Kapildev – ಒತ್ತಡ – ಖಿನ್ನತೆಗಳಿದ್ರೆ ಐಪಿಎಲ್ ಯಾಕೆ ಆಡ್ತಿರಿ ?
1983ರ ವಿಶ್ವಕಪ್ ಹೀರೋ ಕಪಿಲ್ ದೇವ್ ಮತ್ತೆ ಚರ್ಚೆಯಲ್ಲಿದ್ದಾರೆ. ಆಧುನಿಕ ಕ್ರಿಕೆಟ್ ಮತ್ತು ಕ್ರಿಕೆಟ್ ಆಟಗಾರರ ಬಗ್ಗೆ ನೇರವಾಗಿಯೇ ಟೀಕೆ ಮಾಡುವ ಕಪಿಲ್ ದೇವ್ ಆಟಗಾರರ ಮನಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ.
ಖಾಸಗಿ ಸಂಸ್ಥೆಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಕಪಿಲ್ ದೇವ್, ಇತ್ತೀಚಿನ ದಿನಗಳಲ್ಲಿ ಆಟಗಾರರು ಐಪಿಎಲ್ ನಲ್ಲಿ ಸಾಕಷ್ಟು ಒತ್ತಡಗಳಿರುತ್ತವೆ ಎಂದು ಹೇಳ್ತಾರೆ. ಆದ್ರೆ ನಾನು ಹೇಳುವುದು ಇಷ್ಟೇ. ನಿಮಗೆ ಅಷ್ಟೊಂದು ಒತ್ತಗಳಿದ್ರೆ ನೀವು ಆಡುವುದೇ ಬೇಡ ಎಂದು ಕಪಿಲ್ ದೇವ್ ಹೇಳ್ತಾರೆ.
ನಿಮಗೆ ಆಡುವ ಉತ್ಸಾಹವಿರಬೇಕು. ಆಗ ಯಾವುದೇ ಒತ್ತಡಗಳು ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಒತ್ತಡ ಎಂಬ ಸಾಕಷ್ಟು ಬಾರಿ ಕೇಳುತ್ತನೇ ಇರುತ್ತೇವೆ. ನೀವು ಆಡುವ ಉತ್ಸಾಹವನ್ನು ಹೊಂದಿದ್ರೆ ನಿಮಗೆ ಯಾವುದೇ ರೀತಿಯ ಒತ್ತಡಗಳು ಇರುವುದಿಲ್ಲ ಎಂದು ಕಪಿಲ್ ದೇವ್ ಹೇಳಿದ್ದಾರೆ
ಒತ್ತಡ – ಖಿನ್ನತೆ.. ಪ್ರೆಸರ್ – ಡಿಪ್ರೆಶನ್- ಇವು ಅಮೆರಿಕನ್ ಪದಗಳು. ಇದು ನನಗೆ ಯಾವುದು ಕೂಡ ಅರ್ಥವಾಗುತ್ತಿಲ್ಲ. ನಾನು ಒಬ್ಬ ರೈತ. ನಾನು ಖುಷಿಯಿಂದ ಆಡ್ತಾ ಇದ್ದೇವು. ಎಲ್ಲಿ ಸಂತಸವಿರುತ್ತದೆಯೋ ಅಲ್ಲಿ ಒತ್ತಡವಾಗಿರಲಿ, ಖಿನ್ನತೆಯಾಗಿರಲಿ ಇರುವುದಿಲ್ಲ ಎಂದು ಕಪಿಲ್ ದೇವ್ ಚರ್ಚೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಕಪಿಲ್ ದೇವ್ ಅವರ ಹೇಳಿಕೆಗೆ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಕಮೆಂಟ್ ಗಳು ಬಂದಿವೆ.
ಒಟ್ಟಿನಲ್ಲಿ ಕಪಿಲ್ ದೇವ್ ಹೇಳಿರುವುದು ಒಂದು ವಿಚಾರದಲ್ಲಿ ಸರಿಯಾಗಿಯೇ ಇದೆ. ಈ ಹಿಂದೆ ಕ್ರಿಕೆಟ್ ಆಟಗಾರರು ದಶಕಗಳ ಕಾಲ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಆಟಗಾರರಿಗೆ ಪದೇ ಪದೇ ವಿಶ್ರಾಂತಿಗಳನ್ನು ನೀಡಲಾಗುತ್ತಿದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಕಪಿಲ್ ದೇವ್ ಈ ರೀತಿ ಹೇಳಿಕೆ ನೀಡಿರಬಹುದು.