ಮಹಿಳಾ ಟೆನಿಸ್ (Womens Tennis) ಇತಿಹಾಸದಲ್ಲಿ ಸ್ಟೆಫಿ ಗ್ರಾಫ್, ಮಾರ್ಟಿನಾ ಹಿಂಗಿಸ್ ಹೀಗೆ ಕೆಲ ಹೆಸರುಗಳನ್ನು ಯಾರೂ ಮರೆಯುವುದಿಲ್ಲ . ಅದೇ ರೀತಿ ಸೆರೆನಾ ವಿಲಿಯಮ್ಸ್ (Serena Williams) ಹೆಸರೂ ಕೂಡ ಅಜರಾಮರ. ಫಿಟ್ನೆಸ್ ಹಾಗೂ ಅಗ್ರೆಸಿವ್ ಕ್ಯಾರೆಕ್ಟರ್ ಈಕೆಯ ಟ್ರೇಡ್ ಮಾರ್ಕ್. ಮಾರ್ಗರೆಟ್ ಕೋರ್ಟ್ ಮಹಿಳಾ ಟೆನಿಸ್ಗೆ ದಂತಕಥೆಯಾಗಿದ್ದರೆ, ಸೆರೆನಾ ವಿಲಿಯಮ್ಸ್ ಮಾದರಿ. ಈಕೆಯ ಆಟ, ನೋಟ ಮತ್ತು ಡ್ರೆಸ್ಸಿಂಗ್ ಸ್ಟೈಲ್ಗಳು ಸದಾ ಸುದ್ದಿಯಲ್ಲಿರುತ್ತಿದ್ದವು.
ಯುಎಸ್ ಓಪನ್ನಲ್ಲಿ (US Open) ಈ ಬಾರಿ ಸೆರೆನಾ ದೊಡ್ಡ ವಿಶ್ವಾಸ ಇಟ್ಟುಕೊಂಡಿದ್ದರು. ಟೆನಿಸ್ ತಾರೆಯ ಸುದೀರ್ಘ ವೃತ್ತಿಜೀವನ ಬಹುತೇಕ ಕೊನೆಗೊಂಡಿದೆ. ಯುಎಸ್ ಓಪನ್ನ ಮೂರನೇ ಸುತ್ತಿನಲ್ಲಿ ಅವರು ಆಸ್ಟ್ರೇಲಿಯಾದ ಆಟಗಾರ್ತಿ ಅಜ್ಲಾ ಟೊಮ್ಜಾನೊವಿಕ್ ವಿರುದ್ಧ 7-5, 6-7, 6-1 ಸೆಟ್ಗಳಿಂದ ಸೋಲುಕಿಂಡಿದ್ದಾರೆ. ಈ ಮೂಲಕ ಸೆರೆನಾ ಅವರ ವೃತ್ತಿಜೀವನಕ್ಕೆ ಪೂರ್ಣವಿರಾಮ ಬಿದ್ದಂತಾಗಿದೆ. 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಸೆರೆನಾ, ಈ ಹಿಂದೆ ಇದೇ ತನ್ನ ಕೊನೆಯ ಟೂರ್ನಿ ಎಂದು ಪ್ರಕಟಿಸಿದ್ದರು. ಹೀಗಾಗಿ ಸೆರೆನಾ ಮುಂದಿನ ಟೂರ್ನಿಗಳಲ್ಲಿ ಆಡುವುದು ಅನುಮಾನ.
ಸೆರೆನಾ ತನ್ನ ವೃತ್ತಿ ಬದುಕಿನಲ್ಲಿ 7 ಆಸ್ಟ್ರೇಲಿಯನ್ ಓಪನ್ (Australian Open), 3 ಫ್ರೆಂಚ್ ಓಪನ್ (French Opens), 7 ವಿಂಬಲ್ಡನ್ (Wimbolden, 6 ಯುಎಸ್ ಓಪನ್ ಗೆದ್ದಿದ್ದರು. ಇದರ ಜೊತೆಗೆ 14 ಡಬಲ್ಸ್ ಪ್ರಶಸ್ತಿಗಳನ್ನು (Doubles) ಕೂಡ ಗೆದ್ದಿದ್ದರು. ಸಿಡ್ನಿ, ಬೀಜಿಂಗ್ ಮತ್ತು ಲಂಡನ್ ಒಲಿಂಪಿಕ್ಸ್ನಲ್ಲಿ (Olympics) ಡಬಲ್ಸ್ನಲ್ಲಿ ಸ್ವರ್ಣ ಗೆದ್ದಿದ್ದರು. 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಸಿಂಗಲ್ಸ್ ಚಿನ್ನವನ್ನೂ ಗೆದ್ದಿದ್ದರು.
ಮಾರ್ಗರೆಟ್ ಕೋರ್ಟ್ 24ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದರು. ಸ್ಟೆಫಿ ಗ್ರಾಫ್ 22 ಪ್ರಶಸ್ತಿ ಗೆದ್ದು ದಾಖಲೆ ಮಾಡಿದ್ದರು. ಆದರೆ ಆಧುನಿಕ ಟೆನಿಸ್ನಲ್ಲಿ ಸೆರೆನಾ 23 ಪ್ರಶಸ್ತಿಗಳನ್ನು ಗೆದ್ದ ಏಕೈಕ ಆಟಗಾರ್ತಿಯಾಗಿದ್ದರು. ಅಚ್ಚರಿ ಅಂದರೆ ಅವರ ಹಿಂದಿರುವ ಆಟಗಾರ್ತಿಯರು 5ಕ್ಕಿಂತ ಹೆಚ್ಚು ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿಲ್ಲ. ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರಾಗಿರುವ ಸೆರೆನಾ ಆಟವನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುವುದು ಖಚಿತ.