ಭಾರತದ ತಾರಾ ಶಟ್ಲರ್ ಲಕ್ಷ್ಯ ಸೇನ್ ಬ್ಯಾಡ್ಮಿಂಟನ್ ವಿಶ್ವ ರಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನ ಏರಿಕೆ ಪಡೆದು ವೃತ್ತಿ ಬದುಕಿನ ಶ್ರೇಷ್ಠ 6ನೇ ಸ್ಥಾನ ಪಡೆದಿದ್ದಾರೆ.
ಕಿದಂಬಿ ಶ್ರೀಕಾಂತ್ ಹಾಗೂ ಎಚ್.ಎಸ್.ಪ್ರಣಾಯ್ ಕ್ರಮವಾಗಿ 11 ಮತ್ತು 12ನೇ ಸ್ಥಾನದಲೇ ಉಳಿದಿದ್ದಾರೆ. 21 ವರ್ಷದ ಕೆ.ಶ್ರೀಕಾಂತ್ 23 ಟೂರ್ನಿಗಳಿಂದ 75,024 ಅಂಕಗಳನ್ನು ಸಂಪಾದಿಸಿದ್ದಾರೆ.
ಮಹಿಳಾ ವಿಭಾಗದಲ್ಲಿ ತ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಇದೇ ಮೊದಲ ಬಾರಿಗೆ ಟಾಪ್ 20ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಜೋಡಿ 19ನೇ ಸ್ಥಾನ ಪಡೆದಿದೆ.
ತಾರಾ ಆಟಗಾರ್ತಿ ಪಿ.ವಿ.ಸಿಂಧು 6ನೇ ಸ್ಥಾನ ಕಾಯ್ದುಕೊಂಡಿದ್ದಾರೆ.
ಫ್ರೆಂಚ್ ಹಾಗೂ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಪುರುಷರ ಡಬಲ್ಸ್ ವಿಭಾಗದಲ್ಲಿ 7ನೇ ಸ್ಥಾನದಲೇ ಮುಂದುವರೆದಿದ್ದಾರೆ.
ಮಿಶ್ರ ಡಬಲ್ಸ್ ನಲ್ಲಿ ಇಶಾನ್ ಭಟನಗರ್ ಮತ್ತು ತನೀಶಾ ಕ್ರಾಸ್ಟೊ 24ನೇ ಸ್ಥಾನದಲ್ಲೆ ಉಳಿದಿದ್ದಾರೆ.