Sandeep Lamichhane ನೇಪಾಳ ತಂಡದ ಮಾಜಿ ನಾಯಕನ ಬಂಧನ!!!
ಬಾಲಕಿ ಮೇಲೆ ಅತ್ಯಾಚಾರ ಆರೋಪ ಸಂಬಂಧ ನೇಪಾಳ ಪುರುಷರ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಾಮಿಚಾನ್ನೆಯನ್ನು ಪೊಲೀಸರು ಕಾಠ್ಮಂಡುವಿನಲ್ಲಿ ಬಂಧಿಸಿದ್ದಾರೆ.
ಸಂದೀಪ್ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಪೊಲೀಸರು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಕಳೆದ ತಿಂಗಳು ಕಾಠ್ಮಂಡುವಿನಲ್ಲಿ ಸಂದೀಪ್ ಅತ್ಯಾಚಾರ ಮಾಡಿದ ಆರೋಪ ಭಾರೀ ಸುದ್ದಿಯಲ್ಲಿತ್ತು. 22 ವರ್ಷದ ಸಂದೀಪ್ ಕೆರೆಬಿಯನ್ ಪ್ರೀಮಿಯರ್ ಲೀಗ್ ಆಡುತ್ತಿದ್ದರು. ಇದೀಗ ಆರೋಪ ಎದುರಿಸಲು ತವರಿಗೆ ಮರಳಿರುವುದಾಗಿ ತಿಳಿಸಿದ್ದಾರೆ.
ಸಂದೀಪ್ ಅವರನ್ನು ನೇಪಾಳ ಕ್ರಿಕೆಟ್ ಅಮಾನತು ಮಾಡಿದೆ. ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಾಮಿಚಾನ್ನೆ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಕರೆದೊಯ್ದರು.
ಬಂಧನಕ್ಕೂ ಮುನ್ನ ಲಾಮಿಚಾನ್ನೆ ಫೇಸ್ ಬುಕ್ ನಲ್ಲಿ ತಮ್ಮ ಮೇಲಿನ ಆರೋಪದ ವಿರುದ್ಧ ಕಾನೂನು ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ಈ ಪ್ರಕರಣವನ್ನು ಬೇಗ ವಿಚಾರಣೆ ಮುಗಿಸಬೇಕೆಂದು ಬರೆದುಕೊಂಡಿದ್ದಾರೆ.
ಬಂಧನಕ್ಕೂ ಮುನ್ನ ಲಾಮಿಚಾನ್ನೆ ಕಾಠ್ಮಂಡುವಿಗೆ ಬರುತ್ತಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ. ನಿಮ್ಮ ಬೆಂಬಲ, ನಂಬಿಕೆ ಮತ್ತು ಟೀಕೆಗಳನ್ನು ತೆಗೆದುಕೊಂಡಿದ್ದು ಇದು ನನಗೆ ಆತ್ಮವಿಶ್ವಾಸ ತುಂಬಲಿದೆ ಎಂದು ಬರೆದುಕೊಂಡಿದ್ದಾರೆ.