Sanjay Bangar – ಪಾಕ್ ಗಿಂತ ಟೀಮ್ ಇಂಡಿಯಾ ಕಂಪ್ಲೀಟ್ ಟೀಮ್- ಸಂಜಯ್ ಬಂಗಾರ್

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯ ಅಕ್ಟೋಬರ್ 23ರಂದು ನಡೆಯಲಿದೆ. ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಸೂಪರ್ -12ರ ಮೊದಲ ಪಂದ್ಯದಲ್ಲಿ ಇಂಡೋ – ಪಾಕ್ ಫೈಟ್ ನಡೆಯಲಿದೆ. ಈ ಪಂದ್ಯ ದೀಪಾವಳಿಯಂದೇ ನಡೆಯುತ್ತಿರುವುದರಿಂದ ಕ್ರಿಕೆಟ್ ಅಭಿಮಾನಿಗಳಿಗೆ ಡಬಲ್ ಸಡಗರ.
ಮೆಲ್ಬರ್ನ್ ಅಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯ ಎರಡು ತಂಡಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಇಲ್ಲಿ ಸೋಲು ಅನ್ನೋ ಪ್ರಶ್ನೇಯೇ ಇರುವುದಿಲ್ಲ. ಏನಿದ್ರೂ ಗೆಲುವೇ ಮೂಲ ಮಂತ್ರವಾಗಿರುತ್ತದೆ. ಹೀಗಾಗಿ ಈ ಪಂದ್ಯವನ್ನು ಇಡೀ ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿದೆ
ಇನ್ನೊಂದೆಡೆ ಭಾರತ ಮತ್ತು ಪಾಕ್ ನಡುವಿನ ಪಂದ್ಯದ ಬಗ್ಗೆ ವಿಮರ್ಶೆ ಮತ್ತು ಚರ್ಚೆಗಳು ಈಗಿನಿಂದಲೇ ಶುರುವಾಗಿದೆ. ಈ ಬಗ್ಗೆ ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರು ತನ್ನ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಉತ್ಸಾಹ- ಕುತೂಹಲ ಹೆಚ್ಚಿರುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ ಈ ಬಾರಿಯ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಧನತ್ಮಾಕವಾಗಿದೆ. ಆದ್ರೆ ಬೌಲರ್ ಗಳು ಪಾಠ ಕಲಿಯಬೇಕಿದೆ. ಇದಕ್ಕಾಗಿ ಕೆಲವು ದಿನಗಳ ಸಮಯವೂ ಇದೆ. ತಮ್ಮ ಯೋಚನೆ ಮತ್ತು ಯೋಜನೆಗಳನ್ನು ತುಸು ಬದಲಾವಣೆ ಮಾಡಿಕೊಳ್ಳಬೇಕು ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ.
ಏಷ್ಯಾಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದು, ಸಮಬಲದ ಪ್ರದರ್ಶನ ನೀಡಿದೆ. ಆದ್ರೂ ರೋಹಿತ್ ಬಳಗ ಕಂಪ್ಲೀಟ್ ಟೀಮ್ ಆಗಿದೆ. ಟೀಮ್ ಇಂಡಿಯಾ ಒಬ್ಬ ಆಟಗಾರನ ಮೇಲೆ ಅವಲಂಬಿತವಾಗಿಲ್ಲ. ಅದರಲ್ಲೂ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗದ ಬಗ್ಗೆ ಹೇಳುವುದೇ ಬೇಡ. ಆದ್ರೆ ಪಾಕ್ ತಂಡ ಮುಖ್ಯವಾಗಿ ಬಾಬರ್ ಅಝಮ್ ಮತ್ತು ಮಹಮ್ಮದ್ ರಿಜ್ವಾನ್ ಅವರನ್ನು ಹೆಚ್ಚು ನೆಚ್ಚಿಕೊಂಡಿದೆ. ಆದ್ರೆ ಟೀಮ್ ಇಂಡಿಯಾ ಹಾಗಲ್ಲ ಎಂದು ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಪಾಕಿಸ್ತಾನ ವೇಗದೂತರನ್ನು ಹೆಚ್ಚು ನಂಬಿಕೊಂಡಿದೆ. ಆದ್ರೆ ಟೀಮ್ ಇಂಡಿಯಾದಲ್ಲಿ ವೇಗದೂತರು ಇಲ್ಲ. ಆದ್ರೆ ಕೌಶಲ್ಯವನ್ನೊಳಗೊಂಡ ಬೌಲರ್ ಗಳಿದ್ದಾರೆ. ಇದು ತಂಡದ ಸಮತೋಲನವನ್ನು ಕಾಯ್ದುಕೊಳ್ಳಲಿದೆ ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ.
ಒಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಈ ಬಾರಿಯ ಟಿ-20 ವಿಶ್ವಕಪ್ ನ ಹೈವೋಲ್ಟೇಜ್ ಪಂದ್ಯವಾಗಿದೆ.