ಭಾರತ ಪುರುಷರ ಹಾಕಿ ತಂಡದ ಗೋಲ್ಕೀಪರ್ ಪಿಆರ್ ಶ್ರೀಜೇಶ್ ತಮ್ಮ ವೃತ್ತಿಜೀವನದಲ್ಲಿ 250 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಹಿರಿಮೆಗೆ ಪಾತ್ರರಾಗಿದ್ದಾರೆ.
ಈ ಸಂದರ್ಭದಲ್ಲಿ, ಶ್ರೀಜೇಶ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ತುಂಬಾ ಇಷ್ಟಪಡುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅವರ ಸಹ ಆಟಗಾರರು ಅವರನ್ನು ಅಭಿನಂದಿಸಿದ್ದಾರೆ. ಈ ಚಿತ್ರವನ್ನು ಹಂಚಿಕೊಂಡಿರುವ ಪಿಆರ್ ಶ್ರೀಜೇಶ್, ‘ನನ್ನ ಜೀವನದ 250 ದಿನಗಳು ನನ್ನ ದೇಶಕ್ಕಾಗಿ ನಾನು ಹಾಕಿ ಆಡಿದ್ದೇನೆ ಮತ್ತು ಇದನ್ನು ಸಾಧಿಸಲು ನಾನು 7780 ದಿನಗಳ ತರಬೇತಿಯನ್ನು ತೆಗೆದುಕೊಂಡಿದ್ದೇನೆ, ನಿಮ್ಮ ಬೆಂಬಲ ಮತ್ತು ವಿಶ್ವಾಸಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಶ್ರೀಜೇಶ್ ಅವರ ಈ ಚಿತ್ರಕ್ಕೆ ಹಾಕಿ ಅಭಿಮಾನಿಗಳು ನಿರಂತರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಮತ್ತು ಹಾಕಿ ಗೋಲ್ಕೀಪರ್ಗೆ ಧನ್ಯವಾದಗಳನ್ನು ಸಹ ಸಲ್ಲಿಸುತ್ತಿದ್ದಾರೆ.
33 ವರ್ಷದ ಆಟಗಾರ 2006 ರಿಂದ ಭಾರತಕ್ಕಾಗಿ ಹಾಕಿ ಆಡಲು ಪ್ರಾರಂಭಿಸಿದರು. ಶ್ರೀಜೇಶ್ ಅವರು ಶ್ರೀಲಂಕಾದಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಪದಾರ್ಪಣೆ ಮಾಡಿದರು.
ಅತ್ಯಂತ ಯಶಸ್ವಿ ವೃತ್ತಿಜೀವನದಲ್ಲಿ, ಶ್ರೀಜೇಶ್ ಅವರು 2013 ರ ಏಷ್ಯಾ ಕಪ್ ಮತ್ತು 2014 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಂದ್ಯಾವಳಿಯ ಅತ್ಯುತ್ತಮ ಗೋಲ್ಕೀಪರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ನಾಯಕನಾಗಿ, ಅವರು 2016 ರಲ್ಲಿ ಎಫ್ಐಹೆಚ್ ಪುರುಷರ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ಬೆಳ್ಳಿ ಮತ್ತು 2018 ರಲ್ಲಿ ಇದೇ ಪಂದ್ಯಾವಳಿಯಲ್ಲಿ ಮತ್ತೊಂದು ಬೆಳ್ಳಿ ಪದಕಕ್ಕೆ ಕಾರಣರಾಗಿದ್ದಾರೆ.
2018 ರ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕಕ್ಕೆ ಭಾರತವನ್ನು ಮುನ್ನಡೆಸಿದರು ಮತ್ತು ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತವು ಕಂಚಿನ ಪದಕವನ್ನು ಗೆಲ್ಲುವಲ್ಲಿ ಅವರ ಪ್ರದರ್ಶನವು ಪ್ರಮುಖ ಪಾತ್ರ ವಹಿಸಿತು. ಶ್ರೀಜೇಶ್ ಅವರನ್ನು ಭಾರತೀಯ ಹಾಕಿಯ ಗೋಡೆ ಎಂದು ಪರಿಗಣಿಸಲಾಗಿದೆ. ಇವರ ಸಾಧನೆಗೆ 2015 ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2017 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ. ಶ್ರೀಜೇಶ್ ಅವರಿಗೆ 2021 ರಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಸಹ ನೀಡಲಾಯಿತು.