದಾರೆ.
ಅಕ್ಟೋಬರ್ನಲ್ಲಿ ಯುಎಇಯಲ್ಲಿ ನಡೆದ ಟಿ-20 ವಿಶ್ವಕಪ್ನಲ್ಲಿ, ತಂಡವು ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ಶಮಿ 3.5 ಓವರ್ಗಳಲ್ಲಿ 43 ರನ್ ನೀಡಿ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಲಾಗಿತ್ತು. ಮುಸಲ್ಮಾನರಾಗಿದ್ದ ಅವರನ್ನು ಪಾಕಿಸ್ತಾನದ ಬೆಂಬಲಿಗ ಎಂದೂ ಕರೆಯಲಾಗುತ್ತಿತ್ತು.
ಧರ್ಮದ ಆಧಾರದಲ್ಲಿ ಟ್ರೋಲ್ ಮಾಡಿದವರು ಭಾರತೀಯ ತಂಡದ ನಿಜವಾದ ಅಭಿಮಾನಿಗಳು ಅಥವಾ ಬೆಂಬಲಿಗರಲ್ಲ ಎಂದು ಶಮಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಂಥವರ ಯೋಚನೆಗೆ ಮದ್ದು ಇಲ್ಲ ಎಂದಿದ್ದಾರೆ.
“ನಾನು ದೇಶಕ್ಕೆ ನನ್ನ ನಿಷ್ಠೆಯನ್ನು ಸಾಬೀತುಪಡಿಸುವ ಅಗತ್ಯವಿಲ್ಲ. ನಾವು ಏನು ಮಾಡಬೇಕೆಂದು ನನಗೆ ತಿಳಿದಿದೆ. ನಮಗೆ ಭಾರತ ಎಂದರೆ ಏನು ಎಂದು ಹೇಳಬೇಕಾಗಿಲ್ಲ. ನಾವು ದೇಶವನ್ನು ಪ್ರತಿನಿಧಿಸುತ್ತೇವೆ ಮತ್ತು ದೇಶಕ್ಕಾಗಿ ಹೋರಾಡುತ್ತೇವೆ. ಹಾಗಾಗಿ ಇಂತಹ ಟ್ರೋಲರ್ಗಳಿಗೆ ಉತ್ತರಿಸುವ ಅಥವಾ ಪ್ರತಿಕ್ರಿಯಿಸುವ ಮೂಲಕ ನಾವು ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ” ಎಂದು ಶಮಿ ತಿಳಿಸಿದ್ದಾರೆ.
2013 ರಲ್ಲಿ ಶಮಿ ಪದಾರ್ಪಣೆ ಮಾಡಿದ ನಂತರ, 57 ಟೆಸ್ಟ್ ಪಂದ್ಯಗಳಲ್ಲಿ 3.26 ರ ಸರಸಾರಿಯಲ್ಲಿ 209 ವಿಕೆಟ್ ಗಳನ್ನು ಪಡೆದಿದ್ದಾರೆ. 79 ಏಕದಿನ ಪಂದ್ಯಗಳಲ್ಲಿ ಅವರು 5.62 ಸರಾಸರಿಯಲ್ಲಿ 147 ವಿಕೆಟ್ಗಳನ್ನು ಪಡೆದಿದ್ದಾರೆ ಮತ್ತು 17 ಟಿ-20 ಗಳಲ್ಲಿ 18 ವಿಕೆಟ್ಗಳನ್ನು ಪಡೆದಿದ್ದಾರೆ.