ಗ್ರಹಚಾರ ಕೆಟ್ಟಾಗ ಹಗ್ಗ ಹಾವಾಗಿ ಕಡಿಯುತ್ತದೆ ಅನ್ನುವ ಮಾತಿದೆ. ಇಂಗ್ಲೆಂಡ್‌ನ (England) ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಾನಿ ಬೇರ್‌ಸ್ಟೋವ್ (Johny Bairstow) ಪಾಲಿಗೆ ಇದು ಅಕ್ಷರಶಃ ನಿಜವಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ECB) ಟಿ20 ವಿಶ್ವಕಪ್‌ಗೆ (T20 World Cup) ತಂಡ ಪ್ರಕಟಿಸಿ 24 ಗಂಟೆಗಳು ಕೂಡ ಕಳೆದಿಲ್ಲ. ಆದರೆ ಅದಾಗಲೇ ತಂಡದ ಟ್ರಂಪ್ ಕಾರ್ಡ್ ಆಟಗಾರ ಜಾನಿ ಬೇರ್ ಸ್ಟೋವ್ ಗಾಯಗೊಂಡು ವಿಶ್ವಕಪ್‌ನಿಂದ ಹೊರ ಬಿದ್ದಿದ್ದಾರೆ.
ಗಾಲ್ಫ್ ಆಟ ಆಡುವಾಗ ಜಾನಿ ಬೇರ್‌ಸ್ಟೋವ್ ಜಾರಿ ಬಿದ್ದು ಗಾಯಗೊಂಡಿದ್ದಾರೆ (Injured). ಈ ಗಾಯ ಫ್ರಾಕ್ಚರ್ ಸ್ವರೂಪದ್ದಾಗಿದ್ದು ಎಡಗಾಲಿನ ಶಸ್ತ್ರಚಿಕಿತ್ಸೆ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಮುಂದಿನ ಜನವರಿ ಅಥವಾ ಫೆಬ್ರವರಿ ತನಕ ಬೇರ್‌ಸ್ಟೋವ್ ಮೈದಾನಕ್ಕಿಳಿಯದಷ್ಟು ದೊಡ್ಡ ಗಾಯವಾಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ 3 ಟೆಸ್ಟ್ ಸೇರಿದಂತೆ ಮುಂಬರುವ ಎಲ್ಲಾ ಟೂರ್ನಿ ಹಾಗೂ ಸರಣಿಗಳನ್ನು ಬೇರ್ ಸ್ಟೋವ್ ಮಿಸ್ ಮಾಡಿಕೊಳ್ಳಲಿದ್ದಾರೆ.
ಜಾನಿ ಬೇರ್‌ಸ್ಟೋವ್ ಬದಲಿಗೆ ಇಂಗ್ಲೆಂಡ್ ತಂಡ ಬೆನ್ ಡಕೆಟ್ (Ben Ducket) ಅವರನ್ನು ಬದಲಿ ಆಟಗಾರರನ್ನಾಗಿ ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ಬೇರ್‌ಸ್ಟೋವ್‌ಗೆ ಆಗಿರುವ ಗಾಯ ಇಂಗ್ಲೆಂಡ್‌ಗೆ ದೊಡ್ಡ ನಷ್ಟವಾಗಿದೆ. ಕಳೆದ ಒಂದು ವರ್ಷದಿಂದ ಬೇರ್‌ಸ್ಟೋವ್ ಟೆಸ್ಟ್ (Test), ಏಕದಿನ (ODI) ಹಾಗೂ T20 ಪಂದ್ಯಗಳಲ್ಲಿ ಉತ್ತಮ ಫಾರ್ಮ್ ಮೂಲಕ ಅದ್ಭುತ ಆಟ ಆಡುತ್ತಿದ್ದಾರೆ. ಮಧ್ಯಮ ಸರದಿಗೆ ಸ್ಪೋಟಕ ಟಚ್ ಜೊತೆಗೆ ಸ್ಥಿರತೆಯನ್ನು ಬೇರ್‌ಸ್ಟೋವ್ ತಂದುಕೊಟ್ಟಿದ್ದರ.
ಒಟ್ಟಿನಲ್ಲಿ ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಬೇರ್‌ಸ್ಟೋವ್ ಅದಕ್ಕಾಗಿ ಚುಟುಕು ವಿಶ್ವಕಪ್‌ನಂತಹ ಮಹತ್ವದ ಟೂರ್ನಿಯನ್ನೇ ಕಳೆದುಕೊಂಡಿದ್ದಾರೆ. ಒಟ್ಟಿನಲ್ಲಿ ಬೇರ್‌ಸ್ಟೋವ್‌ಗೆ ಆದಷ್ಟೇ ನಷ್ಟ ಇಂಗ್ಲೆಂಡ್ ತಂಡಕ್ಕೂ ಆಗಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.