Sanju Samson ಬೆನ್ನಿಗೆ ನಿಂತ ಪಾಕ್ ಆಟಗಾರ
ಸಾಮಾನ್ಯ ಜನರಿಂದ ಹಿಡಿದು ಮಾಜಿ ಕ್ರಿಕೆಟಿಗರವರೆಗೂ ಕೂಡ ಸಂಜು ಸ್ಯಾಮ್ಸನ್ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸಂಜು ಅವರನ್ನು ತಂಡದ ಪ್ಲೇಯಿಂಗ್ ಇಲೆವೆನ್ ನಿಂದ ಕೈ ಬಿಡಲಾಯಿತು. ಇದಕ್ಕಾಗಿ ಅಭಿಮಾನಿಗಳು ಕಿಡಿ ಕಾರಿದ್ದಾರೆ. ಈ ಸಾಲಿಗೆ ಇನ್ನೋರ್ವ ಆಟಗಾರ ಸೇರ್ಪಡೆಯಾಗಿದ್ದಾರೆ. ಅವರು ಬೇರೆ ದೇಶದವು ಎನ್ನುವುದು ವಿಶೇಷ.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಿನೀಶ್ ಕನೇರಿಯಾ ಈ ಬಗ್ಗೆ ಮಾತನಾಡಿದ್ದಾರೆ. ಇದೇ ರೀತಿ ಅಂಬಟಿ ರಾಯುಡು ಅವರ ವೃತ್ತಿಜೀವ ಕೊನೆಗೊಂಡಿತು ಎಂದು ಹೇಳಿದರು. ಕನೇರಿಯಾ ಇದನ್ನು ಆಂತರಿಕ ರಾಜಕೀಯ ಎಂದು ಕರೆದಿದ್ದಾರೆ.
ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕನೇರಿಯಾ, “ಅಂಬಟಿ ರಾಯುಡು ಅವರ ವೃತ್ತಿಜೀವನವೂ ಇದೇ ರೀತಿಯಲ್ಲಿ ಕೊನೆಗೊಂಡಿತು. ಅವರು ಸಹ ಸಾಕಷ್ಟು ರನ್ ಗಳಿಸಿದರು. ಆದರೆ ಅವರಿಂದಲೂ ಏನೋ ತಪ್ಪಾಗಿದೆ ಎನ್ನೋದೆ ತಿಳಿಯುತ್ತಿಲ್ಲ. ಬಿಸಿಸಿಐ ಮತ್ತು ಆಯ್ಕೆ ಸಮಿತಿಯೊಳಗಿನ ರಾಜಕೀಯವೇ ಇದಕ್ಕೆ ಕಾರಣ” ಎಂದು ತಿಳಿಸಿದ್ದಾರೆ.
“ಆಟಗಾರನು ಎಷ್ಟು ಸಹಿಸಿಕೊಳ್ಳಬಲ್ಲನು. ಅವರು ಈಗಾಗಲೇ ಸಾಕಷ್ಟು ಸಹಿಸಿಕೊಂಡಿದ್ದಾರೆ. ಮತ್ತು ಅವಕಾಶ ಸಿಕ್ಕಲ್ಲೆಲ್ಲಾ ಸ್ಕೋರ್ ಮಾಡುತ್ತಾರೆ. ನಾವು ಉತ್ತಮ ಆಟಗಾರನನ್ನು ಕಳೆದುಕೊಳ್ಳಬಹುದು ಏಕೆಂದರೆ ಅವರು ತಂಡದಲ್ಲಿ ಆಯ್ಕೆ ಮತ್ತು ಆಯ್ಕೆಯ ಕಿರುಕುಳವನ್ನು ಎದುರಿಸಬೇಕಾಗುತ್ತದೆ” ಎಂದಿದ್ದಾರೆ.
ಸಂಜು ಸ್ಯಾಮ್ಸನ್ ಅವರಿಗೆ ಅವಕಾಶಗಳು ಸಾಕಷ್ಟು ಸಿಗುತ್ತಿಲ್ಲ ಎಂಬುದು ಅಭಿಮಾನಿಗಳ ಬಹುದಿನದ ಬೇಡಿಕೆ. ರಿಷಭ್ ಪಂತ್ ಏಕದಿನ ಹಾಗೂ ಟಿ-20 ಸರಣಿಯಲ್ಲಿನ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಅವರಿಗೆ ಇನ್ನು ಹೆಚ್ಚು ಅವಕಾಶ ನೀಡಬಾರದು ಎಂದು ಅಭಿಮಾನಿಗಳು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.